ಸಾರಾಂಶ
ಯಲ್ಲಾಪುರ: ಜಗಜ್ಯೋತಿ ಬಸವಣ್ಣ ಮತ್ತು ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತಿಯನ್ನು ಮೇ ೧೦ರಂದು ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಸರಳವಾಗಿ ಆಚರಿಸಲಾಯಿತು.
ಪತ್ರಕರ್ತ ಕೇಬಲ್ ನಾಗೇಶ ಮಾತನಾಡಿ, ಬಸವೇಶ್ವರರು ಸಾರಿದ ಸಂದೇಶಗಳನ್ನು ಪಾಲಿಸಬೇಕು. ಉದ್ದೇಶವೇನೆಂದರೆ ೧೧ನೇ ಶತಮಾನದಲ್ಲಿಯೇ ಅಸ್ಪೃಶ್ಯತೆ ಮತ್ತು ಜಾತೀಯತೆಯನ್ನು ಹೋಗಲಾಡಿಸಲು ಸಾಮಾಜಿಕ ಜಾಗೃತಿ ಮೂಡಿಸಿದ ಈ ಮಹಾನುಭಾವ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಹೇಮರಡ್ಡಿ ಮಲ್ಲಮ್ಮ, ಮಹಿಳಾ ಸಂತರಾಗಿದ್ದರು. ಇವರು ಉತ್ತರ ಕರ್ನಾಟಕ ಪ್ರದೇಶದಲ್ಲಿ ೧೪ನೇ ಶತಮಾನದಲ್ಲಿ ಜನಿಸಿದ ಶಿವನ ಉತ್ಕಟ ಭಕ್ತೆಯಾಗಿದ್ದರು. ಅವರು ಬಸವಣ್ಣನವರು ತೋರಿದ ಮಾರ್ಗವನ್ನು ಅನುಸರಿಸಿದರು. ಇಂತಹ ಮಹಾವ್ಯಕ್ತಿಗಳ ಸಂಸ್ಮರಣೆಗಾಗಿ ಕರ್ನಾಟಕ ಸರ್ಕಾರವು ಪ್ರತಿವರ್ಷ ಹೇಮರಡ್ಡಿ ಮಲ್ಲಮ್ಮ ಮತ್ತು ಬಸವಣ್ಣವನರ ಜಯಂತಿಯನ್ನು ಆಚರಿಸುತ್ತದೆ ಎಂದರು.ಗ್ರಾಮ ಲೆಕ್ಕಾಧಿಕಾರಿ ಶ್ರೀಧರ ಮಡಿವಾಳ ಸ್ವಾಗತಿಸಿ, ವಂದಿಸಿದರು. ಪಿಎಸ್‌ಐ ಸಿದ್ದಪ್ಪ ಗುಡಿ, ಬಸವೇಶ್ವರ ದೇವಾಲಯದ ಅಧ್ಯಕ್ಷ ಮಹೇಶ ಗೌಳಿ, ಗ್ರಂಥಪಾಲಕ ಎಫ್.ಎಚ್. ಬಾಸೂರಕರ, ಸಮಾಜ ಕಲ್ಯಾಣ ಇಲಾಖೆಯ ನಾಗೇಶ ಮಲಮೇತ್ರಿ, ಪಪಂ ಸಿಬ್ಬಂದಿ ವೆಂಕಟ್ರಮಣ ಶೇಟ್, ಮೋಜಣಿ ಇಲಾಖೆಯ ಭರತಕುಮಾರ, ತಾಪಂ ಸಿಬ್ಬಂದಿ ಗಣಪತಿ ಭಾಗ್ವತ, ಕಂದಾಯ ಇಲಾಖೆಯ ಸಿಬ್ಬಂದಿಗಳಾದ ಕುಮಾರ ಪಾಟಣಕರ, ಅಕ್ರಮ, ಆದಂ ಶೇಖ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ದಾಂಡೇಲಿಯಲ್ಲಿ ಸಂಭ್ರಮದ ಬಸವ ಜಯಂತಿ
ದಾಂಡೇಲಿ: ನಗರದಲ್ಲಿ ಸಂಭ್ರಮ, ಸಡಗರದಿಂದ ಬಸವ ಜಯಂತಿಯನ್ನು ವಿವಿಧೆಡೆ ಆಚರಿಸಲಾಯಿತು.ಅಂಬೇವಾಡಿಯಲ್ಲಿ ಇರುವ ತಾಲೂಕು ಆಡಳಿತ ಸೌಧದಲ್ಲಿ ತಹಸೀಲ್ದಾರ್ ಎಂ.ಎನ್. ಮಠದ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪ ಗೌರವವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.ನಗರದ ಪಟೇಲ್ ವೃತ್ತದಲ್ಲಿರುವ ಬಸವೇಶ್ವರ ಮೂರ್ತಿಗೆ ನಗರಾಡಳಿತದಿಂದ ಪುಷ್ಪ ಗೌರವವನ್ನು ಸಲ್ಲಿಸಲಾಯಿತು. ನಗರಸಭೆಯ ವ್ಯವಸ್ಥಾಪಕ ಪರಶುರಾಮ ಶಿಂದೆ, ಅಧಿಕಾರಿಗಳಾದ ವಿ.ಎಸ್. ಕುಲಕರ್ಣಿ, ಮೈಕಲ್ ಫರ್ನಾಂಡಿಸ್, ಅಭಯಕುಮಾರ ಮೊದಲಾದವರು ಉಪಸ್ಥಿತರಿದ್ದರು.ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಆಶ್ರಯದಡಿ ಪಟೇಲ್ ವೃತ್ತದಲ್ಲಿರುವ ಬಸವೇಶ್ವರ ಮೂರ್ತಿಗೆ ಆರತಿ ಬೆಳಗಿ ಪೂಜೆಯನ್ನು ಸಲ್ಲಿಸಲಾಯಿತು. ಸಮಿತಿಯ ಅಧ್ಯಕ್ಷ ಯು.ಎಸ್. ಪಾಟೀಲ, ಪ್ರಮುಖರಾದ ನಿಂಗನಗೌಡ ಪಾಟೀಲ, ಮಲ್ಲಿಕಾರ್ಜುನ ತೊರಗಲ್, ಮಹಾಂತೇಶ ಬಾದಾಮಿ, ಮಲ್ಲಿಕಾರ್ಜುನ ಇಟಗಿ, ಕಸ್ತೂರಿ ಜಿ. ರಜಪೂತ, ನಾಗಪ್ಪ ಮೊದಲಾದವರು ಇದ್ದರು.ದಾಂಡೇಲಿಯ ಶ್ರೀ ವೀರಶೈವ ಸೇವಾ ಸಂಘದ ವತಿಯಿಂದ ಬಸವ ಜಯಂತಿಯನ್ನು ಆಚರಿಸಲಾಯಿತು. ಮೃತ್ಯುಂಜಯ ಮಠದ ಆವರಣದಿಂದ ಆರಂಭಗೊಂಡ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ಪಟೇಲ್ ವೃತ್ತದಲ್ಲಿರುವ ಬಸವೇಶ್ವರ ಮೂರ್ತಿ ಮುಂಭಾಗದಲ್ಲಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಶ್ರೀ ವೀರಶೈವ ಸೇವಾ ಸಂಘದ ಗೌರವಾಧ್ಯಕ್ಷ ಕೆ.ಬಿ. ನಂಜುಂಡಪ್ಪ, ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಂದ್ರು ಮಾಳಿ, ಮಧುಕೇಶ್ವರ ಹಿರೇಮಠ, ಲಿಂಗಯ್ಯ ಪುಜಾರ, ಸಂಜಯ ಕಲ್ಯಾಣಿ, ಬಸವರಾಜ ಹೊರಪೇಟಿ, ಎಸ್.ಎಂ. ಪಾಟೀಲ, ಗುರು ಮಠಪತಿ, ಚನ್ನಬಸಪ್ಪ ಮುರಗೋಡ, ಗಂಗಯ್ಯ ರುದ್ರಯ್ಯ ಹಿರೇಮಠ, ಸಂಗಪ್ಪ ಗೌಡರ ಹಾಗೂ ವೀರಶೈವ ಸಮಾಜದರು ಉಪಸ್ಥಿತರಿದ್ದರು.