ಜಾತಿ ವ್ಯವಸ್ಥೆ ಹೋಗಲು ಬಸವಣ್ಣರ ಆದರ್ಶ ಪಾಲಿಸಿ

| Published : Feb 16 2025, 01:48 AM IST

ಜಾತಿ ವ್ಯವಸ್ಥೆ ಹೋಗಲು ಬಸವಣ್ಣರ ಆದರ್ಶ ಪಾಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನನ್ನು ಜಾತಿ ಆಧಾರದಲ್ಲಿ ಗುರುತಿಸುವಂತ ಸ್ಥಿತಿ ದೇಶದಲ್ಲಿ ಎದುರಾಗಿದೆ. ಜಾತಿ ವ್ಯವಸ್ಥೆ ಹೋಗಬೇಕಾದರೆ ಬಸವಣ್ಣನ ಆದರ್ಶಗಳು ಅಗತ್ಯವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಮನುಷ್ಯನನ್ನು ಜಾತಿ ಆಧಾರದಲ್ಲಿ ಗುರುತಿಸುವಂತ ಸ್ಥಿತಿ ದೇಶದಲ್ಲಿ ಎದುರಾಗಿದೆ. ಜಾತಿ ವ್ಯವಸ್ಥೆ ಹೋಗಬೇಕಾದರೆ ಬಸವಣ್ಣನ ಆದರ್ಶಗಳು ಅಗತ್ಯವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ತಾಲೂಕಿನ ಸಿದ್ದಯ್ಯನ ಕೋಟೆಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಶಾಖಾ ಮಠದಲ್ಲಿ ಮೂರು ದಿನಗಳ ಕಾಲ ಜರುಗುವ ಗಡಿನಾಡ ಸಾಂಸ್ಕೃತಿಕ ಉತ್ಸವದಲ್ಲಿ ಮಾತನಾಡಿದರು. 12 ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸುವತ್ತ ಪ್ರಯತ್ನಿಸಿದರು. ಬ್ರಾಹ್ಮಣ್ಯತೆಯ ವಿರುದ್ಧ ಹೋರಾಟ ಮಾಡಿದರು. ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಜಾತಿಯ ವ್ಯವಸ್ಥೆ ಹೋಗಿಲ್ಲ. ಸಂವಿಧಾನದ ಮೊದಲ ಪುಟದಲ್ಲಿಯೇ ಸಮಾನತೆ, ಸಹೋದರತೆ, ಭಾತೃತ್ವ ಎಂದು ಸಾರಿದ್ದರೂ ಇಂದಿಗೂ ಜಾತಿ ತಾರತಮ್ಯ ಹೋಗಿಲ್ಲ .ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ಇದಕ್ಕೆ ಸರ್ಕಾರಗಳು ಸಹಕಾರ ನೀಡುತ್ತಿವೆ ಎಂದರು.

ಗುರು ಪರಂಪರೆಯಿಂದ ಸಾಗಿ ಬಂದ ದೇಶದಲ್ಲಿ ಜಾತಿ ಪರಂಪರೆಯನ್ನು ಹುಟ್ಟು ಹಾಕಿ ಸಾಮಾಜಿಕ ಅಸಮಾನತೆ ತಾಂಡವಾಡುತ್ತಿದೆ. 12ನೇ ಶತಮಾನದ ಬಸವಣ್ಣರ ಆದರ್ಶಗಳು ಪಾಲನೆಯಾಗಿದ್ದರೆ ಭಾರತ ಇನ್ನಷ್ಟು ಸಾಂಸ್ಕೃತಿಕ, ಶ್ರೀಮಂತವಾಗಿರುತ್ತಿತ್ತು. ಜಾತಿ ತಾರತಮ್ಯ ಹೋಗಬೇಕಾದರೆ ಬಸವ ಬಾರತ ನಿರ್ಮಾಣವಾಗಬೇಕು ಎಂದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಹಿಂದುಳಿದ ಪ್ರದೇಶವಾಗಿರುವ ಈ ಭಾಗದಲ್ಲಿ ಬಸವಾದಿ ಶಿವಶರಣರ ಆಶಯಗಳನ್ನು ನಾಡಿನನುದ್ದಕ್ಕೂ ಪರಿಚಯಿಸುವಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಸದಾ ಕಾಯಕದಲ್ಲಿ ತೊಡಗಿರುವ ಅವರು ನಿತ್ಯವೂ ನೂರಾರು ಮಕ್ಕಳಿಗೆ ಸ್ವತ ದಾಸೋಹ ಮಾಡಿ ಉಪಚರಿಸುತ್ತಿರುವುದು ಶ್ಲಾಘನೀಯ. ಮೂಡ ನಂಬಿಕೆ ,ಹಳೆಯ ಕಂದಾಚಾರಗಳನ್ನು ಹೋಗಲಾಡಿಸಿ ಬಸವಾದಿ ಶಿವ ಶರಣರ ಆಶಯಗಳನ್ನು ಸಾರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀ ಮಠವು ಇನ್ನಷ್ಟು ಬೆಳೆಯಲಿ ಎಂದರು.

ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಗಡಿ ಭಾಗದಲ್ಲಿನ ಶ್ರೀ ಮಠಕ್ಕೆ ಸರ್ಕಾರಗಳು ಸಹಕಾರಾಡುತ್ತಿರುವುದು ವಿರಳ. ಹಿಂದುಳಿದ ಮಠಗಳು ಅಭಿವೃದ್ಧಿಯಾಗಬೇಕು. ತಳ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು. ತಾಲೂಕಿನ 19 ಕೆರೆಗಳನ್ನು ನೀರುಣಿಸುವ ಕಾರ್ಯವಾಗಬೇಕು. ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ನೀಡಿ ಅನುದಾನ ನೀಡಲು ಕ್ರಮ ವಹಿಸಬೇಕು ಎಂದರು.ಇಲಕಲ್ ಗುರು ಮಹಾಂತ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಗುಳೇದ ಗುಡ್ಡ ಬೃಹನ್ಮಠದ ಜಗದ್ಗುರು ಗುರುಸಿದ್ಧಪಟ್ಟದಾರ್ಯ ಸ್ವಾಮೀಜಿ, ಡಾ.ಬಸವ ಚೇತನ ಸ್ವಾಮೀಜಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಪಾಪನಾಯಕ, ಜಿಲ್ಲಾ ಕೆಪಿಸಿಸಿ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಲಿಡ್ಕ್ ರ್ ನಿಗಮದ ಮಾಜಿ ಅಧ್ಯಕ್ಷ ಒ.ಶಂಕರ್, ಮುಖಂಡ ಜೆ. ಜೆ. ಹಟ್ಟಿ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಉಲ್ಲಾ ಇದ್ದರು.