ಸಾರಾಂಶ
ಗಜೇಂದ್ರಗಡ:
ಕಾಯಕವೇ ಶ್ರೇಷ್ಠ ಎಂದ ಮಹಾಮಾನವತಾವಾದಿ ಬಸವಣ್ಣನವರ ವಿಚಾರಧಾರೆಗಳು ಮಾನವನ ಬದುಕನ್ನು ಬೆಳಗುವ ದೀಪವಿದ್ದಂತೆ ಎಂದು ಗಜೇಂದ್ರಗ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಹೇಳಿದರು.ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ ನಡೆದ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಸಮಸಮಾಜ ನಿರ್ಮಾಣ ಜತೆಗೆ ಶ್ರಮಸಂಸ್ಕೃತಿಯ ಶಕ್ತಿಯನ್ನು ಒಗ್ಗೂಡಿಸಿ ಕಾಯಕವೇ ಶ್ರೇಷ್ಠ ಎಂದು ಬಸವಣ್ಣನವರು ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದ್ದಾರೆ. ಅಂಧಶ್ರದ್ಧೆ, ಮೂಡನಂಬಿಕೆ ಹಾಗೂ ಕಂದಾಚಾರಗಳ ವಿರುದ್ಧ ಜಾಗೃತಿ ಮೂಡಿಸಿ ಶರಣ ಸಂಸ್ಕೃತಿಗೆ ಮುನ್ನುಡಿ ಬರೆದ ಬಸವಣ್ಣನವರ ವಿಚಾರಧಾರೆಗಳು ಪ್ರತಿ ವ್ಯಕ್ತಿಯ ಬದುಕನ್ನು ಬೆಳಗುವ ದೀಪವಿದ್ದಂತೆ ಎಂದರು.
ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾತನಾಡಿ, ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಬಯಿಸಿದ ವಿಶ್ವಗುರು ಬಸವಣ್ಣನವರು ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿ ಜಾರಿಯಲ್ಲಿದ್ದ ಅನಿಷ್ಠ ಪದ್ಧತಿಗಳ ವಿರುದ್ಧ ವಚನಕಾರರು ತಮ್ಮ ಸರಳ ವಚನಗಳ ಮೂಲಕ ಹೊಸ ಚಿಂತನೆಯನ್ನು ಕಟ್ಟಿಕೊಟ್ಟಿದ್ದಾರೆ ಎಂದರು.ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿದರು. ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸಿದ್ದಪ್ಪ ಚೋಳಿನ, ಅಮರೇಶ ಗಾಣಿಗೇರ, ಅಧಿಕಾರಿಗಳಾದ ಸಿ.ಡಿ. ದೊಡ್ಡಮನಿ, ಬಿ. ಮಲ್ಲಿಕಾರ್ಜುನಯ್ಯ, ಗುರಪ್ಪ ಪಟ್ಟಣಶೆಟ್ಟಿ, ಎಂ.ಎಂ. ದೊಡ್ಡಮನಿ, ಎನ್.ಎಚ್. ಖುದಾನವರ, ಜಿ.ಎನ್. ಕಾಳೆ, ಶಿವು ಇಲಾಳ, ಪಿ.ಎಂ. ದೊಡ್ಡಮನಿ, ರಾಘವೇಂದ್ರ ಮಂತಾ ಇದ್ದರು.
ಜಾಗತಿಕ ಲಿಂಗಾಯತ ಮಹಾಸಭಾ:ಪಟ್ಟಣದ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಯುವ ಬಸವ ಕೇಂದ್ರ, ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಸೇರಿ ಬಸವಪರ ಸಂಘಟನೆಗಳಿಂದ ಬಸವಣ್ಣನವರ ಮೂರ್ತಿ ಮೆರವಣಿಗೆ ನಡೆಯಿತು.
ಪಟ್ಟಣದ ಎಪಿಎಂಸಿ ಆವರಣದಿಂದ ಆರಂಭವಾದ ಮೆರವಣಿಗೆಯಲ್ಲಿ ವಚನಗಳನ್ನು ಪಠಣ ನಡೆಯಿತು. ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಗುರುಲಿಂಗಯ್ಯ ಓದುಸುಮಠ, ಬಸವ ಕೇಂದ್ರದ ಅಧ್ಯಕ್ಷ ಬಸವರಾಜ ಹೂಗಾರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಕೊಟಗಿ, ಕುಮಾರ ಸಂಗಮದ, ರವಿ ಗಡೇದವರ, ಜಗದೀಶ ಬಳಿಗೇರ, ಎಂ.ಎಸ್. ಹಡಪದ, ಶರಣು ಪೂಜಾರ, ಬಾಲು ರಾಠೋಡ, ಫಯಾಜ್ ತೋಟದ, ಮಂಜು ಹೂಗಾರ, ಎಂ.ಬಿ. ಸೊಂಪುರ ಇದ್ದರು.ಬಿಜೆಪಿ ಕಾರ್ಯಾಲಯ:
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಬಸವ ಜಯಂತಿ ಪ್ರಯುಕ್ತ ಪುರಸಭೆ ಮಾಜಿ ಸದಸ್ಯ ರಾಜೇಂದ್ರ ಘೋರ್ಪಡೆ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಪುರಸಭೆ ಸದಸ್ಯ ವೀರಪ್ಪ ಪಟ್ಟಣಶೆಟ್ಟಿ, ಬಿ.ಎಂ. ಸಜ್ಜನರ, ಬಾಳು ಬೋಸ್ಲೆ ಇದ್ದರು.ಬಸವೇಶ್ವರ ವೃತ್ತದಲ್ಲಿ:
ಪಟ್ಟಣದ ಇಲಕಲ್ ರಸ್ತೆಯ ಬಸವೇಶ್ವರ ವೃತ್ತದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಲಾಯಿತು. ಈ ವೇಳೆ ಬಸವರಾಜ ವಾಲಿ, ಸಿದ್ದಪ್ಪ ವಾಲಿ, ಶಾಮೀದ ಮಾಲ್ದಾರ, ಸಂಗಣ್ಣ ಗೊಂಗಡಶೆಟ್ಟಿ ಇದ್ದರು.ಎಸ್.ಎಂ. ಭೂಮರಡ್ಡಿ ಪದವಿಪೂರ್ವ ಕಾಲೇಜು:
ಪಟ್ಟಣದ ಎಸ್.ಎಂ. ಭೂಮರಡ್ಡಿ ಪದವಿಪೂರ್ವ ಕಾಲೇಜಿನಲ್ಲಿ ಬಸವಣ್ಣನವರ ಜಯಂತಿ ನಡೆಯಿತು. ಈ ವೇಳೆ ಅರವಿಂದ ವಡ್ಡರ, ವೈ.ಆರ್. ಸಕ್ರೋಜಿ, ಎಸ್.ಬಿ. ಕರಾಬಶೆಟ್ಟರ, ಶ್ರೀಕಾಂತ ಪೂಜಾರ ಇದ್ದರು.