ಬಸವಣ್ಣನವರ ವಚನಗಳು ಸರ್ವ ಸಮಸ್ಯೆಗೆ ಪರಿಹಾರೋಪಾಯಗಳು

| Published : May 02 2025, 12:12 AM IST

ಬಸವಣ್ಣನವರ ವಚನಗಳು ಸರ್ವ ಸಮಸ್ಯೆಗೆ ಪರಿಹಾರೋಪಾಯಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರ ವಚನಗಳು ಸರ್ವ ಸಮಸ್ಯೆಗೆ ಪರಿಹಾರೋಪಾಯಗಳಾಗಿವೆ ಎಂದು ಸಮಾಜಸೇವಕಿ ಗಿರಿಜಕ್ಕ ನಾಲತ್ವಾಡಮಠ ಹೇಳಿದರು.

ಗದಗ:ಬಸವಣ್ಣನವರ ವಚನಗಳು ಸರ್ವ ಸಮಸ್ಯೆಗೆ ಪರಿಹಾರೋಪಾಯಗಳಾಗಿವೆ ಎಂದು ಸಮಾಜಸೇವಕಿ ಗಿರಿಜಕ್ಕ ನಾಲತ್ವಾಡಮಠ ಹೇಳಿದರು.

ಅವರು ಗದಗ ನಗರದ ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ 920ನೇ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅತಿಥಿಗಳಾಗಿ ಆಗಮಿಸಿದ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ ಅಳಿಕೆ ಸಂಸ್ಥೆಯ ಶಿಕ್ಷಕ ನಾಗರಾಜ ಎಸ್.ಎಚ್. ಮಾತನಾಡಿ, ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿಲ್ಲ, ಜೀವನ ಪಾವನವಾಗುವುದು. ಇದಕ್ಕೆ ನಾನೇ ಸಾಕ್ಷಿಯಾಗಿರುವೆ. ಮೊದಲು ನಾನು ಹೇಗೇಗೋ ಇದ್ದೆ ಬಸವಣ್ಣನವರ ವಚನಗಳ ಪರಿಚಯವಾದ ಬಳಿಕ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಕಂಡುಕೊಂಡಿರುವೆ ಎಂದರು. ಬಸವೇಶ್ವರ ಪ್ರೌಢಶಾಲೆ ಶಿಕ್ಷಕ ಭೀಮಸೇನ ಇಬ್ರಾಹಿಂಪೂರ, ಅಧ್ಯಕ್ಷತೆ ವಹಿಸಿದ ಡಾ. ಎಂ.ವಿ. ಐಹೊಳ್ಳಿ ಮುಂತಾದವರು ಮಾತನಾಡಿದರು. ಪ್ರಾರಂಭದಲ್ಲಿ ಸಾಮೂಹಿಕವಾಗಿ ಬಸವ ಪ್ರಾರ್ಥನೆ ನಡೆಯಿತು. ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ. ಎಸ್. ಪಲ್ಲೇದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ವಿಜಯಲಕ್ಷ್ಮೀ ಮೇಕಳಿ ವಂದಿಸಿದರು. ಸಾಮೂಹಿಕ ಬಸವ ವಚನ ಮಂಗಲ ನಡೆಯಿತು.