ಬಸವಣ್ಣ ಭಾವಚಿತ್ರ ಧರ್ಮಗ್ರಂಥ, ವಚನ ಸಾಹಿತ್ಯದ ಬೃಹತ್ ಮೆರವಣಿಗೆ

| Published : Sep 14 2025, 01:04 AM IST

ಬಸವಣ್ಣ ಭಾವಚಿತ್ರ ಧರ್ಮಗ್ರಂಥ, ವಚನ ಸಾಹಿತ್ಯದ ಬೃಹತ್ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ ಓಣಿ, ಬಸವನಬೀದಿ ಸೇರಿದಂತೆ ಪ್ರಮುಖ ಬೀದಿಗಳ ಮೂಲಕ ಬಸವ ಸಂಸ್ಕೃತಿ ಕುರಿತು ಘೋಷಣೆ ಮೊಳಗಿಸುತ್ತ ಸಂಚರಿಸಿತು.

ಮುಂಡಗೋಡ: ವಿಶ್ವ ಗುರು ಬಸವೇಶ್ವರ ಅವರನ್ನು ರಾಜ್ಯ ಸರ್ಕಾರ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮುಂಡಗೋಡ ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಬಸವಣ್ಣ ಭಾವಚಿತ್ರ ಧರ್ಮಗ್ರಂಥ, ವಚನ ಸಾಹಿತ್ಯದ ಬೃಹತ್ ಮೆರವಣಿಗೆ ನಡೆಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ರಥ ಯಾತ್ರೆ ಮೆರವಣಿಗೆ ಮುಂದೆ ಬಸವಣ್ಣ ಹಿಂದೆ ಬೇರೆ ಬೇರೆ ಸಮಾಜದ ನಾಯಕರಿರುವ ಬಸವ ರಥ ಯಾತ್ರೆ ಶಿರಸಿ-ಹುಬ್ಬಳ್ಳಿ ರಸ್ತೆ, ಅಂಬೇಡ್ಕರ ಓಣಿ, ಬಸವನಬೀದಿ ಸೇರಿದಂತೆ ಪ್ರಮುಖ ಬೀದಿಗಳ ಮೂಲಕ ಬಸವ ಸಂಸ್ಕೃತಿ ಕುರಿತು ಘೋಷಣೆ ಮೊಳಗಿಸುತ್ತ ಸಂಚರಿಸಿತು.

ಮೆರವಣಿಗೆಯಲ್ಲಿ ಗದಗ-ಡಂಬಳ ಯಡೆಯೂರು ಜಗದ್ಗುರು ಡಾ. ತೋಂಟದಾರ್ಯ ಸಂಸ್ಥಾನದ ಸಿದ್ದರಾಮ ಸ್ವಾಮಿಗಳು, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ನಾಡೀಜ ಡಾ. ಬಸವಲಿಂಗ ಪಟ್ಟದೇವರು, ತರಳುಬಾಳು ಸಂಸ್ಥಾನದ ಶಾಖಾ ಮಠ ಸಾಣೇಹಳ್ಳಿ ಯ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳು, ಕೂಡಲಸಂಗಮ ಬಸವಧರ್ಮ ಮಹಾಪೀಠದ ಶ್ರೀ ಗಂಗಾ ಮಾತಾಜೀ, ಇಳಕಲ್-ಹುನಗುಂದ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನದ ಗುರುಮಹಾಂತ ಶಿವಯೋಗಿಗಳು, ಬೆಳಗಾವಿ ನಾಗನೂರ ರುದ್ರಾಕ್ಷಿ ಮಠಧ ಡಾ ಅಲ್ಲಮಪ್ರಭು ಸ್ವಾಮಿ, ಅತ್ತಿವೇರಿ ಬಸವಧಾಮ ಮಾತೆ ಬಸವೇಶ್ವರಿ, ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾಧ್ಯಕ್ಷ ಮಾಜಿ ಶಾಸಕ ವಿ.ಎಸ್ ಪಾಟೀಲ, ಬಸವಕಲ್ಯಾಣ ಲಿಂಗವಂತ ಹರಳಯ್ಯ ಪೀಠದ ಮಾತೆ ಡಾ.ಗಂಗಾಂಬಿಕಾ, ಶರಣ ಚಿಂತಕ ಅಶೋಕ ಬರಗುಂಡಿ, ಬನವಾಸಿ ಅಲ್ಲಮಪ್ರಭು ದೇವರ ಹೊಳೆ ಮಠದ ಶ್ರೀ ನಾಗಭೂಷಣ ಸ್ವಾಮಿ, ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಶ್ರೀ, ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಸವರಾಜ ಪಾಟೀಲ, ಶಿವದೇವ ದೇಸಾಯಿಸ್ವಾಮಿ, ಸುಮಂಗಲಾ ಅಂಗಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಸಂತ ಕೊಣಸಾಲಿ ಶ್ರೀಶೈಲ ಐನಾಪುರ್, ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು, ಪದಾಧಿಕಾರಿಗಳು, ಎಲ್ಲ ಸಮಾಜದ ಬಾಂಧವರು, ಬಸವ ಅನುಯಾಯಿಗಳು ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ, ಗೌಳಿ ನೃತ್ಯ, ಲಂಬಾಣಿ ನೃತ್ಯ, ತೊಗಲು ಬೊಂಬೆ ನೃತ್ಯಗಳು ಗಮನ ಸೆಳೆದವು. ಈ ಸಂದರ್ಭದಲ್ಲಿ ಅಂಬೇಡ್ಕರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.