ಸಾರಾಂಶ
ತಾಲೂಕಿನ ಸೋಮಸಮುದ್ರ ಗ್ರಾಮದ ಕೊಟ್ಟೂರು ಗುರುಪರಂಪರೆಯ ಶಾಖಾ ವಿರಕ್ತಮಠದಲ್ಲಿ ಸಿದ್ಧಲಿಂಗ ಶ್ರೀಗಳ ಪಟ್ಟಾಧಿಕಾರದ ನಿಮಿತ್ತ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೊಟ್ಟೂರು ಸಂಸ್ಥಾನ ಮಠದ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು
ಕನ್ನಡ ಪ್ರಭ ವಾರ್ತೆ ಕುರುಗೋಡುತಾಲೂಕಿನ ಸೋಮಸಮುದ್ರ ಗ್ರಾಮದ ಕೊಟ್ಟೂರು ಗುರುಪರಂಪರೆಯ ಶಾಖಾ ವಿರಕ್ತಮಠದಲ್ಲಿ ಸಿದ್ಧಲಿಂಗ ಶ್ರೀಗಳ ಪಟ್ಟಾಧಿಕಾರದ ನಿಮಿತ್ತ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸೋಮಸಮುದ್ರ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮೂರುಸಾವಿರ ಮಹಿಳೆಯರಿಗೆ ಹರಗುರುಚರ ಮೂರ್ತಿಗಳ ಸಮ್ಮುಖದಲ್ಲಿ ಉಡಿತುಂಬಿ ಶುಭಹಾರೈಸಿದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೊಟ್ಟೂರು ಸಂಸ್ಥಾನ ಮಠದ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರು ಅನುಭವಮಂಟಪದಲ್ಲಿ ಅಕ್ಕಮಹಾದೇವಿಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಮಹಿಳೆಯರಿಗೂ ಸಮಾನ ಅವಕಾಶ ನೀಡಿದ್ದರು. ಅದೇ ಮಾದರಿಯಲ್ಲಿ ಶ್ರೀಮಠ ಮಹಿಳೆಯರನ್ನು ಗೌರವಿಸುತ್ತಿದೆ. ಪುರುಷ ಪ್ರಧಾನ ಸಮಾಜವನ್ನು ಸಮಸಮಾಜ ಮಾಡಲು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ಚಿಕ್ಕ ಆಸಂಗಿ ಮಠದ ವೀರಬಸವ ದೇವರು ಮಾತನಾಡಿ, ಮನುಷ್ಯರ ಜೀವನದ ಭವಿಷ್ಯ ಅವರ ಶ್ರಮಬಲದ ಮೇಲಿದೆಯೇ ಹೊರತು ಜ್ಯೋತಿಷಿಗಳು ಸೂಚಿಸುವ ಪರಿಹಾರದ ಮೇಲಿಲ್ಲ. ಪ್ರತಿಯೊಬ್ಬರೂ ಶ್ರಮವನ್ನು ನಂಬಿ ಜೀವನ ರೂಪಿಸಿಕೊಳ್ಳಬೇಕು ಎಂದರು.ನಿತ್ಯ ೧೫ ಸಾವಿರ ವಿದ್ಯಾರ್ಥಿಗಳು ಊಟಮಾಡುವ ಮಠ ಉತ್ತರ ಕರ್ನಾಟಕದಲ್ಲಿ ಯಾವುದಾದರೂ ಇದ್ದರೆ ಅದು ಕೊಟ್ಟೂರು ಸಂಸ್ಥಾನದ ವಿರಕ್ತಮಠ ಮಾತ್ರ ಎಂದರು.
ಶ್ರೀಗಳ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಗ್ರಾಮ ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕೃತಿಗೊಂಡು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.ಭ್ರಮರಾ೦ಭ ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದರು.
ಕುರುಗೋಡಿನ ನಿರಂಜನಪ್ರಭು ಶ್ರೀಗಳು ದರೂರಿನ ಕೊಟ್ಟೂರು ದೇಶಿಕರು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇವರು, ಕಲ್ಯಾಣಮ್ಮ ಮತ್ತು ಜೆ.ಎನ್. ಶ್ರೀದೇವಿ ಗಣೇಶ್ ವನಜಾಕ್ಷಿ ಇದ್ದರು.