ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಒಕ್ಕಲಿಗರು ಕೃಷಿಗೆ ಸೀಮಿತವಾಗದೆ ಬದಲಾಗುತ್ತಿರುವ ಸ್ಥಾನಮಾನಕ್ಕೆ ತಕ್ಕಂತೆ ಬದುಕನ್ನು ಕೂಡ ಬದಲಾಯಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.ನಗರ ಹೊರವಲಯದ ಎಸ್‌ಜೆಸಿ ತಾಂತ್ರಿಕ ಕಾಲೇಜಿನ ವೈಮಾನಿಕ ವಿಭಾಗದ ಬಿಜಿಎಸ್ ಸಭಾಂಗಣದಲ್ಲಿ ಫಸ್ಟ್ ಸರ್ಕಲ್ ಸೊಸೈಟಿ ಉದ್ಯಮಿ ಒಕ್ಕಲಿಗದ ಚಿಕ್ಕಬಳ್ಳಾಪುರ ಜಿಲ್ಲಾ ಫಸ್ಟ್ ಸರ್ಕಲ್ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಾಲಕ್ಕೆ ತಕ್ಕಂತೆ ಬದಲಾಗಿಕೃತಕ ಬುದ್ದಿಮತ್ತೆ, ರೋಬೊಟಿಕ್ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ನಾವು ಎಚ್ಚೆತ್ತುಕೊಳ್ಳದಿದ್ದರೆ ಯಂತ್ರ ಮಾನವ ಜೊತೆ ಯುದ್ಧ ಮಾಡುವ ಇಲ್ಲವೇ ಸ್ಪರ್ಧೆ ಮಾಡುವ ಕಾಲ ಬರಲಿದೆ. ಬದಲಾವಣೆಗೆ ತಕ್ಕಂತೆ ನಾವು ಬದಲಾಗಿ ಸ್ಪರ್ಧೆ ಎದುರಿಸಲು ಸನ್ನದ್ದರಾಗಬೇಕು. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಮುಂತಾದ ಕ್ಷೇತ್ರದಲ್ಲಿ ನಾಲ್ಕಾರು ಜನರಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಬೇಕು. ಇಲ್ಲದಿದ್ದರೆ ಡೈನೋಸರ್ ರೀತಿ ಅವನತಿ ಹೊಂದಬೇಕಾಗುತ್ತದೆ ಎಂದರು.
ಆದರೆ ಒಕ್ಕಲಿಗ ಉದ್ಯಮಿಯಾದರೆ ಹಲವು ಮಂದಿಗೆ ಉದ್ಯೋಗ ನೀಡಬಹುದು. ಗಂಗ ಅರಸರ ಕಾಲದಿಂದಲೂ ಒಕ್ಕಲಿಗರು ಒಕ್ಕಲುತನದ ಜೊತೆಗೆ ಸಾಮ್ರಾಜ್ಯವನ್ನು ಕಟ್ಟಿ ಆಳಿದ್ದಾರೆ. ಗಂಗರ ಸಾಮಾಜ್ಯದ ರಾಜಧಾನಿ ಕೋಲಾರವಾಗಿತ್ತು. ಗಂಗ ಅರಸರ ಕಾಲದಲ್ಲಿ ಉಪಪಂಗಡಗಳು ಇರಲಿಲ್ಲ. ಉದ್ಯಮಿ ಒಕ್ಕಲಿಗ ಸಮಾವೇಶದಲ್ಲಿ ಎಲ್ಲರೂ ಒಂದಾಗಿರುವುದು ಸಂತೋಷ. ಬೇಸಾಯದ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ವಿಸ್ತರಿಸಿಕೊಡಬೇಕು. ಆ ಮೂಲಕ ನಾಡಿಗೆ ಅನ್ನ ನೀಡುವ ಒಕ್ಕಲಿಗ ಉದ್ಯೋಗ ನೀಡುವ ಉದ್ಯಮಿಯಾಗಬೇಕು ಎಂದು ಸಲಹೆ ಮಾಡಿದರು.ಗೌಡ ಹೆಗ್ಗಳಿಕೆ ಉಳಿಸಿಕೊಳ್ಳಿ
ಬೇರೊಬ್ಬರ ಮರ್ಜಿಯಲ್ಲಿದ್ದರೆ ಜಾತಿ ಅಥವಾ ಗೌಡ ಎಂಬ ಹೆಸರನ್ನು ಹೇಳಿಕೊಳ್ಳಲು ಹಿಂಜರಿಕೆಯಾಗುತ್ತದೆ. ನಾವು ನಾಯಕನ ಸ್ಥಾನದಲ್ಲಿ ಇದ್ದಾಗ ನಾವೇ ಇನ್ನೊಬ್ಬರಿಗೆ ಉದ್ಯೋಗ ನೀಡುವಂತಾದರೆ ಗೌಡ ಎಂಬ ಹೆಗ್ಗಳಿಕೆ ಉಳಿಯುತ್ತದೆ. ಫಸ್ಟ್ ಸರ್ಕಲ್ ಸೊಸೈಟಿಯ ಮುಖ್ಯಸ್ಥ ಜಯರಾಂ ರಾಯಪುರ್ ಅವರು ಉದ್ಯಮಿಗಳನ್ನು ಬೆಸೆಯುವ ಕಾರ್ಯ ಮಾಡುತ್ತಿದ್ದು, ಶ್ರೀಮಠದಿಂದ ಎಲ್ಲ ಸಹಕಾರ ನೀಡುವುದಾಗಿ ಹೇಳಿದರು.ಸಾಮರ್ಥ್ಯ ಇರುವ ಯುವಕರನ್ನು ಉದ್ಯಮಿಗಳನ್ನಾಗಿ ಬೆಳೆಸಬೇಕು. ಉದ್ಯಮ ಕ್ಷೇತ್ರದಲ್ಲಿ ಒಕ್ಕಲಿಗರು ಮೊದಲ ಸ್ಥಾನಕ್ಕೆ ಬರಬೇಕು. ದೊಡ್ಡ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಬೇಕು. ಒಕ್ಕಲಿಗ ಉದ್ಯಮಿಗಳ ನಡುವೆ ಸ್ಪರ್ಧೆ ಬೇಡ. ಒಬ್ಬರಿಗೊಬ್ಬರು ಅನ್ಯೂನ್ಯತೆಯಿಂದ ಇರಬೇಕು. ಪರಸ್ಪರ ಸಹಾಯ ಮನೋಭಾವ ರೂಢಿಸಿಕೊಳ್ಳಬೇಕು. ಕೃಷಿ ಜೊತೆಗೆ ಆದಾಯ ಬರುವ ಇತರೆ ಮೂಲಗಳನ್ನು ರೂಢಿಸಿಕೊಳ್ಳಬೇಕು ಎಂದರು. ಸಮುದಾಯದ ನಾಯಕತ್ವಫಸ್ಟ್ ಸರ್ಕಲ್ ಸೊಸೈಟಿಯ ಮುಖ್ಯಸ್ಥ ಜಯರಾಂ ರಾಯಪುರ್ ಮಾತನಾಡಿ, ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ದೀಪದಂತೆ ಸಮುದಾಯವನ್ನು ಉಜ್ವಲವಾಗಿ ಬೆಳೆಸುತ್ತಾರೆ. ಇಡೀ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕಾರ್ಯ ಮಾಡಿದ್ದಾರೆ. ಸಮುದಾಯದ ಮುಖಂಡರು, ನಮ್ಮಂಥ ನಾಯಕರು ತಪ್ಪು ಮಾಡಿದಾಗ ನಿಷ್ಠೂರವಾಗಿ ಹೇಳಬಹುದು ಎಂದರು.
ಇದೇ ವೇಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 2025 ರ ಜನವರಿ 3 ರಿಂದ 5 ರವರೆಗೆ ನಡೆಯಲಿರುವ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ ಪೋ -2025 ನ ಕಿರು ಹೊತ್ತಿಗೆಯನ್ನು ಬಿಡುಗಡೆ ಗೊಳಿಸಲಾಯಿತುಕಾರ್ಯಕ್ರಮದಲ್ಲಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಎಸ್ ಜೆಸಿಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಟಿ.ರಾಜು, ರಿಜಿಸ್ಟ್ರಾರ್ ಜೆ.ಸುರೇಶ್,ಒಕ್ಕಲಿಗ ಮುಖಂಡರಾದ ಆರ್.ಆಂಜನೇಯರೆಡ್ಡಿ, ಚಿಕ್ಕಗರಿಗರೆಡ್ಡಿ, ಸಂದೀರೆಡ್ಡಿ, ಬಿ.ರೆಡ್ಡಿ, ಕೆ.ಆರ್.ರೆಡ್ಡಿ, ಪುರದಗಡ್ಡೆ ಕೃಷ್ಣಪ್ಪ,ಎಂ.ಪ್ರಕಾಶ್, ವೀರೇಂದ್ರರೆಡ್ಡಿ,ಹನುಮಂತಯ್ಯ, ಶ್ರೀನಿವಾಸ್, ಮಾರೇಗೌಡ, ಮತ್ತಿತರರು ಇದ್ದರು.