ಸುದ್ದಿಗೋಷ್ಠಿಯಲ್ಲಿ ವೀರಶೈವ ಸಮಾಜದ ನಿರ್ದೇಶಕ ಪಿ.ಜಗದೀಶ್ ಮಾತನಾಡಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಚಳ್ಳಕೆರೆ ನಗರದ ವೀರಶೈವ ಸಮಾಜದ ವತಿಯಿಂದ ಏ.18,19,20 ಮೂರು ದಿನಗಳ ಕಾಲ ಬಸವೇಶ್ವರ ಜಯಂತಿ ಹಾಗೂ ಅಶ್ವಾರೂಢ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯಕ್ರವನ್ನು ಅದ್ಧೂರಿಯಾಗಿ ನಡೆಸಲಾಗುವುದು ಎಂದು ಸಂಘದ ನಿರ್ದೇಶಕ ಪಿ.ಜಗದೀಶ್ ತಿಳಿಸಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಏ.18ರ ಶನಿವಾರ ಬೆಳಗ್ಗೆ 7.30ಕ್ಕೆ ನಿಡಗಲ್ ಪಾಲನೇತ್ರಪ್ಪ ಅವರಿಂದ ಶಠ್‍ಸ್ಥಳ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬೆಳಗ್ಗೆ 8.30ಕ್ಕೆ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ, 10.30ಕ್ಕೆ ವೀರಶೈವ ಸಮಾಜದ ಮಹಿಳೆಯರು, ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿದೆ.

ಸಂಜೆ 5.30ಕ್ಕೆ ಕಲ್ಯಾಣ ಮಂಟಪದ ಅನುಭವ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮುಖ್ಯ ಅತಿಥಿಯಾಗಿ ಆಗಮಿಸುವರು.

ಗೌರವಾಧ್ಯಕ್ಷೆ ಅನ್ನಪೂರ್ಣ ಪ್ರಕಾಶ್, ಕಾರ್ಯದರ್ಶಿ ಮಂಜುಳಾ ರಾಜ್, ವೀರಶೈವ ಮಹಾಸಭಾದ ಅಧ್ಯಕ್ಷೆ ಶಿಲ್ಪ ಪ್ರಕಾಶ್, ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎನ್.ಸತೀಶ್‍ ಬಾಬು, ಉಪಾಧ್ಯಕ್ಷ ಕೆ.ಎಂ.ಜಗದೀಶ್, ವಿದ್ಯಾಸಂಸ್ಥೆ ಅಧ್ಯಕ್ಷ ವಿ.ಮಂಜುನಾಥ, ಉಪಾಧ್ಯಕ್ಷ ಎ.ವಿಜಯೇಂದ್ರ, ನಿರ್ದೇಶಕ ಕೆ.ಪಿ.ಲೋಕೇಶ್, ಬಿ.ಜಿ.ವೃಷಬೇಂದ್ರಪ್ಪ, ಕೆ.ಟಿ.ಶಿವಕುಮಾರ್, ಕೆ.ಎಂ.ಕೋಟ್ರೇಶ್, ಕೆ.ಈಶ್ವರಪ್ಪ ಮುಂತಾದವರು ಇದ್ದರು.

ಏ.19ರ ಭಾನುವಾರ ಅಶ್ವಾರೋಡ ಬಸವೇಶ್ವರ ಪುತ್ಥಳಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವಿದ್ದು, ಬೆಳಗ್ಗೆ 9.30ಕ್ಕೆ ದಿವ್ಯಸಾನ್ನಿಧ್ಯ ತುಮಕೂರು ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ, ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿ, ಕೊಟರಗೆರೆಯ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿ ಕೇಂದ್ರ ಸಹಾಯಕ ರೈಲ್ವೆಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿ, ಸಂಸದ ಗೋವಿಂದ ಎಂ.ಕಾರಜೋಳ, ಅರಣ್ಯ ಸಚಿವ ಬಿ.ಈಶ್ವರಖಂಡ್ರೆ, ಗಣಿ, ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಶಾಸಕರಾದ ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ, ಎಂ.ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಖಿಲಭಾರತೀಯ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಎಂ.ಶಂಕರಬಿದರಿ, ನಿವೃತ್ತ ಐಜಿಪಿ ಜ್ಯೋತಿಪ್ರಕಾಶ್‍ಮಿರ್ಜಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಕಂಚಿನ ಪ್ರತಿಮೆ ಅನಾವರಣ:

ಅಶ್ವಾರೂಢ ಬಸವೇಶ್ವರ ಪುತ್ಥಳಿ ಪುನರ್ ಪ್ರತಿಷ್ಠಾಪನೆಗೆ ನಿರಂತರ ಒತ್ತಾಯ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಮಾಜದ ಹಿರಿಯರ ಮಾರ್ಗದರ್ಶನದಂತೆ ಸುಮಾರು 25 ಲಕ್ಷ ರು. ವೆಚ್ಚದಲ್ಲಿ ಕಂಚಿನ ಅಶ್ವಾರೂಢ ಬಸವೇಶ್ವರ ಪುತ್ಥಳಿಯನ್ನು ಮಹಾರಾಷ್ಟ್ರದ ಮೀರಜ್ ಸಿದ್ದಪಡಿಸಿದ್ದಾರೆ. ಸುಮಾರು ಒಂದೂವರೆ ಟನ್‍ ತೂಕವಿದ್ದು, ಎರಡು ವರ್ಷಗಳಿಂದ ಪುತ್ಥಳಿಯನ್ನು ಸಿದ್ದಪಡಿಸಿದ್ದಾರೆ ಎನ್ನಲಾಗಿದೆ.