ರೇಬೀಸ್ ಕಾಯಿಲೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಎಸ್‌.ಎಸ್.ಜಗದೀಶ್ ಸಲಹೆ

| Published : Oct 16 2025, 02:00 AM IST

ರೇಬೀಸ್ ಕಾಯಿಲೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಎಸ್‌.ಎಸ್.ಜಗದೀಶ್ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದ್ದು ರೇಬೀಸ್‌ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಸೀನಿಯರ್ ಚೆಂಬರ್ ಇಂಟರ್ ನ್ಯಾಶನಲ್ ಸಂಸ್ಥೆ ಅಧ್ಯಕ್ಷ ಎಸ್.ಎಸ್.ಜಗದೀಶ್

- ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಆಶ್ರಯದಲ್ಲಿ ಡಿಸಿಎಂಸಿಶಾಲೆಯಲ್ಲಿ ರೇಬೀಸ್ ಬಗ್ಗೆ ಅರಿವು ಕಾರ್ಯಕ್ರಮ

ನರಸಿಂಹರಾಜಪುರ: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದ್ದು ರೇಬೀಸ್‌ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಸೀನಿಯರ್ ಚೆಂಬರ್ ಇಂಟರ್ ನ್ಯಾಶನಲ್ ಸಂಸ್ಥೆ ಅಧ್ಯಕ್ಷ ಎಸ್.ಎಸ್.ಜಗದೀಶ್

ಮಂಗಳವಾರ ಪಟ್ಟಣದ ಡಿಸಿಎಂಸಿ ಪ್ರೌಢ ಶಾಲೆಯಲ್ಲಿ ಸೀನಿಯರ್ ಚೆಂಬರ್ ಇಂಟರ್ ನ್ಯಾಷನಲ್ ಹಾಗೂ ಪಶು ವೈದ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ರೇಬೀಸ್ ಕಾಯಿಲೆ ಬಗ್ಗೆ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಿಗೆ ರೇಬೀಸ್ ಕಾಯಿಲೆ ಬಗ್ಗೆ ಹೆಚ್ಚು ಮಾಹಿತಿ ತಿಳಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಕ್ಕಳು ರೇಬೀಸ್ ಕಾಯಿಲೆ ಬಗ್ಗೆ ತಿಳಿದುಕೊಂಡು ತಮ್ಮ ಪೋಷಕರಿಗೂ ಈ ಬಗ್ಗೆ ತಿಳಿಸಬೇಕು.ಈ ಹಿಂದೆ ಜೂನಿಯರ್‌ ಛೇಂಬರ್ ನಲ್ಲಿ ಇದ್ದ ನಾವು ವಯಸ್ಸಿನ ಮಿತಿಯಿಂದ ಈಗ ಸೀನಿಯರ್ ಚೇಬರ್ ರಚಿಸಿಕೊಂಡು ಸಮಾಜಕ್ಕೆ ಉಪಯೋಗವಾಗುವ ಹಲವಾರು ಕಾರ್ಯಕ್ರಮ ನಡೆಸುತ್ತಿದ್ದೇವೆ. ಬಹುತೇಕ ಸರ್ಕಾರಿ ಶಾಲೆ ಗಳಲ್ಲೇ ನಾವು ಕಾರ್ಯಕ್ರಮ ನಡೆಸಿದ್ದೇವೆ. ಮಕ್ಕಳಿಗೆ ಉಪಯೋಗವಾಗುವ ಶಾಲಾ ಬ್ಯಾಗ್ ಹಾಗೂ ಇತರ ಶಾಲಾ ಕಲಿಕಾ ಸಾಮಾಗ್ರಿ ನೀಡಿದ್ದೇವೆ ಎಂದರು.

ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರೀತಂ ಕುಮಾರ್ ರೇಬೀಸ್ ಕಾಯಿಲೆ ಬಗ್ಗೆ ಮಾತನಾಡಿ, ಪ್ರಸ್ತುತ ಎಲ್ಲರ ಮನೆಗಳಲ್ಲೂ ನಾಯಿ ಸಾಕುತ್ತಾರೆ. ನಾಯಿಗಳಿಗೆ ಕಡ್ಡಾಯವಾಗಿ ಪ್ರತಿ ವರ್ಷ ಒಂದು ಬಾರಿ ರೇಬೀಸ್ ಚುಚ್ಚು ಮುದ್ದು ಹಾಕಿಸಬೇಕು. ನಾಯಿ ಇತರೆ ಪ್ರಾಣಿಗಳು ಕಚ್ಚಿದರೆ 5 ಇಂಜೆಕ್ಷನ್ ತೆಗೆದುಕೊಳ್ಳಬೇಕು.ರೇಬೀಸ್ ಬಂದರೆ ಅದಕ್ಕೆ ಔಷದಿ ಇರುವುದಿಲ್ಲ. ಹಸು, ಎಮ್ಮೆ ಮುಂತಾದ ಪ್ರಾಣಿಗಳ ಜೊಲ್ಲಿನಿಂದ ಕೂಡಾ ರೇಬೀಸ್ ರೋಗ ಬರಬಹುದು. ಆದ್ದರಿಂದ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಸಭೆಯಲ್ಲಿ ಸೀನಿಯರ್ ಚೇಂಬರ್ ಖಜಾಂಚಿ ಎಸ್‌.ಎಸ್.ಗಿರಿ, ಸದಸ್ಯ ಕೆ.ಎಸ್.ರಾಜಕುಮಾರ್,ಡಿಸಿಎಂಸಿ ಶಾಲೆ ಪ್ರಾಂಶುಪಾಲೆ ಪದ್ಮ ರಮೇಶ್ , ಪಶು ಇಲಾಖೆ ಮಂಜುನಾಥ್ ಇದ್ದರು.