ಸಾರಾಂಶ
ತಾಲೂಕಿನಾದ್ಯಂತ ಜನರಿಗೆ ಕುಡಿಯುವ ನೀರು ಹಾಗೂ ರೈತರಿಗೆ ಬೀಜದ ಕೊರತೆಯಾಗದಂತೆ ಎಚ್ಚರವಹಿಸಬೇಕು ಎಂದು ಶಾಸಕ ವಿಠ್ಠಲ ಕಟಕಧೋಂಡ ಅಧಿಕಾರಿಗಳಿಗೆ ಹೇಳಿದರು.
ಕನ್ನಡಪ್ರಭ ವಾರ್ತೆ ಚಡಚಣ
ತಾಲೂಕಿನಾದ್ಯಂತ ಜನರಿಗೆ ಕುಡಿಯುವ ನೀರು ಹಾಗೂ ರೈತರಿಗೆ ಬೀಜದ ಕೊರತೆಯಾಗದಂತೆ ಎಚ್ಚರವಹಿಸಬೇಕು ಎಂದು ಶಾಸಕ ವಿಠ್ಠಲ ಕಟಕಧೋಂಡ ಅಧಿಕಾರಿಗಳಿಗೆ ಹೇಳಿದರು.ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾದ ಟಾಸ್ಕ್‌ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಡಿಯುವ ನೀರಿನ ಕೊರತೆಯನ್ನು ಕಂಡು ಬಂದಲ್ಲಿ ಅಧಿಕಾರಿಗಳ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸದ ಅವರು, ಬೀಜ ಹಾಗೂ ಗೊಬ್ಬರದ ಕೊರತೆಯಾದರೆ ತಕ್ಷಣ ಕ್ರಮ ಕೈಗೊಂಡು ಎರಡು ಮೂರು ಕೌಂಟರ್ ತೆಗೆದು ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ಹಬೀದ ಗದ್ಯಾಳ ಮಾತನಾಡಿ, ತಾಲೂಕಿನ ಕೇಂದ್ರ ಕಚೇರಿಯಲ್ಲಿದ್ದುಕೊಂಡು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ನಮ್ಮ ಗಮನಕ್ಕೆ ಇಲ್ಲದೇ ರಜೆ ತೆಗೆದುಕೊಳ್ಳುವಂತಿಲ್ಲ. ರಜೆ ಬೇಕಾದರೂ ನಮ್ಮ ಗಮನಕ್ಕೆ ತರಬೇಕು ಇಲ್ಲದೇ ಹೋದಲ್ಲಿ ಕಾನೂನು ಕ್ರಮ ಗ್ಯಾರಂಟಿ ಎಂದ ಅವರು, ಜನರಿಗೆ ಯಾವುದೇ ತರಹದ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.ಇದೇ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನಪ್ಪಿದ ಎಮ್ಮಗಳ ಮಾಲೀಕರಿಗೆ ತಲಾ ₹37500 ಪರಿಹಾರ ವಿತರಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಾಜೇಶ ಬುರ್ಲಿ ಮಾತನಾಡಿ, ತಾಲೂಕಿನಾದ್ಯತ ಕರ್ಕಶವಾಗಿ ಕೇಳಿಬಂದ ಶಬ್ದದಿಂದ ಯಾರೊಬ್ಬರೂ ಭಯ ಪಡುವ ಅವಶ್ಯಕತೆಇಲ್ಲ ಎಂದರು. ವರಿದಿಯ ಪ್ರಕಾರ ಭೂಮಿಯಲ್ಲಿ ನೀರಿನ ಒಳ ಹರಿವು ಹಾಗೂ ಸುಣ್ಣಿನ ಕಲ್ಲಿನ ಮೆದುವಾದ ಸಂದರ್ಭದಲ್ಲಿ ಈ ತರಹದ ಶಬ್ಧ ಕೇಳಿ ಬರುವ ಸಾಧ್ಯತೆ ಇರುತ್ತದೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಹಂತದ ಅಧಿಕಾರಿಗಳು ಉಪಸ್ಥಿತರಿದ್ದರು.