ಸಾರಾಂಶ
ಇಂದಿನ ಮಕ್ಕಳು ಸೂಕ್ಷ್ಮ ಮನಸ್ಥಿತಿವುಳ್ಳವರಾಗಿದ್ದು, ಪ್ರತಿಭೆ ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನ್ಯಾಯ ಸಮ್ಮತವಾಗಿ ತೀರ್ಪುಗಾರರು ಆಯ್ಕೆ ಮಾಡಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ರಾಮಪ್ಪ ನ್ಯಾಮತಿಯಲ್ಲಿ ಹೇಳಿದ್ದಾರೆ.
- ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡಿ.ರಾಮಪ್ಪ ಸಲಹೆ - - - ನ್ಯಾಮತಿ: ಇಂದಿನ ಮಕ್ಕಳು ಸೂಕ್ಷ್ಮ ಮನಸ್ಥಿತಿವುಳ್ಳವರಾಗಿದ್ದು, ಪ್ರತಿಭೆ ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನ್ಯಾಯ ಸಮ್ಮತವಾಗಿ ತೀರ್ಪುಗಾರರು ಆಯ್ಕೆ ಮಾಡಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ರಾಮಪ್ಪ ಹೇಳಿದರು.
ಪಟ್ಟಣಕ್ಕೆ ಸಮೀಪವಿರುವ ಸುರಹೊನ್ನೆ ಶಾಂತಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸುರಹೊನ್ನೆ ಕ್ಲಸ್ಟರ್ ಹಂತದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪಠ್ಯೇತರ ಪ್ರತಿಭೆಯನ್ನು ಗುರುತಿಸಲು ಕಲಿಕಾ ಹಬ್ಬವು ಉತ್ತಮ ವೇದಿಕೆಯಾಗಿದೆ. ಈ ವೇದಿಕೆ ಬಳಸಿ ವಿದ್ಯಾರ್ಥಿಗಳು ಸಾಂಸ್ಕೃತಿಕವಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ 12 ಶಾಲೆಗಳ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬೆಳಗುತ್ತಿ ಕ್ಲಸ್ಟರ್ ತೀರ್ಪುಗಾರರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ನೀಡಿ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಣೆ ಮಾಡಲಾಯಿತು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಅನ್ನಪೂರ್ಣ ಪಿ.ಒ., ಕ್ಷೇತ್ರ ಸಮನ್ವಯಾಧಿಕಾರಿ ತಿಪ್ಪೇಸ್ವಾಮಿ, ಬಿಆರ್‌ಪಿಸಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಉಮೇಶ್, ಮಹೇಶ್ವರಪ್ಪ, ಸತ್ಯಪ್ರಕಾಶ್ ಮಾತನಾಡಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಸಿದ್ಧಪ್ಪ, ಜ್ಞಾನೇಶ, ರಾ.ಸ.ನೌ. ಸಂಘದ ನಿರ್ದೇಶಕರಾದ ಪ್ರಭು, ಸುರೇಶ, ರೇಖಾ, ಸವಿತಾ, ಸುರಹೊನ್ನೆ ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಇದ್ದರು.- - - -ಪೋಟೋ:
ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಡಿ.ರಾಮಪ್ಪ ಮಾತನಾಡಿದರು.