ಬಿ.ಸಿ.ರೋಡ್‌ ಶ್ರೀ ರಕ್ತೇಶ್ವರಿ ಸನ್ನಿಧಿ ಬ್ರಹ್ಮಕಲಶೋತ್ಸವ ಸಂಪನ್ನ

| Published : Apr 10 2025, 01:17 AM IST

ಸಾರಾಂಶ

ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಏ.4ರಂದು ಆರಂಭಗೊಂಡ ಬ್ರಹ್ಮಕಲಶೋತ್ಸವದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಸಂಪನ್ನಗೊಂಡವು. ಬೆಳಗ್ಗೆ 8.29ಕ್ಕೆ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ರಕೇಶ್ವರಿ ದೇವೀ ಬಿಂಬ ಪುನ‌ರ್ ಪ್ರತಿಷ್ಠೆ, ಜೀವ ಕಲಶಾಭಿಷೇಕ ಹಾಗೂ ಪರಿಕಲಶಾಭಿಷೇಕ ನಡೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಏ.4ರಂದು ಆರಂಭಗೊಂಡ ಬ್ರಹ್ಮಕಲಶೋತ್ಸವದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಸಂಪನ್ನಗೊಂಡವು.

ಬೆಳಗ್ಗೆ 8.29ಕ್ಕೆ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ರಕೇಶ್ವರಿ ದೇವೀ ಬಿಂಬ ಪುನ‌ರ್ ಪ್ರತಿಷ್ಠೆ, ಜೀವ ಕಲಶಾಭಿಷೇಕ ಹಾಗೂ ಪರಿಕಲಶಾಭಿಷೇಕ ನಡೆಯಿತು. ಮಧ್ಯಾಹ್ನ 12ಕ್ಕೆ ಬ್ರಹ್ಮಕಲಶಾಭಿಷೇಕ, ನಾಗದೇವರ ಹಾಗೂ ಪರಿವಾರ ದೈವದ ಪ್ರತಿಷ್ಠಾ ಕಾರ್ಯಕ್ರಮಗಳು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನೆರವೇರಿದವು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ ಏ.4ರಿಂದ 9ರ ಅವಧಿಯಲ್ಲಿ ಸನ್ನಿಧಿಗೆ ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ಅಧ್ಯಕ್ಷ ಡಾ. ಬಿ.ರಮೇಶಾನಂದ ಸೋಮಯಾಜಿ, ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಶ್ರೀ ರಕೇಶ್ವರಿ ದೇವಿ ಸನ್ನಿಧಿ ಅಧ್ಯಕ್ಷ ಬಿ.ವಿಶ್ವನಾಥ್, ಕಾರ್ಯದರ್ಶಿ ಎನ್.ಶಿವಶಂಕರ್, ಕೋಶಾಧಿಕಾರಿ ಬಿ.ಮೋಹನ್, ಬ್ರಹ್ಮಕಲಶೋತ್ಸವ ಸಮಿತಿ ಸಹಕಾರ್ಯಾಧ್ಯಕ್ಷರಾದ ಜಗನ್ನಾಥ ಚೌಟ, ಭುವನೇಶ್ ಪಚ್ಚಿನಡ್ಕ, ಉಪಾಧ್ಯಕ್ಷರಾದ ಲೋಕನಾಥ ಶೆಟ್ಟಿ, ಚಂದ್ರಹಾಸ ಶೆಟ್ಟಿ, ರಾಜಶೇಖರ ರೈ, ಚಂದ್ರಪ್ರಕಾಶ ಶೆಟ್ಟಿ, ದಿವಾಕರ ಪಂಬದಬೆಟ್ಟು, ನೇಮಿರಾಜ ಶೆಟ್ಟಿ, ರಾಮಕೃಷ್ಣ ಆಳ್ವ, ಸುದರ್ಶನ ಜೈನ್, ಪದ್ಮಶೇಖರ ಜೈನ್, ಉಮೇಶ್ ಕುಮಾರ್ ವೈ, ರವೀಂದ್ರ ಕಂಬಳಿ, ಪ್ರಸಾದ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಐತಪ್ಪ ಪೂಜಾರಿ, ಕೋಶಾಧಿಕಾರಿ ನಾರಾಯಣ ಹೆಗ್ಡೆ, ಸಹಕೋಶಾಧಿಕಾರಿ ವಸಂತ ರಾವ್, ರಕ್ತೇಶ್ವರಿ ದೇವಿ ಸನ್ನಿಧಿ ಸೇವಾ ಸಮಿತಿ ಸದಸ್ಯರಾದ ಗೋಪಾಲ ಸುವರ್ಣ, ಬಿ.ರಾಮಚಂದ್ರ ನಾಯಕ್, ಸೋಮನಾಥ ನಾಯ್ಡು, ರಾಜೇಶ್ ಎಲ್. ನಾಯಕ್, ಶ್ರೀಧರ ಮಲ್ಲಿ, ಅಶ್ವನಿ ಕುಮಾ‌ರ್ ರೈ ರಮೇಶ್ ಸಾಲ್ಯಾನ್, ಸತೀಶ್ ಕುಮಾರ್, ಪ್ರಮೋದ್ ಕುಮಾರ್, ಪದ್ಮನಾಭ ಆಚಾರ್ಯ, ಪ್ರಧಾನ ಅರ್ಚಕ ಪ್ರಕಾಶ ಸೋಮಯಾಜಿ, ಅರ್ಚಕ ರಘುಪತಿ ಭಟ್ ಇದ್ದರು.

ಉಗ್ರಾಣ, ಸ್ವಯಂಸೇವಕರ ಸೇವೆ:

ಬ್ರಹ್ಮಕಲಶೋತ್ಸವ ವೇಳೆ ಸಾವಿರಾರು ಜನರಿಗೆ ಅನ್ನಸಂತರ್ಪಣೆಗಾಗಿ ಪಕ್ಕದಲ್ಲಿ ಇರುವ ಪ್ರೇಮನಾಥ ಅವರ ವಿಶಾಲವಾದ ಜಾಗ ಆಯ್ಕೆ ಮಾಡಲಾಗಿತ್ತು. ಸ್ಥಳೀಯ ಹಲವು ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಯುವಕರು, ಮಕ್ಕಳು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ್ದು, ಓಣಿಬೈಲ್ ಶಂಕರನಾರಾಯಣ ಐತಾಳ್ ನೇತೃತ್ವದ ಪಾಕಶಾಸ್ತ್ರಜ್ಞರ ತಂಡ ಭಕ್ತಾದಿಗಳಿಗೆ ಪ್ರಸಾದ ಭೋಜನ ತಯಾರಿಸಿದರು.

ಆಹಾರ ಪದಾರ್ಥ ದಾಸ್ತಾನಿರಿಸಲಾದ ಉಗ್ರಾಣವನ್ನು ಸದಾಶಿವ ಕೈಕಂಬ ನೇತೃತ್ವದ ತಂಡ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದು, ಸ್ವಯಂಸೇವಕರ ತಂಡವೇ ಈ ಕೆಲಸ ನಿರ್ವಹಿಸಲು ಶ್ರಮಿಸಿತ್ತು.

ಅನ್ನಸಂತರ್ಪಣೆ ಸಮಿತಿಯಲ್ಲಿ ಸದಾನಂದ ಶೆಟ್ಟಿ ರಂಗೋಲಿ, ರಾಜೇಶ್ ಎಲ್. ನಾಯಕ್, ಕೃಷ್ಣಪ್ಪ ಕಲ್ಲಡ್ಕ, ಉಮೇಶ್ ಗಾಂದೋಡಿ, ಹಸಿರುಹೊರೆಕಾಣಿಕೆ ಸಮಿತಿಯಲ್ಲಿ ಬೇಬಿ ಕುಂದ‌ರ್, ದೇವದಾಸ ಶೆಟ್ಟಿ, ಚಂದ್ರಹಾಸ ಪಲ್ಲಿಪ್ಪಾಡಿ, ಲೋಕೇಶ್‌ ಸುವರ್ಣ ಅಲೆತ್ತೂರು,ಉಗ್ರಾಣ ನಿರ್ವಹಣಾ ಸಮಿತಿಯಲ್ಲಿ ಸದಾಶಿವ ಕೈಕಂಬ, ಚಂದ್ರಶೇಖರ ಕುಲಾಲ್‌, ಸ್ವಯಂಸೇವಾ ಸಮಿತಿಯಲ್ಲಿ ಸೋಮನಾಥ ಸಾಲ್ಯಾನ್, ಗಣೇಶ್, ಅಲಂಕಾರ ಸಮಿತಿಯಲ್ಲಿ ಗಂಗಾಧರ ಸಾಲ್ಯಾನ್, ಶೈಲೇಶ್‌, ಲೋಕೇಶ್‌,ನೀರು ಸರಬರಾಜು ಸಮಿತಿಯಲ್ಲಿ ಸುನಿಲ್ ಕುಂದ‌ರ್, ಸುರೇಶ್ ಮಿತ್ತಬೈಲ್, ಉಮೇಶ್, ವಿದ್ಯುದಾಲಂಕಾರ, ಮೇಲ್ವಿಚಾರಣೆ ಸಮಿತಿಯಲ್ಲಿ ರಾಜೀವ ಪೂಜಾರಿ, ಸಂದೀಪ್‌, ವೈದ್ಯಕೀಯ ಸಮಿತಿಯಲ್ಲಿ ಡಾ. ಶಿವಪ್ರಸಾದ್‌ ಶೆಟ್ಟಿ, ಡಾ. ಸೌಮ್ಯ, ನೈರ್ಮಲ್ಯ ಮತ್ತು ಸ್ವಚ್ಛತಾ ಸಮಿತಿಯಲ್ಲಿ ಶಿವ ಭಂಡಾರಿಬೆಟ್ಟು, ರವಿ ಕೊಡಂಗೆ, ಭಜನಾ ನಿರ್ವಹಣಾ ಸಮಿತಿಯಲ್ಲಿ ಜಗದೀಶ ಹೊಳ್ಳ, ಸತೀಶ್‌, ದಾಮೋದರ ನೆತ್ರಕೆರೆ, ಆತಿಥಿ ಸತ್ಕಾರ ಸಮಿತಿಯಲ್ಲಿ ಪುಷ್ಪರಾಜ್‌ ಶೆಟ್ಟಿ ಬಿಸಿರೋಡ್‌, ರಮೇಶ್ ಸಾಲಿಯಾನ್, ಸೇವಾ ಪ್ರಸಾದ ವಿತರಣಾ ಸಮಿತಿಯಲ್ಲಿ ಮೋಹನ್ ಬಿ, ರಾಘವೇಂದ್ರ ಬನ್ನಿಂತಾಯ, ಪದ್ಮನಾಭ ಗೌಡ, ಪೂಜಾಸಾಮಗ್ರಿ ಸಂಗ್ರಹ ಮತ್ತು ವಿತರಣಾ ಸಮಿತಿಯಲ್ಲಿ ಶಶಿಧರ ಭಟ್, ಪದ್ಮನಾಭ ಹೊಳ್ಳ, ವೈದಿಕ ಸಮಿತಿಯಲ್ಲಿ ಶ್ರೀವತ್ಸ ಭಟ್, ಕಲಶ ಸಮಿತಿಯಲ್ಲಿ ಕಿಶೋರ್, ಸುಷ್ಮಾಚರಣ್, ಸವಿತ ಜಗನ್ನಾಥ ಶೆಟ್ಟಿ, ವೇದಿಕೆ, ಧಾರ್ಮಿಕ ಸೇವಾ ಸಮಿತಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯಲ್ಲಿ ಮೋಹನದಾಸ ಕೊಟ್ಟಾರಿ, ದಿನೇಶ್ ಸುವರ್ಣ ರಾಯಿ, ಸೇವಾ ಕಚೇರಿ, ಕಾರ್ಯಾಲಯ ನಿರ್ವಹಣಾ ಸಮಿತಿಯಲ್ಲಿ ಐತಪ್ಪ ಪೂಜಾರಿ, ಸತೀಶ್‌ ಶೆಟ್ಟಿ ಮೊಡಂಕಾಪು, ಸ್ವಾಗತ ಸಮಿತಿಯಲ್ಲಿ ಇಂದಿರೇಶ್‌, ಚಿತ್ತರಂಜನ್ ಶೆಟ್ಟಿ ಬೊಂಡಾಲ ಹಾಗೂ ಆಶಾ ಪಿ ರೈ ಸಂಚಾಲಕ, ಸಹಸಂಚಾಲಕರಾಗಿ ಸಹಕರಿಸಿದ್ದರು.