ಬಸವೇಶ್ವರರ ವಚನಗಳು ಇಂದಿಗೂ ಪ್ರಸ್ತುತ

| Published : Jun 14 2024, 01:07 AM IST

ಸಾರಾಂಶ

ಪ್ರಪಂಚದ ದಾರ್ಶನಿಕರು, ವಿಚಾರವಾದಿಗಳು, ಎಡ-ಬಲ ಪಂಥಿಯರು, ಕಮ್ಯುನಿಸ್ಟರು, ಸಮಾಜವಾದಿಗಳು, ಸಮತಾವಾದಿಗಳು ಬಸವಣ್ಣನವರನ್ನು ಓದಿಕೊಂಡು ಮೆಚ್ಚಿದ್ದಾರೆ. ಅವರ ತತ್ವಗಳು ಜಾಗತಿಕ ಮಟ್ಟದಲ್ಲಿ ಪ್ರಸ್ತುತವೆನಿಸಿವೆ ಎಂದು ಡಾ.ಮೃತ್ಯುಂಜಯ ರುಮಾಲೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಪಂಚದ ದಾರ್ಶನಿಕರು, ವಿಚಾರವಾದಿಗಳು, ಎಡ-ಬಲ ಪಂಥಿಯರು, ಕಮ್ಯುನಿಸ್ಟರು, ಸಮಾಜವಾದಿಗಳು, ಸಮತಾವಾದಿಗಳು ಬಸವಣ್ಣನವರನ್ನು ಓದಿಕೊಂಡು ಮೆಚ್ಚಿದ್ದಾರೆ. ಅವರ ತತ್ವಗಳು ಜಾಗತಿಕ ಮಟ್ಟದಲ್ಲಿ ಪ್ರಸ್ತುತವೆನಿಸಿವೆ ಎಂದು ಡಾ.ಮೃತ್ಯುಂಜಯ ರುಮಾಲೆ ಹೇಳಿದರು.ನಗರದ ಜ್ಞಾಗಯೋಗಾಶ್ರಮದಲ್ಲಿ ಬಸವ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಮಾಡಿದ ಕ್ರಾಂತಿಯು ಧರ್ಮ, ಸಮಾಜ, ಅರ್ಥ, ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಬದಲಾವಣೆ ತಂದಿತು. ಹೀಗಾಗಿ ಕರ್ನಾಟಕ ಘನ ಸರಕಾರ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಿಸಿದ್ದು ಸೂಕ್ತವೂ ಹಾಗೂ ಸ್ವಾಗತಾರ್ಹವೂ ಎಂದರು.

ಸಾಹಿತಿ ಜಂಬುನಾಥ ಕಂಚ್ಯಾಣಿ ಮಾತನಾಡಿ, ಬಸವಣ್ಣ ಜಗತ್ತಿಗೆ ನೀಡಿದ ಮಹಾ ಕೊಡುಗೆಯೆಂದರೆ ಕಾಯಕ-ದಾಸೋಹ ತತ್ವಗಳು. ಇದರಿಂದ ಜಗತ್ತಿನ ಬಡತನ ನಿವಾರಣೆ ಮತ್ತು ಆರ್ಥಿಕ ಸ್ವಾವಲಂಬನೆಗಳು ಒಟ್ಟಾಗಿ ಫಲಪ್ರದವಾಗಲಿವೆ ಎಂದು ಹೇಳಿದರು.

ಸಾನ್ನಿಧ್ಯ ಜ್ಞಾಗಯೋಗಾಶ್ರಮ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿ ವಹಿಸಿದ್ದರು. ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿದರು. ವಿ.ಸಿ. ನಾಗಠಾಣ ಸ್ವಾಗತ ಪರಿಚಯ ಮಾಡಿದರು. ಎಂ.ಎಂ. ಅಂಗಡಿ ವಂದಿಸಿದರು. ಪ್ರೊ. ಎ.ಬಿ. ಬೂದಿಹಾಳ ನಿರೂಪಣೆ ಮಾಡಿದರು. ಎಸ್.ಡಿ. ಕೃಷ್ಣಮೂರ್ತಿ, ಸಂಗಮೇಶ ಗುರವ ವಚನ ಗಾಯನ ಮಾಡಿದರು. ಕಾರ್ಯಕ್ರಮದಲ್ಲಿ ಹಳ್ಳದ, ಮ.ಗು. ಯಾದವಾಡ, ಡಾ. ಎಂ.ಎಸ್. ಮದಭಾವಿ, ಸಿದ್ರಾಮಪ್ಪ ಉಪ್ಪಿನ, ಎಸ್.ಬಿ. ಸಂಬಣ್ಣಿ, ಡಾ. ವಿ.ಡಿ. ಐಹೊಳ್ಳಿ ಮುಂತಾದವರು ಉಪಸ್ಥಿತರಿದ್ದರು.