ಕನ್ನಡಪ್ರಭ ವಾರ್ತೆ ಗುಬ್ಬಿ
ಸಮಾಜದಲ್ಲಿ ಸಮಾನತೆಗೆ ಒತ್ತು ಕೊಟ್ಟು ಅದನ್ನು ಜಾರಿಗೆ ತರಲು ಯತ್ನಿಸಿದ ಮಹಾನ್ ಪುರುಷ ಬಸವಣ್ಣ, ಅವರ ಸಪ್ತ ಸೂತ್ರಗಳನ್ನು ನಾವೆಲ್ಲರೂ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಪಟ್ಟಣದ ಹೊರವಲಯದ ಹೇರೂರು ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಬಸವತತ್ವ ಚಿಂತನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಾತ್ಮರ ಜಯಂತಿಗಳನ್ನು ನಾವೆಲ್ಲರೂ ಮಾಡಿಕೊಂಡು ಬರುತ್ತಿದ್ದೇವೆ, ಬಸವಣ್ಣನವರು ಇಡೀ ಜಗತ್ತಿಗೆ ಒಬ್ಬ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
ಬೆಟ್ಟದಹಳ್ಳಿ ಗವಿಮಠ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಇಂದು ನಡೆಯುವ ಕಾರ್ಯಕ್ರಮವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಎಲ್ಲರೂ ಸಂಘಟಿತರಾಗಿ ಕಾರ್ಯಕ್ರಮವನ್ನು ರೂಪಿಸಿರುವುದು ಒಗ್ಗಟಿನ ಸಂಕೇತವಾಗಿದೆ. ಬಸವಣ್ಣ ಶರಣರ ವಚನಗಳು ಕೇಳುವುದಕ್ಕೆ ಅಲ್ಲ, ಹೇಳುವುದಕ್ಕೆ ಮತ್ತು ಅದರ ಸಾರವನ್ನು ಪ್ರತಿಯೊಬ್ಬರು ಪಾಲಿಸಬೇಕು. ದಾಸೋಹ ತತ್ವದ ತಳಹದಿಯ ಮೇಲೆ ಧೈರ್ಯದಿಂದ ಕಾರ್ಯಕ್ರಮಗಳನ್ನು ಮಾಡಬೇಕು. ಬಸವಣ್ಣನ ತತ್ವಗಳನ್ನು ಅಳವಡಿಸಿಕೊಂಡು ವೀರಶೈವರು ತಮ್ಮ ತನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರುಮಾಜಿ ಸಂಸದ ಜಿ.ಎಸ್.ಬಸವರಾಜು, ಬಸವಧಾಮದ ಬಸವೇಶ್ವರ ಮಾತಾಜಿ, ಬಿಜೆಪಿ ಮುಖಂಡ ಎಸ್.ಡಿ ದಿಲೀಪ್ ಕುಮಾರ್, ಸಾಗರನಹಳ್ಳಿ ನಟರಾಜು, ಚಂದ್ರಶೇಖರ್ ಬಾಬು, ಚಾಲುಕ್ಯ ಆಸ್ಪತ್ರೆಯ ಡಾ. ನಾಗಭೂಷಣ್, ವಡೇಹಳ್ಳಿ ಮಠದ ಶ್ರೀ ಗೋಸಲ ಚೆನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ, ತೊರೆಮಠದ ಅಟವೀ ಚನ್ನಬಸವ ಸ್ವಾಮೀಜಿಗಳು ಮಾತನಾಡಿದರು. ಹೊಳಲ್ಕೆರೆ ಉಪನ್ಯಾಸಕ ಡಾ.ಮಂಜುನಾಥ್, ಬಸವ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಎಸ್. ಮಂಜುನಾಥ್, ಎನ್.ಸಿ ಪ್ರಕಾಶ್, ಎಂ. ಸಿ ಹಿತೇಶ್, ರುದ್ರೇಶ್, ಮಲ್ಲಿಕಾರ್ಜುನ್, ಸಂಗಪ್ಪ, ಆರ್.ಬಿ.ಜಯಣ್ಣ, ಜಿ.ಆರ್.ಶಿವಕುಮಾರ್, ಚನ್ನಶೇಟ್ಟಿಹಳ್ಳಿ ಯತೀಶ್, ಉಮೇಶ್, ಯತೀಶ್, ಪಾಲನೆತ್ರ, ದಿವ್ಯಪ್ರಕಾಶ್, ವಿಶ್ವನಾಥ್, ಗಂಗಾಧರಯ್ಯ, ಗುರು, ರವೀಶ್, ಹೊಸಹಳ್ಳಿ ಗಿರೀಶ್, ಭಾರತಿಹಿತೇಶ್, ಯಶೋಧಜಯಣ್ಣ, ಸೌಮ್ಯ ನಂದೀಶ್, ಶಿಕ್ಷಕರ ಸಂಘದ ನಿರ್ದೇಶಕಿ ಸಿಂಧು ಹಾಗೂ ಅಖಿಲಭಾರತ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಬಸವ ಜಯಂತಿ ಆಚರಣೆ ಸಮಿತಿ, ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಶಿವಬಸವ ನೌಕರರ ಸೌಹಾರ್ದ ಸಹಕಾರಿ ಬ್ಯಾಂಕ್ ಪದಾಧಿಕಾರಿಗಳು ಮತ್ತಿತರರು ಇದ್ದರು.