ಸಾರಾಂಶ
ಪ್ರತಿ ಮತಗಟ್ಟೆಯಲ್ಲಿ ಟೇಬಲ್ ಕುರ್ಚಿ ಕುಡಿಯುವ ನೀರು, ಸ್ವಚ್ಛತೆ ವಿದ್ಯುತ್ ಸೌಲಭ್ಯ ಶೌಚಾಲಯ ವ್ಯವಸ್ಥೆ ರ್ಯಾಂಪ್ ವ್ಯವಸ್ಥೆ,ಸೇರಿದಂತೆ ಇತರೆ ಮೂಲ ಸೌಲಭ್ಯಗಳು ಮತಗಟ್ಟೆಗಳ ಕೊಠಡಿಗಳಿಗೆ ಒದಗಿಸಬೇಕು.
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿ ವತಿಯಿಂದ ಮತಗಟ್ಟೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ವೀರಣ್ಣ ಕವಲಗಿ ಹೇಳಿದರು.ಅವರು ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ ಪ್ರತಿ ಮತಗಟ್ಟೆಯಲ್ಲಿ ಟೇಬಲ್ ಕುರ್ಚಿ ಕುಡಿಯುವ ನೀರು, ಸ್ವಚ್ಛತೆ ವಿದ್ಯುತ್ ಸೌಲಭ್ಯ ಶೌಚಾಲಯ ವ್ಯವಸ್ಥೆ ರ್ಯಾಂಪ್ ವ್ಯವಸ್ಥೆ,ಸೇರಿದಂತೆ ಇತರೆ ಮೂಲ ಸೌಲಭ್ಯಗಳು ಮತಗಟ್ಟೆಗಳ ಕೊಠಡಿಗಳಿಗೆ ಒದಗಿಸಬೇಕು. ಬೇಸಿಗೆ ಕಾಲ ಇರುವುದರಿಂದ ಮತದಾರರ ಸರದಿ ಹೆಚ್ಚಾದಲ್ಲಿ ನೆರಳಿನ ಕೊರತೆಯಾದರೆ ಶ್ಯಾಮಿಯಾನದ ವ್ಯವಸ್ಥೆ ಒದಗಿಸಬೇಕು. ಸಣ್ಣ ಪುಟ್ಟ ಯಾವುದೇ ರಿಪೇರಿ ಗಳಿದ್ದರೆ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ರಮೇಶ ಪಾಟೀಲ ಕ್ಷೇತ್ರ ಶಿಕ್ಷಣಾಧಿಕಾರಿ ಹಾಜಿಮಲಂಗ ಇಂಡಿಕರ ಸೇರಿದಂತೆ ಅಭಿಯಂತರರು ಅಭಿವೃದ್ಧಿ ಅಧಿಕಾರಿಗಳು ಸಿ ಆರ್ ಪಿ ಬಿ ಆರ್ ಸಿ ಸೇರಿದಂತೆ ಸರ್ಕಾರಿ ಶಾಲೆಗಳ ಮುಖ್ಯ ಗುರುಗಳಿದ್ದರು.