ವಾಡಿಯಲ್ಲಿ ಬಸವೇಶ್ವರ ಜಯಂತ್ಯುತ್ಸವ

| Published : May 18 2024, 12:35 AM IST

ವಾಡಿಯಲ್ಲಿ ಬಸವೇಶ್ವರ ಜಯಂತ್ಯುತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಹಾಗೂ ಚಿತ್ತಾಪುರ ಸಿಪಿಐ ವಿಜಯಕುಮಾರ ಭಾವಗಿ ಬಸವ ಧ್ವಜಾರೋಹಣ ನೆರವೇರಿಸಿದರು

ಕನ್ನಡ ಪ್ರಭ ವಾರ್ತೆ ವಾಡಿ

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ವಚನ ಸಾಹಿತ್ಯದ ಮೇಧಾವಿ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಸಂಭ್ರಮ ಸಡಗರದಿಂದ ಜರಗಿತು.

ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಹಾಗೂ ಚಿತ್ತಾಪುರ ಸಿಪಿಐ ವಿಜಯಕುಮಾರ ಭಾವಗಿ ಬಸವ ಧ್ವಜಾರೋಹಣ ನೆರವೇರಿಸಿದರು. ರಾವೂರ ಶ್ರೀಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, 12ನೇ ಶತಮಾನದಲ್ಲಿ ಬಾಳಿ ಬದುಕಿದ್ದ ಬಸವಣ್ಣನವರು ಅಂದಿನ ಸಮಾಜದ ಮೂಢನಂಬಿಕೆಗಳು ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದು ಪ್ರಬಲ ಹೋರಾಟ ಕಟ್ಟಿದರು. ತಮ್ಮ ಬದುಕಿನದ್ದಕ್ಕೂ ತಾವು ನಂಬಿದ್ದ ಆದರ್ಶಗಳನ್ನು ಪಾಲಿಸುತ್ತಾ ಜನರಿಗೆ ಬೋಧಿಸುವ ಮಹಾನ್ ವ್ಯಕ್ತಿತ್ವ ಅವರದಾಗಿತ್ತು. ಹೀಗಾಗಿ ಅಂದಿನ ಶರಣರು ನುಡಿದಂತೆ ನಡೆದ ವಜ್ರಗಳಾಗಿದ್ದರು. ಬಡವರು ದೀನ ದುರ್ಬಲರು ಹಾಗೂ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅಂದಿನ ಶರಣರು ಅದರಲ್ಲೂ ವಿಶೇಷವಾಗಿ ಬಸವಣ್ಣನವರು ಎಲ್ಲರನ್ನು ಅಪ್ಪುವ ಸ್ವಭಾವ ಹೊಂದಿದ್ದರು. ಅವರ ಜೀವನ ಮೌಲ್ಯಗಳು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲಿಂಗಾಯತ ಸಮಾಜದ ಅಧ್ಯಕ್ಷಶರಣಗೌಡ ಪಾಟೀಲ ಚಾಮನೂರ, ಪ್ರಧಾನ ಕಾರ್ಯದರ್ಶಿ ಬಸವರಾಜ ಕೀರಣಗಿ, ಮುಖಂಡರಾದ ಶಾಂತಪ್ಪಶೆಳ್ಳಗಿ, ಭೀಮಾಶಾ ಜಿರೊಳ್ಳಿ, ರಾಜು ಮುಕ್ಕಣ್ಣ ರಮೇಶ ಕಾರಬಾರಿ, ಶರಣು ನಾಟೇಕರ, ಗಿಮಲ್ಲಪ್ಪ ಕಟ್ಟಿಮನಿ, ನಾಗೇಂದ್ರ ಜೈ ಗಂಗಾ, ವಿಠಲ್ ನಾಯಕ, ಅರ್ಜುನ್ ಕಾಳೇಕರ್, ಸಿದ್ದಣ್ಣ ಕಲಶೆಟ್ಟಿ ಭೀಮರಾವ್ ದೊರೆ, ವೀರಣ್ಣ ಯಾರಿ, ಜಯದೇವ ಜೋಗಿಕಲ್ ಮಠ, ಮಹಾಲಿಂಗ ಶಳ್ಳಗಿ ಸೇರಿದಂತೆ ಇತರರು ಇದ್ದರು.