ಮೊಟ್ಟ ಮೊದಲು ಸಮಾನತೆ ಸಾರಿದ್ದು ಬಸವಣ್ಣ: ಸಿದ್ಧಬಸವ ಕಬೀರ ಸ್ವಾಮೀಜಿ

| Published : May 27 2024, 01:03 AM IST

ಮೊಟ್ಟ ಮೊದಲು ಸಮಾನತೆ ಸಾರಿದ್ದು ಬಸವಣ್ಣ: ಸಿದ್ಧಬಸವ ಕಬೀರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪುರುಷರಷ್ಟೇ ಸ್ತ್ರೀಯರಿಗೂ ಕೂಡ ಸಮಾನತೆ ಇದೆ ಎಂಬುದನ್ನು ಮೊಟ್ಟ ಮೊದಲು ಜನರ ಮನಗಳಿಗೆ ತಿಳಿಸಿಕೊಟ್ಟವರು ವಿಶ್ವಗುರು ಬಸವಣ್ಣನವರು.

೯೨ನೇ ಮಾಸಿಕ ಬಸವಾನುಭವ ಕಾರ್ಯಕ್ರಮದ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮುಟ್ಟು ಮೈಲಿಗೆ ಎಂಬ ಕಳಂಕಕ್ಕೆ ತಿಲಾಂಜಲಿ ನೀಡಿ ಪುರುಷರಷ್ಟೇ ಸ್ತ್ರೀಯರಿಗೂ ಕೂಡ ಸಮಾನತೆ ಇದೆ ಎಂಬುದನ್ನು ಮೊಟ್ಟ ಮೊದಲು ಜನರ ಮನಗಳಿಗೆ ತಿಳಿಸಿಕೊಟ್ಟವರು ವಿಶ್ವಗುರು ಬಸವಣ್ಣನವರು ಎಂದು ಜೇವರ್ಗಿಯ ಸಿದ್ಧಬಸವ ಕಬೀರ ಸ್ವಾಮೀಜಿ ಹೇಳಿದರು.

ತಾಲೂಕಿನ ಗುಳೆ ಗ್ರಾಮದಲ್ಲಿ ನಡೆದ ೯೨ನೇ ಮಾಸಿಕ ಬಸವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಗುರು ಬಸವಣ್ಣನವರು ೧೨ನೇ ಶತಮಾನದಲ್ಲಿ ಎಂಟನೇ ವರ್ಷದಲ್ಲಿದ್ದಾಗ ತನ್ನ ಅಕ್ಕನಾದ ಅಕ್ಕನಾಗಲಾಂಬಿಕೆ ಮುಟ್ಟಾದಾಗ ಅವರ ತಂದೆ-ತಾಯಿ ಹೊರಗಿಟ್ಟು ಊಟೋಪಚಾರ ನೀಡುವುದನ್ನು ಕಂಡ ಬಸವಣ್ಣನವರು ಶೋಷಣೆಗೊಳಗಾದ ತನ್ನ ಅಕ್ಕನ ಕುರಿತಾಗಿ ತನ್ನ ತಂದೆಯವರಿಗೆ ಪ್ರಶ್ನಿಸಿ ಪುರುಷರಷ್ಟೆ, ಸ್ತ್ರೀಯರನ್ನು ಕೂಡ ಸಮಾನತೆ ಕಾಣಬೇಕು ಎಂದು ಸಾರಿದರು ಎಂದರು.

ನಿವೃತ್ತ ಪಿಎಸ್‌ಐ ಶರಣ ಬಸವನಗೌಡ ಪೋಲಿಸ್ ಪಾಟೀಲ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಶರಣರಾದ ಬಸವರಾಜ ಹೂಗಾರ, ಬಸವರಾಜಪ್ಪ ಇಂಗಳದಾಳ, ಅಮರೇಶಪ್ಪ ಬಳ್ಳಾರಿ ಶಿವಬಸಯ್ಯ ಹಿರೇಮಠ, ವೀರಾಪುರ, ಕೊಟ್ರಪ್ಪ ಶೇಡದ್, ಶರಣಪ್ಪ ಎಚ್. ಹೊಸಳ್ಳಿ ಮಾತನಾಡಿದರು.

ಅತಿಥಿಗಳಾಗಿ ಷಣ್ಮಖಪ್ಪ ಬಳ್ಳಾರಿ, ಪರಪ್ಪ ಗೊಂದಿಹೊಸಳ್ಳಿ, ದೇವಪ್ಪ ಕೋಳೂರು ವನಜಭಾವಿ, ನಾಗನಗೌಡ ಜಾಲಿಹಾಳ, ಅಮರಪ್ಪ ಅಳ್ಳಳ್ಳಿ, ಗಿರಿಮಲ್ಲಪ್ಪ ಪರಂಗಿ, ವಿರೂಪಣ್ಣ ಮೇಟಿ, ಚಿದಾನಂದಪ್ಪ ಗೊಂದಿ, ನಿಂಗಪ್ಪ ಪರಂಗಿ, ಯಲ್ಲಪ್ಪ ಆಡಿನ್, ಲಿಂಗನಗೌಡ ದಳಪತಿ, ಹನುಮೇಶ್, ಬಸಣ್ಣ ಹೊಸಳ್ಳಿ ನಿಜಲಿಂಗಪ್ಪ, ಮಲ್ಲಿಕಾರ್ಜುನ, ಶರಣಪ್ಪ ಮಂತ್ರಿ, ಶರಣೆ ಬಸಮ್ಮ ಹೂಗಾರ, ಶಂಕ್ರಮ್ಮ, ಶರಣಮ್ಮ ಹೊಸಳ್ಳಿ, ನಾಗಮ್ಮ ಜಾಲಿಹಾಳ, ಸಾವಿತ್ರಮ್ಮ ಆವಾರಿ, ಮಲ್ಲಮ್ಮ ಮಂತ್ರಿ, ನಿಂಗಮ್ಮ ಕೋಳೂರು ಸೇರಿದಂತೆ ಮತ್ತಿತರರು ಇದ್ದರು.