ಸಾರಾಂಶ
ಶಿವಮೊಗ್ಗ: ಶಿವಮೊಗ್ಗ ಬಸವ ಕೇಂದ್ರದಲ್ಲಿ ಸಂಭ್ರಮ ಸಡಗರದಿಂದ ಬಸವ ಜಯಂತಿ ಆಚರಿಸಲಾಯಿತು.
ಬಸವ ಕೇಂದ್ರ ಇರುವ ವೆಂಕಟೇಶ ನಗರದ ಪ್ರಮುಖ ರಸ್ತೆಗಳಲ್ಲಿ ಬಸವೇಶ್ವರರ ಪುತ್ಥಳಿಯ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ಕಳೆ ನೀಡಿದವು. ಬೆಳವಾಡಿ ಭಜನಾ ತಂಡದ ಕಲಾವಿದರ ಭಜನೆ ವಿಶೇಷವಾಗಿ ಗಮನ ಸೆಳೆಯಿತು.ನಂತರ ಬಸವ ಕೇಂದ್ರದಲ್ಲಿ ನೂರಾ ಎಂಟು ಬಸವ ನಾಮಾವಳಿ ಹೇಳಿ ಬಸವೇಶ್ವರರನ್ನು ಪೂಜಿಸಲಾಯಿತು.
ಇದೇ ವೇಳೆ ಕಾಯಕ ಯೋಗಿಗಳಾದ ಪೌರಕಾರ್ಮಿರನ್ನು ಸನ್ಮಾನಿಸಲಾಯಿತು. ನಂತರ ರಕ್ತಾಮೃತ ದಾಸೋಹಕ್ಕೆ ಬಸವ ಕೇಂದ್ರದ ಗುರುಗಳಾದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಅವರು ರಕ್ತಾಮೃತ ದಾಸೋಹ ಉದ್ಘಾಟನೆ ಮಾಡಿದರು.ಈ ಸಂದರ್ಭದಲ್ಲಿ ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಅವರಿಂದ ರಕ್ತದಾನ ನಡೆಯಿತು. ಶಾಸಕ ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಬೆನಕಪ್ಪ, ಯೋಗೀಶ್ ಮತ್ತಿತರರು ಇದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಬುಧವಾರ ಡಿವಿಎಸ್ ಕಾಲೇಜು ಬಳಿಯ ಬಸವೇಶ್ವರ ವೃತ್ತದಲ್ಲಿರುವ ಶ್ರೀಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಬಸವಕೇಂದ್ರದ ಶ್ರೀಗಳು ಶ್ರೀಬಸವಮರಳಸಿದ್ಧ ಶ್ರೀಗಳು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.ಬಳಿಕ ಮಾತನಾಡಿದ ಶ್ರೀಗಳು, ಅನುಭವ ಮಂಟಪದಿಂದ ತಳವರ್ಗದ ಪ್ರತಿಯೊಬ್ಬರೂ ಇಂದಿನ ದಿನದಲ್ಲಿ ತಲೆಯೆತ್ತಿ ಹೆಮ್ಮೆಯಿಂದ ಓಡಾಡುವ ವಾತಾವರಣ ನಿರ್ಮಾಣವಾಗಿದೆ. ಬಸವಣ್ಣನವರ ಅನುಯಾಯಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ಇಡೀ ದೇಶ, ನಾಡು ಒಂದು ನಾವೆಲ್ಲರೂ ಅಣ್ಣತಮ್ಮಂದಿರು ಒಟ್ಟಾಗಿ ಬಾಳಬೇಕು. ಸರ್ವರಿಗೆ ಸಮಪಾಲು ಸಮಬಾಳು ಸಿಗಬೇಕು ಎಂಬುವುದು ಬಸವಣ್ಣನವರ ತತ್ವ ಸಿದ್ದಾಂತವಾಗಿತ್ತು. ಅನುಭವ ಮಂಟಪವೇ ಇರಲಿಲ್ಲ. ಅದು ಸುಳ್ಳು ಎನ್ನುವವರು ಇದನ್ನು ಅರ್ಥಮಾಡಿಕೊಳ್ಳಬೇಕು. ಸತ್ಯವನ್ನು ಸುಳ್ಳೆಂದು ಸಾಧಿಸಲಾಗುವುದಿಲ್ಲ ಎಂದರು.
ಇದಕ್ಕೂ ಮುನ್ನ ನಗರದ ಬಸವಕೇಂದ್ರದಲ್ಲಿ ಕೂಡ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾಜದ ಜಿಲ್ಲಾಧ್ಯಕ್ಷರಾದ ರುದ್ರಮುನಿ ಸಜ್ಜನ್, ಪ್ರಮುಖರಾದ ರೇಣುಕಾರಾಧ್ಯ ಹೆಚ್.ಸಿ.ಯೋಗೀಶ್, ಬಳ್ಳಕೇರೆ ಸಂತೋಷ್, ಮಹಾರುದ್ರ, ಸೋಮನಾಥ್, ಗಿರೀಶ್, ಸುರೇಖಾ ಪಾಲಾಕ್ಷಪ್ಪ, ಅನಿತಾ ರವಿಶಂಕರ್, ಜಿ.ವಿಜಯ್‍ಕುಮಾರ್, ಈ.ವಿಶ್ವಾಸ್, ಸತೀಶ್ ಮುಂಚಿಮನೆ, ಅಂಕುಶ್ ಮೊದಲಾದವರು ಇದ್ದರು.ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯ ಅಂಗವಾಗಿ ಜಿಲ್ಲಾ ಯುವ ಕಾಂಗ್ರೆಸ್‌ನಿಂದ ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ ಜಿಲ್ಲಾ ಯುವ ಕಾಂಗ್ರೆಸ್ ನ ಮುಖಂಡ ಎಚ್.ಪಿ.ಗಿರೀಶ್ ಪಂಚ ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಎಸ್ ಕುಮಾರೇಶ್, ಬಸವರಾಜ್, ಯುವ ಕಾಂಗ್ರೆಸ್ನ ಪ್ರಮುಖರಾದ ಕೆ ಎಲ್ ಪವನ್, ಗುರುಪ್ರಸಾದ್, ಎಸ್.ಜೆ.ಮಿಥುನ್, ಎಸ್.ಎಸ್.ಶರತ್, ರಾಹುಲ್, ಇತರರು ಇದ್ದರು.