ಸಾರಾಂಶ
ದಾಬಸ್‌ಪೇಟೆ : ಬಿಬಿಎಂಪಿಯ ಉಪಮೇಯರ್ ಆಗಿದ್ದ ರಮೀಳಾ ಉಮಾಶಂಕರ್ ಅವರು ಕೇವಲ ರಾಜಕೀಯವಾಗಿ ಗುರುತಿಸಿಕೊಳ್ಳದೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡು ನಮಗೆ ಉತ್ತಮ ಮಾರ್ಗದರ್ಶಕರಾಗಿದ್ದರು ಎಂದು ವಿದ್ಯಾಸ್ಫೂರ್ತಿ ಇಂಟರ್ ನ್ಯಾಷನಲ್ ಅಕಾಡೆಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ರಾಮಚಂದ್ರ.ಟಿ. ತಿಳಿಸಿದರು.
ಪಟ್ಟಣದ ವಿದ್ಯಾಸ್ಫೂರ್ತಿ ಇಂಟರ್ ನ್ಯಾಷನಲ್ ಆಕಾಡೆಮಿ ಸಮೂಹ ಸಂಸ್ಥೆಯಲ್ಲಿ ಬಿಬಿಎಂಪಿ ಉಪಮೇಯರ್ ಆಗಿದ್ದ ರಮೀಳಾ ಉಮಾಶಂಕರ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ರಮೀಳಾ ಉಮಾಶಂಕರ್ ನಮ್ಮ ಶಾಲೆಯ ಸಂಸ್ಥಾಪಕರಾಗಿದ್ದು ಗ್ರಾಮೀಣ ಪ್ರದೇಶದ ಬಡ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಮೌಲ್ಯಯುತವಾದ ಶಿಕ್ಷಣ ನೀಡಬೇಕೆಂಬ ದೃಷ್ಟಿಯಿಂದ ಈ ಶಾಲೆಯನ್ನು ಪ್ರಾರಂಭಿಸಿದ್ದರು. ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದರು. ಎಲ್ಲಾ ಮಕ್ಕಳ ಅಚ್ಚುಮೆಚ್ಚಿನ ನಾಯಕರಾಗಿ ಉತ್ತಮ ಮಾರ್ಗದರ್ಶಕರಾಗಿದ್ದರು ಎಂದರು.
ಶಾಲಾ ವ್ಯವಸ್ಥಾಪಕ ಸೋಮಶೇಖರ್ ಮಾತನಾಡಿ ರಮೀಳಾ ಉಮಾಶಂಕರ್ ಉತ್ತಮ ಸೇವೆ ಮತ್ತು ಚಾಣಾಕ್ಷತೆಯಿಂದಾಗಿ ಬಿಬಿಎಂಪಿ ಉಪಮೇಯರ್ ಆಗಿ ಆಯ್ಕೆಯಾಗಿದ್ದರು. ಇವರಿಂದ ಬೆಂಗಳೂರಿನ ಜನತೆ ಉತ್ತಮ ಆಡಳಿತವನ್ನು ನೀಡುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಅವರ ಆಸೆಯಂತೆ ಶಾಲೆಯೂ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದರು.ಪೋಟೋ 3 : ದಾಬಸ್‌ಪೇಟೆ ಪಟ್ಟಣದ ವಿದ್ಯಾಸ್ಫೂರ್ತಿ ಇಂಟರ್ ನ್ಯಾಷನಲ್ ಆಕಾಡೆಮಿ ಸಮೂಹ ಸಂಸ್ಥೆಯಲ್ಲಿ ಬಿಬಿಎಂಪಿ ಉಪಮೇಯರ್ ಆಗಿದ್ದ ರಮೀಳಾ ಉಮಾಶಂಕರ್ ಅವರಿಗೆ ಶಾಲೆಯ ಆಡಳಿತ ಮಂಡಳಿಯವರು ಹಾಗೂ ವಿದ್ಯಾರ್ಥಿಗಳು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಿದರು.