ಸಾರಾಂಶ
ಹೊಸಪೇಟೆ: ರಾಜ್ಯ ಸರ್ಕಾರ ಬಸವಣ್ಣರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಭಾನುವಾರ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದು ಪ್ರಸಿದ್ಧಿಯಾದ ತುಮಕೂರಿನ ಲಿಂ. ಡಾ. ಶಿವಕುಮಾರ ಸ್ವಾಮಿಗಳ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.
ಈ ವೇಳೆ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಕೊಟ್ಟೂರು ಬಸವಲಿಂಗ ಸ್ವಾಮಿಗಳು ಮಾತನಾಡಿ, ಮಹಾನ್ ಮಾನವತಾವಾದಿ, ವಿಶ್ವಗುರು ಬಸವೇಶ್ವರ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿರುವುದು ಹರ್ಷ ತಂದಿದೆ. ಬಸವಣ್ಣನವರ ಆಶಯವನ್ನು ಉಳಿಸಬೇಕಿದೆ ಎಂದರು.ಮುಖಂಡರಾದ ಕೆ.ಬಿ. ಶ್ರೀನಿವಾಸ ರೆಡ್ಡಿ, ಗೊಗ್ಗ ಚೆನ್ನ ಬಸವರಾಜ, ಕೋರಿ ಶೆಟ್ಟಿ ಲಿಂಗಣ್ಣ, ಎಲ್. ಬಸವರಾಜ, ಆರ್.ಪಿ. ಸಂತೋಷ, ಕೆ. ಕೊಟ್ರೇಶ್, ಮೃತ್ಯುಂಜಯ ರುಮಾಲೆ, ಸೋಮಶೇಖರ್, ಡಾ. ಮಹಾಬಲೇಶ ರೆಡ್ಡಿ, ಗುಜ್ಜಲ ನಾಗರಾಜ, ನಿಂಬಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್, ಅಶ್ವಿನ್ ಕೊತ್ತಂಬರಿ, ಚಂದ್ರಶೇಖರಯ್ಯ, ಇಟಗಿ ಸಂಗಪ್ಪ, ಮೆಟ್ರಿ ಮಲ್ಲಿಕಾರ್ಜುನ, ಚಂದ್ರಶೇಖರ್, ವಿಜಯಕುಮಾರ್, ಯು. ಪಂಪಾಪತಿ, ಮಲ್ಲೇಶಪ್ಪ, ಚಿದಾನಂದಪ್ಪ, ಓಪ್ಪತ್ತಪ್ಪ, ಗಂಗಡಿಶೆಟ್ಟಿ ಸತೀಶ್ ಓಂ.ಎಂ. ಮಲ್ಲಿಕಾರ್ಜುನ, ಎಕಾಂಬರೇಶ, ಎಂ.ಎಂ. ತಿಪ್ಪೇಸ್ವಾಮಿ, ಕಿಚಡಿ ಕೊಟ್ರೇಶ್, ಡಿ.ಸಿ. ಚಂದ್ರಶೇಖರ್, ವಿಶ್ವನಾಥ ಕೌತಾಳ್, ತಿಪ್ಪೇಸ್ವಾಮಿ, ರೇವಣಸಿದ್ದಪ್ಪ, ಗೌಳಿ ನಾಗರಾಜ, ಲೇಪಾಕ್ಷಿ ಜವಳಿ, ಪ್ರಮೋದ್ ಪುಣ್ಯ ಮೂರ್ತಿ, ತಾರಿಹಳ್ಳಿ ಹನುಮಂತಪ್ಪ, ಭರತ ಕುಮಾರ್, ಪ್ರಶಾಂತ್, ಮಂಜುನಾಥ, ಲಿಂಗಣ್ಣ ನಾಯಕ, ಯೋಗಲಕ್ಷ್ಮೀ, ಕವಿತಾ ನಾಯಕ, ರಷೀದಾ ಬಾನು, ಮಂಜುಳಾ ಮತ್ತಿತರರಿದ್ದರು.