ಬಿಡಿಸಿಸಿ ಬ್ಯಾಂಕ್‌ನಿಂದ ೧೮ ಕೋಟಿ ಸಾಲ ವಿತರಣೆ

| Published : Aug 19 2025, 01:00 AM IST

ಸಾರಾಂಶ

ಚನ್ನಪಟ್ಟಣ: ಡಿಸಿಸಿ ಬ್ಯಾಂಕ್‌ನಿಂದ ೮೯ ಕೋಟಿ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಬೆಳೆಸಾಲ ಮತ್ತು ಸ್ವಸಹಾಯ ಸಂಘದ ಸಾಲ ನೀಡಿದ್ದು, ಇನ್ನು ಮುಂದೆ ಯುಪಿಐ ಆಧಾರಿತ ಮೊಬೈಲ್ ಬ್ಯಾಂಕಿಂಗ್ ಸೇವೆ ಸಹ ನೀಡಲಿದ್ದೇವೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್‌ದೇವ್ ತಿಳಿಸಿದರು.

ಚನ್ನಪಟ್ಟಣ: ಡಿಸಿಸಿ ಬ್ಯಾಂಕ್‌ನಿಂದ ೮೯ ಕೋಟಿ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಬೆಳೆಸಾಲ ಮತ್ತು ಸ್ವಸಹಾಯ ಸಂಘದ ಸಾಲ ನೀಡಿದ್ದು, ಇನ್ನು ಮುಂದೆ ಯುಪಿಐ ಆಧಾರಿತ ಮೊಬೈಲ್ ಬ್ಯಾಂಕಿಂಗ್ ಸೇವೆ ಸಹ ನೀಡಲಿದ್ದೇವೆ ಎಂದು ಬಿಡಿಸಿಸಿ

ಬ್ಯಾಂಕ್ ಅಧ್ಯಕ್ಷ ವಿಜಯ್‌ದೇವ್ ತಿಳಿಸಿದರು.

ಬಿಡಿಸಿಸಿ ಚನ್ನಪಟ್ಟಣ ಬಿಡಿಸಿಸಿ ಶಾಖೆ ಮತ್ತು ಕೋಡಂಬಹಳ್ಳಿ ಶಾಖೆ ವ್ಯಾಪ್ತಿಯ ಪಿಎಸಿಎಸ್‌ಗಳ ಮೂಲಕ ೧೮ ಕೋಟಿ ಕೆಸಿಸಿ ಬೆಳೆ ಸಾಲ ಮತ್ತು ಸ್ವಸಹಾಯ ಸಂಘಕ್ಕೆ ಶೂನ್ಯಬಡ್ಡಿ ದರದಲ್ಲಿ ವಿತರಿಸಿದ ಸಾಲದ ಚೆಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಈವರೆಗೆ ಬಿಡಿಸಿಸಿ ಬ್ಯಾಂಕ್ ಮೂಲಕ ನಬಾರ್ಡ್‌ ಸಹಕಾರದಲ್ಲಿ ಕೋಟ್ಯಂತರ ರು. ಸಾಲ ನೀಡಲಾಗಿದೆ. ಆದರೆ ಇದೇ ಮೊದಲ ಬಾರಿಗೆ ನಬಾರ್ಡ್‌ನಿಂದ ಕಡಿಮೆ ಸಾಲ ಬಂದಿರುವ ನಿಟ್ಟಿನಲ್ಲಿ ಗ್ರಾಹಕರು ಬ್ಯಾಂಕ್‌ನಲ್ಲಿ ಇಟ್ಟಿರುವ ಠೇವಣಿ ಹಣದಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ. ಇದೀಗ ಯುಪಿಎ ಮೂಲಕ ಮೊಬೈಲ್‌ನಲ್ಲೇ ಫೋನ್ ಪೇ, ಗೂಗಲ್ ಪೇ ವಹಿವಾಟು ಮಾಡಲು ಸೌಲಭ್ಯ ಕಲ್ಪಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಬಿಡಿಸಿಸಿ ಬ್ಯಾಂಕ್‌ನಿಂದ ಪಿಎಸಿಎಸ್‌ಗಳ ಮೂಲಕವೇ ಎರಡು ಹಸು ಕೊಳ್ಳಲು ೧.೮೦ ಲಕ್ಷ ಸಾಲ ಸೌಲಭ್ಯ ಶೇ.೩ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಮಿನಿ ಡೈರಿಗೆ ೧೫ ಲಕ್ಷ ಸಾಲ ನೀಡಲಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಕೇಂದ್ರದಿಂದ ಕಳೆದ ೧ ವರ್ಷದಿಂದ ರೈತರಿಗೆ ಕೆಸಿಸಿ ಬೆಳೆಸಾಲ ನೀಡಿರಲಿಲ್ಲ. ಆದರೆ ಡಿ.ಕೆ.ಸುರೇಶ್ ಹಾಗೂ ಸಿ.ಪಿ.ಯೋಗೇಶ್ವರ್ ರೈತರಿಗೆ ಕೆಸಿಸಿ ಬೆಳೆಸಾಲ ನೀಡಬೇಕು ಎಂದು ಪಟ್ಟು ಹಿಡಿದಿದ್ದರಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಲ ನೀಡಲು ತಾಕೀತು ಮಾಡಿದ್ದರು. ಈ ನಿಟ್ಟಿನಲ್ಲಿ ಗ್ರಾಹಕರ ಠೇವಣಿ ಹಣದಿಂದ ಸಾಲ ನೀಡಲಾಗಿದೆ ಎಂದರು.

ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ರೈತರು ಮೈಕ್ರೋ ಫೈನಾನ್ಸ್‌ಗಳ ಮೂಲಕ ಸಾಲ ಪಡೆದು ಕಟ್ಟಲಾಗದೆ ಅವರಿಂದ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಆದರೆ ಶೂನ್ಯಬಡ್ಡಿ ದರದಲ್ಲಿ ಸ್ವ ಸಹಾಯ ಸಂಘಗಳ ಮೂಲಕ ಸಾಲ ನೀಡಿ ರೈತರನ್ನು ಸ್ವಾವಲಂಬಿಯನ್ನಾಗಿಸುತ್ತಿರುವುದು ಶ್ಲಾಘನೀಯ. ಸರ್ಕಾರದ ಆದೇಶದಂತೆ ಪ್ರತಿ ಗ್ರಾಪಂಗೆ ಒಂದು ಪಿಎಸಿಎಸ್ ನಿರ್ಮಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಕೂ ರುದೊಡಿ ಜಯರಾಂ, ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್, ಕೆಪಿಸಿಸಿ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್, ಬೋರ್‌ವೆಲ್ ರಂಗನಾಥ್, ಶಿವಮಾದು ಇತರರಿದ್ದರು.

ಪೊಟೋ೧೭ಸಿಪಿಟಿ೧:

ಬಿಡಿಸಿಸಿ ಬ್ಯಾಂಕ್‌ನಿಂದ ಕೆಸಿಸಿ ಬೆಳೆ ಸಾಲ ಮತ್ತು ಸ್ವಸಹಾಯ ಸಂಘಕ್ಕೆ ಶೂನ್ಯಬಡ್ಡಿ ದರದಲ್ಲಿ ಸಾಲದ ಚೆಕ್‌ ವಿತರಿಸುವ ಕಾರ್ಯಕ್ರವನ್ನು ಗಣ್ಯರು ಉದ್ಘಾಟಿಸಿದರು.