100 ಶಿ ಟಾಯ್ಲೆಟ್‌ ನಿರ್ಮಿಸಲು ಟೆಂಡರ್‌ ಕರೆದ ಬಿಬಿಎಂಪಿ

| Published : Mar 12 2024, 02:03 AM IST

100 ಶಿ ಟಾಯ್ಲೆಟ್‌ ನಿರ್ಮಿಸಲು ಟೆಂಡರ್‌ ಕರೆದ ಬಿಬಿಎಂಪಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಅನುಕೂಲಕ್ಕಾಗಿ ನಗರದಲ್ಲಿ 100 ಕಡೆ ‘ಶಿ’ (ಅವಳು) ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹಿಳೆಯರ ಅನುಕೂಲಕ್ಕಾಗಿ ನಗರದಲ್ಲಿ 100 ಕಡೆ ‘ಶಿ’ (ಅವಳು) ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

2023-24ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾದ ಒಂದೊಂದೇ ಯೋಜನೆಗಳನ್ನು ಈಗ ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟು 250 ಕಡೆಗಳಲ್ಲಿ ಶಿ ಶೌಚಾಲಯ ಸ್ಥಾಪಿಸುವುದಾಗಿ ಹೇಳಲಾಗಿತ್ತು. ಅದರಲ್ಲಿ ಆರಂಭಿಕ ಹಂತದಲ್ಲಿ 100 ಶೌಚಾಲಯಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಈ ಶೌಚಾಲಯಗಳು ಮಹಿಳೆಯರಿಗೆ ಮಾತ್ರ ಮೀಸಲಾಗಿರಲಿದೆ. ಶೌಚಾಲಯದಲ್ಲಿ ಫೀಡಿಂಗ್‌ ಕೊಠಡಿ, ವಿಶ್ರಾಂತ ಕೊಠಡಿಗಳೂ ನಿರ್ಮಾಣವಾಗಲಿದೆ. ಎಲ್ಲೆಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕು ಎಂಬ ಬಗ್ಗೆ ಬಿಬಿಎಂಪಿ ಈಗಾಗಲೇ ಸ್ಥಳವನ್ನೂ ಗುರುತಿಸಿ, ಪಟ್ಟಿ ಸಿದ್ಧಪಡಿಸಿದೆ. ಮುಂದಿನ 6 ತಿಂಗಳೊಳಗೆ ನೂತನ ಶೌಚಾಲಯಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ.