ಸಾಮಾಜಿಕ ತಲ್ಲಣಗಳಿಗೆ ಶಾಂತಿ, ನೆಮ್ಮದಿ ತಂದವರು ಬಸವಣ್ಣ: ಡಾ.ಗುರುಬಸವ ಸ್ವಾಮೀಜಿ

| Published : Feb 10 2024, 01:53 AM IST / Updated: Feb 10 2024, 04:00 PM IST

ಸಾಮಾಜಿಕ ತಲ್ಲಣಗಳಿಗೆ ಶಾಂತಿ, ನೆಮ್ಮದಿ ತಂದವರು ಬಸವಣ್ಣ: ಡಾ.ಗುರುಬಸವ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರ ಮೇರು ವ್ಯಕ್ತಿತ್ವ ಪರಿಗಣಿಸಿದ ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಸಂತಸ ತಂದಿದೆ. ಆರ್ಥಪೂರ್ಣವಾದ ವಚನಕಾರರ ಸತ್ಯ, ಶುದ್ದ, ಕಾಯಕ, ಅರಿವು, ಆಚಾರ, ವಿವೇಕದ ಮೂಲಕ ತಾತ್ವಿಕ ತಳಪಾಯದ ಮೇಲೆ ಸಾತ್ವಿಕ ಸಮಾಜವನ್ನು ನಿರ್ಮಾಣ ಮಾಡಿದವರೇ ಬಸವಾದಿ ಶಿವಶರಣರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿಯೇ ಮಿಂಚಿನ ಸಂಚಲನ ಮೂಡಿಸಿದವರು 12ನೇ ಶತಮಾನದ ಬಸವಾದಿ ಶಿವ ಶರಣರ ಪವಿತ್ರವಾದ ಮನೋಭೂಮಿಯಲ್ಲಿ ಅರಳಿದ ಜ್ಞಾನ ಕುಸುಮಗಳೇ ವಚನಗಳು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ನುಡಿದರು.

ಪಟ್ಟಣದ ಹೊರ ವಲಯದಲ್ಲಿನ ಶ್ರೀ ಬಸವ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶುಕ್ರವಾರ ಪಾಂಡೋಮಟ್ಟಿ ವಿರಕ್ತ ಮಠ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ವಚನಗಾಯನ ಮತ್ತು ನೃತ್ಯ ರೂಪಕ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಉದ್ಘಾಟನೆ ನೆರವೇರಿಸಿ ಮಾತನಾಡಿ ಶರಣರು ಅಂತರಂಗದ ಬದುಕನ್ನು ಅನುಭಾವ ನೆಲೆಯಲ್ಲಿ ತೆರೆದಿಟ್ಟ, ಬರೆದಿಟ್ಟ ವಚನ ಸಾಹಿತ್ಯ ಸರಳ, ಸುಂದರ, ಹಾಗೂ ಸಾಮಾಜಿಕ ತಲ್ಲಣಗಳಿಗೆ ಶಾಂತಿ, ನೆಮ್ಮದಿ, ಸಂಸ್ಕಾರದ ಬದುಕನ್ನು ಜಗತ್ತಿಗೆ ನೀಡಿದವರು ವಿಶ್ವಗುರು ಬಸವಣ್ಣ ಎಂದರು.

ಬಸವಣ್ಣನವರ ಮೇರು ವ್ಯಕ್ತಿತ್ವ ಪರಿಗಣಿಸಿದ ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಸಂತಸ ತಂದಿದೆ. ಆರ್ಥಪೂರ್ಣವಾದ ವಚನಕಾರರ ಸತ್ಯ, ಶುದ್ದ, ಕಾಯಕ, ಅರಿವು, ಆಚಾರ, ವಿವೇಕದ ಮೂಲಕ ತಾತ್ವಿಕ ತಳಪಾಯದ ಮೇಲೆ ಸಾತ್ವಿಕ ಸಮಾಜವನ್ನು ನಿರ್ಮಾಣ ಮಾಡಿದವರೇ ಬಸವಾದಿ ಶಿವಶರಣರು.

 ಕನ್ನಡಿಗರ ವಿಶೇಷತೆ ಹಾಗೂ ಹೆಮ್ಮೆಯ ವ್ಯಕ್ತಿತ್ವದ ಪ್ರಬುದ್ಧ ವ್ಯಕ್ತಿ ವಿಶ್ವಗುರು ಬಸವಣ್ಣನವರಾಗಿದ್ದು ಇವರು ವಿಶ್ವಗುರು ಎಂಬ ಬಿರುದು ಪಡೆದು ವಿಶ್ವದ ಮೂಲೆ-ಮೂಲೆಗೆ ಸಮ-ಸಮಾಜದ ಪರಿಕಲ್ಪನೆ ತೋರಿಸಿಕೊಟ್ಟ ಮಹಾನ್ ಚೇತನರು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಮಾತನಾಡಿ ವಚನಕಾರರ ಸಂದೇಶಗಳು ಮತ್ತು ಮೌಲ್ಯಗಳು ಕಾಯಕ ಬದುಕಿನಲ್ಲಿ ಶಾಂತಿ ನೆಮ್ಮದಿ ಆರೋಗ್ಯಕರ ಸಮಾಜ ನಿರ್ಮಿಸಲು ಬಸವಣ್ಣನವರ ಕೊಡುಗೆ ಅಪಾರವಾದ್ದು, 12ನೇ ಶತಮಾನದಲ್ಲಿದ್ದ ಜಾತಿ ತಾರತಮ್ಯದ ವಿರುದ್ಧ ಹೋರಾಡಿ ಸಮ ಸಮಾಜದ ನಿರ್ಮಿಸಿದವರು ಎಂದರು.

ತಾಪಂ ಕಾರ್ಯನಿರ್ವಾಣಾಧಿಕಾರಿ ಬಿ.ಕೆ.ಉತ್ತಮ ಮಾತನಾಡಿ 12ನೇ ಶತಮನದ ಕನ್ನಡದ ಒಬ್ಬ ತತ್ವಜ್ಞಾನಿ ಬಸವೇಶ್ವರರಾಗಿದ್ದು ಇವರು ಬಿಜ್ಜಳ ರಾಜನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ ಮೂಢನಂಬಿಕೆಗಳ ವಿರುದ್ಧ ಹೋರಾಡಿದವರಾಗಿದ್ದು ಅನುಭವ ಮಂಟಪ ಸ್ಥಾಪಿಸಿ ಎಲ್ಲ ವರ್ಗದ ಜನರಿಗೂ ಮುಕ್ತ ಅವಕಾಶಗಳ ನೀಡಿ ತಮ್ಮ ಜೀವನದ ಅನುಭವಗಳ ವಚನಗಳ ಮೂಲಕ ಬರೆದಿಟ್ಟು ಸಮಾಜದ ಪ್ರಗತಿಗೆ ಸೂಕ್ತ ಮಾರ್ಗ ಹಾಕಿಕಟ್ಟವರಾಗಿದ್ದು ಅಂತಹ ಶರಣರ ವಿಚಾರಧಾರೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವಲ್ಲಿ ಪಾಂಡೋಮಟ್ಟಿ ವಿರಕ್ತ ಮಠದ ಶ್ರೀಗಳು ಮಾಡುತ್ತೀರುವ ಕಾರ್ಯಗಳ ಬಗ್ಗೆ ಪ್ರಶಂಶಿಸಿದರು.

ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್.ಶಂಕರಪ್ಪ, ಶಿಕ್ಷಕ ಬೊಮ್ಮೇನಹಳ್ಳಿ ಮಹೇಶ್ವರಪ್ಪ, ಪರಮೇಶ್ವರಪ್ಪ, ಕ.ಸಾ.ಪ ಮಾಜಿ ಅಧ್ಯಕ್ಷ ಎಂ.ಯು.ಚನ್ನಬಸಪ್ಪ, ಬಿ.ಯು.ಕುಬೇರಪ್ಪ, ಮುಖ್ಯ ಶಿಕ್ಷಕ ನಿಜಲಿಂಗಪ್ಪ, ಲಿಂಗರಾಜ್, ರವಿಕುಮಾರ್, ಸಂದೇಶ್, ಕಾಕನೂರು ಎಂ.ಬಿ.ನಾಗರಾಜ್ ಉಪಸ್ಥಿತರಿದ್ದರು.