ಗುಣಾತ್ಮಕ ಶಿಕ್ಷಣ ನೀಡಲು ಸನ್ನದ್ಧರಾಗಿ- ಬಿಇಒ ಸುರೇಂದ್ರ ಕಾಂಬಳೆ

| Published : Jan 01 2024, 01:15 AM IST

ಗುಣಾತ್ಮಕ ಶಿಕ್ಷಣ ನೀಡಲು ಸನ್ನದ್ಧರಾಗಿ- ಬಿಇಒ ಸುರೇಂದ್ರ ಕಾಂಬಳೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕ ವೃತ್ತಿ ಪವಿತ್ರವಾದುದು, ಸಮಾಜ ಅತ್ಯಂತ ಗೌರವದಿಂದ ಕಾಣುವ ವೃತ್ತಿಯಾಗಿದೆ. ಸಮಾಜ ನೀಡುವ ಗೌರವಕ್ಕೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಸಮಾಜದ ಋಣ ಸಂದಾಯ ಮಾಡಬೇಕು.

ಕುಷ್ಟಗಿ: ಶಿಕ್ಷಕರು ಶಾಲೆಯ ಜೀವಾಳ, ಸಮುದಾಯ ಮತ್ತು ಶಿಕ್ಷಣ ಇಲಾಖೆ ನಡುವಿನ ಸೇತುವೆಯಾಗಿ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಶ್ರಮಿಸಿ ಎಂದು ಬಿಇಒ ಸುರೇಂದ್ರ ಕಾಂಬಳೆ ಕರೆ ನೀಡಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ, ಹೊಸದಾಗಿ ನೇಮಕಗೊಂಡ 150 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಎಸ್.ವಿ. ಡಾಣಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದುದು, ಸಮಾಜ ಅತ್ಯಂತ ಗೌರವದಿಂದ ಕಾಣುವ ವೃತ್ತಿಯಾಗಿದೆ. ಸಮಾಜ ನೀಡುವ ಗೌರವಕ್ಕೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಸಮಾಜದ ಋಣ ಸಂದಾಯ ಮಾಡಿ ಎಂದರು. ಕ್ಷೇತ್ರ ಸಮನ್ವಯ ಅಧಿಕಾರಿ ಜಗದೀಶಪ್ಪ ಮೇಣೆದಾಳ ಪ್ರಾಸ್ತಾವಿಕ ಮಾತನಾಡಿದರು. ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಾಲಾಜಿ ಬಳಿಗಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಲಕ್ಷ್ಮಣ್ ಪೂಜಾರ, ಅಧ್ಯಕ್ಷ ಮಲ್ಲಪ್ಪ ಕುದುರಿ, ಕಾರ್ಯದರ್ಶಿ ಹೈದರಲಿ ಜಾಲಿಹಾಳ್, ಜಿಪಿಟಿ ಸಂಘದ ಅಧ್ಯಕ್ಷ ಸುಭಾನ್ ಸಾಬ್ ನದಾಫ್, ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಲಕ್ಕಲಕಟ್ಟಿ ಮಾತನಾಡಿದರು, ಶಿಕ್ಷಣ ಹಕ್ಕು ಕುರಿತು ಬಿಆರ್‌ಪಿ ಶರಣಪ್ಪ ತೆಮ್ಮಿನಾಳ, ಶಿಕ್ಷಕರು ನಿರ್ವಹಿಸಬೇಕಾದ ಶೈಕ್ಷಣಿಕ ದಾಖಲೆಗಳ ಕುರಿತು ಬಿಆರ್‌ಪಿ ಡಾ. ಜೀವನ್ ಸಾಬ್ ವಾಲಿಕಾರ್, ತರಗತಿ ಪ್ರಕ್ರಿಯೆ ಕುರಿತು ಇಸಿಒ ದಾವಲಸಾಬ್ ವಾಲಿಕಾರ್, ಕೆಸಿಎಸ್‌ಆರ್ ನಿಯಮಗಳ ಕುರಿತು ಕೃಷ್ಣಮೂರ್ತಿ ದೇಸಾಯಿ ವಿಶೇಷ ಉಪನ್ಯಾಸ ನೀಡಿದರು. ಗುರಪ್ಪ ಕುರಿ, ಅಹ್ಮದ್ ಹುಸೇನ್ ಆದೋನಿ, ಅಮರೇಗೌಡ ನಾಗೂರ, ಸೋಮಲಿಂಗಪ್ಪ ಗುರಿಕಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ರುದ್ರೇಶ್ ಬೂದಿಹಾಳ, ಬೀರಪ್ಪ ಕುರಿ, ಹೊನ್ನಪ್ಪ ಡೊಳ್ಳಿನ, ಅಲ್ತಾಫ್ ಹುಸೇನ್ ಮುಜಾವರ್, ಶಿಕ್ಷಣ ಸಂಯೋಜಕ ತಿಮ್ಮಣ್ಣ ಹಿರೇವಳಿ, ಶಿವಾನಂದ ಪಂಪಣ್ಣವರ್, ಲೋಕೇಶ್ ಜಿ. ಇತರರು ಉಪಸ್ಥಿತರಿದ್ದರು. ಶ್ರೀಕಾಂತ ಬೆಟಗೇರಿ ಕಾರ್ಯಕ್ರಮ ನಿರ್ವಹಿಸಿದರು.