ಪಕ್ಷದ ನಾಯಕರ ಬಗ್ಗೆ ಮಾತಾಡುವಾಗ ಎಚ್ಚರದಿಂದಿರಿ : ಬಿಜೆಪಿ ಮುಖಂಡ ಸಿದ್ದರಾಜ ಹೋಳಿ

| N/A | Published : Apr 12 2025, 12:50 AM IST / Updated: Apr 12 2025, 12:41 PM IST

ಪಕ್ಷದ ನಾಯಕರ ಬಗ್ಗೆ ಮಾತಾಡುವಾಗ ಎಚ್ಚರದಿಂದಿರಿ : ಬಿಜೆಪಿ ಮುಖಂಡ ಸಿದ್ದರಾಜ ಹೋಳಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಇಷ್ಟೊಂದು ಪ್ರಬಲವಾಗಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾತ್ರ ಬಹುಮುಖ್ಯವಾಗಿದೆ. ಕಾಲಿಗೆ ಚಕ್ರ ಕಟ್ಟಿಕೊಂಡು ಬಿಜೆಪಿ ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷದ ಬಲವರ್ಧನೆಗೊಳಿಸಿದ್ದಾರೆ ಎಂದು ಬಿಜೆಪಿ ಮುಖಂಡ ಸಿದ್ದರಾಜ ಹೋಳಿ ಹೇಳಿದರು.

 ಮುದ್ದೇಬಿಹಾಳ :  ರಾಜ್ಯದಲ್ಲಿ ಬಿಜೆಪಿ ಇಷ್ಟೊಂದು ಪ್ರಬಲವಾಗಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾತ್ರ ಬಹುಮುಖ್ಯವಾಗಿದೆ. ಕಾಲಿಗೆ ಚಕ್ರ ಕಟ್ಟಿಕೊಂಡು ಬಿಜೆಪಿ ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷದ ಬಲವರ್ಧನೆಗೊಳಿಸಿದ್ದಾರೆ ಎಂದು ಬಿಜೆಪಿ ಮುಖಂಡ ಸಿದ್ದರಾಜ ಹೋಳಿ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡಹಳ್ಳಿ ಅಭಿಮಾನಿ ಬಳಗದಿಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ, ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಭಾವಚಿತ್ರಗಳಿಗೆ ಕ್ಷೀರಾಭಿಷೇಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಕ್ಷದ ಮಹಾನ್‌ ನಾಯಕರ ಬಗ್ಗೆ ಯತ್ನಾಳ ಅವರು ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಬೇಕು. ತತ್ವ, ಸಿದ್ಧಾಂತಗಳ ಮೇಲೆ ಪಕ್ಷ ಗಟ್ಟಿಗೊಂಡಿದೆ. ಆದರೇ ಅಂತಹ ಶಿಸ್ತಿನ ಪಕ್ಷದಲ್ಲಿ ಯಾವ ನಾಯಕರನ್ನು ಬಿಡದೆ ಬಾಯಿಗೆ ಬಂದಂತೆ ಬೈದು ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದರಿಂದ ಯತ್ನಾಳರನ್ನು ಉಚ್ಚಾಟನೆ ಮಾಡಿದ್ದಾರೆ. ಅದನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ನಾಯಕರಾದ ಬಿ.ಎಸ್.ಯಡಿಯೂರಪ್ಪ, ರಾಜಾಧ್ಯಕ್ಷ, ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿಯವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಸುಟ್ಟು ಅಪಮಾನಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ, ಮಾ.17ರಂದು ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ಮುದ್ದೇಬಿಹಾಳದಲ್ಲಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಈ ವೇಳೆ ಮುಖಂಡರಾದ ಎಂ.ಎಸ್.ಪಾಟೀಲ, ಪ್ರಭು ಕಡಿ, ಮುತ್ತು ಸಾಹುಕಾರ ಅಂಗಡಿ, ಮಲಕೇಂದ್ರಯಾಗೌಡ ಪಾಟೀಲ, ಗುರುನಾಥಗೌಡ ಬಿರಾದಾರ, ಗೌರಮ್ಮ ಹುನಗುಂದ, ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಅಶೋಕ ಒನಹಳ್ಳಿ, ಮುಖಂಡರಾದ ರಾಜಶೇಖರ ಹೊಳಿ, ಬಸವರಾಜ ಸರೂರ, ಗಿರಿಶಗೌಡ ಪಾಟೀಲ, ಮಾಂತು ಗಂಗನಗೌಡರ, ಶ್ರೀಶೈಲ ರೂಢಗಿ, ಸೋಮನಗೌಡ ಪಾಟೀಲ, ಸೋಮಶೇಖರ ಮೇಟಿ, ರಾಜು ಮೇಟಿ, ಸಂಜು ಬಾಗೇವಾಡಿ, ವಿಜಯ ಬಡಿಗೇರ ಸುಭಾಶ ಕಟ್ಟಿಮನಿ ಸೇರಿದಂತೆ ಹಲವರು ಇದ್ದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡಹಳ್ಳಿ ಅಭಿಮಾನಿ ಬಳಗದಿಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜಾಧ್ಯಕ್ಷ, ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಭಾವಚಿತ್ರಗಳಿಗೆ ಕ್ಷೀರಾಭಿಷೇಕ ಮಾಡಲಾಯಿತು.