ನಾಡಿನ ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ಮಾರ್ಗ ತೋರಿಸಿದ ಮಹಾನ್ ಚೇತನ ಬಸವಣ್ಣ

| Published : May 12 2024, 01:16 AM IST

ನಾಡಿನ ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ಮಾರ್ಗ ತೋರಿಸಿದ ಮಹಾನ್ ಚೇತನ ಬಸವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಜಗಜ್ಯೋತಿ ಬಸವೇಶ್ವರರು ಈ ನಾಡಿನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಬಹು ದೊಡ್ಡ ಮಾರ್ಗವನ್ನು ತೋರಿಸಿದ ಮಹಾನ್ ಚೇತನ ವಿಶ್ವಗುರು ಬಸವಣ್ಣ ಎಂದು ತಹಸೀಲ್ದಾರ್‌ ಎಚ್. ಪ್ರಭಾಕರಗೌಡ ಹೇಳಿದರು.

ಹಿರೇಕೆರೂರು: ಜಗಜ್ಯೋತಿ ಬಸವೇಶ್ವರರು ಈ ನಾಡಿನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಬಹು ದೊಡ್ಡ ಮಾರ್ಗವನ್ನು ತೋರಿಸಿದ ಮಹಾನ್ ಚೇತನ ವಿಶ್ವಗುರು ಬಸವಣ್ಣ ಎಂದು ತಹಸೀಲ್ದಾರ್‌ ಎಚ್. ಪ್ರಭಾಕರಗೌಡ ಹೇಳಿದರು.ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಚರಿಸಲಾದ ಜಗಜ್ಯೋತಿ ಶ್ರೀ ಬಸವೇಶ್ವರರ ಜನ್ಮದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾಯಕವನ್ನೇ ತಮ್ಮ ಜೀವನದ ವೃತ್ತಿಯನ್ನಾಗಿ ಮಾಡಿಕೊಂಡು ಈ ಕಾಯಕದ ಮುಖಾಂತರ ಸಮಾಜಕ್ಕೆ ಆದರ್ಶ ಪ್ರಾಯವಾಗಿ ನಾಡಿನ ಶೋಷಿತರನ್ನು, ಮಹಿಳೆಯರನ್ನು ದೀನ ದಲಿತರನ್ನು ಅಷ್ಟೇ ಅಲ್ಲದೆ ಇಡೀ ಮನುಕುಲವನ್ನೇ ಸಮಾನತೆಯ ಧರ್ಮದಲ್ಲಿ ಕಂಡ ಮಹಾ ಮಾನವತಾವಾದಿ ಬಸವಣ್ಣ. ಅಂತರ್ಜಾತಿ ವಿವಾಹದ ಮೂಲಕ ಸಮಾಜದಲ್ಲಿ ಸಮಾನತೆ ಸಾರಿದ ಹರಿಕಾರ ಇಂಥ ಮಾನವತಾವಾದಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗೋಣ ಎಂದರು.ಬಸವಣ್ಣನವರ ಕುರಿತು ಉಪನ್ಯಾಸ ನೀಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಪಿ.ಗೌಡರ ಮಾತನಾಡಿ, ಬಸವಣ್ಣ ಈ ನಾಡಿನ ಕ್ರಾಂತಿ ಪುರುಷ, ಸರ್ವರಲ್ಲಿ ಸಮಾನತೆ ಸಾರಿದ ಮಹಾನ್ ಜಗಜ್ಯೋತಿ. ಆ ಜ್ಯೋತಿ ವಿಶ್ವದೆತ್ತರಕ್ಕೆ ಬೆಳೆದು ವಿಶ್ವದ ಮನುಕುಲವನ್ನು ಸಮಾನತೆಯ ದಿಕ್ಕಿನಲ್ಲಿ ಕೊಂಡೊಯ್ಯಲು ನುಡಿದಂತೆ ನಡೆದು ತೋರಿಸಿ ತನ್ನ ಬದುಕನ್ನೇ ಸಮರ್ಪಿಸಿದ ಮಹಾ ಚೇತನ ಬಸವಣ್ಣ. ಬಸವೇಶ್ವರರು ೧೨ ನೇ ಶತಮಾನ ಕಂಡ ಮಹಾನ್ ಧೀಮಂತ ಪುರುಷ. ಅಲ್ಲಮರ ಮಾರ್ಗದರ್ಶನದಲ್ಲಿ ಸಹಸ್ರಾರು ಶರಣರನ್ನು ಒಂದುಗೂಡಿಸಿ ಕಲ್ಯಾಣ ಜ್ಯೋತಿ ಬೆಳಗಿಸಿದ ಆ ಮುಖಾಂತರ ಈ ನಾಡಿಗೆ ಸುಸಂಸ್ಕೃತ ಬದುಕನ್ನು ತೋರಿ ಕಲ್ಯಾಣದಲ್ಲಿ ಲಿಂಗೈಕ್ಯರಾದರು. ಅವರ ಬದುಕು ಇಂದಿಗೂ ಪ್ರಸ್ತುತ ಎಂದರು.

ಕಾರ್ಯಕ್ರಮವನ್ನು ನಾಗರಾಜ ಕಟ್ಟಿಮನಿ ನಿರೂಪಿಸಿದರು. ಗುರುಶಾಂತಪ್ಪ ಎತ್ತಿನಹಳ್ಳಿ, ಕಂಠಾಧರ ಅಂಗಡಿ, ಹೇಮಣ್ಣ ಮುದುರೆಡ್ಡಿ , ಹನುಮಂತಪ್ಪ ಕೊಪ್ಪದ, ಸಮಾಜದ ಮುಖಂಡರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.