ಮಾತೃಭಾಷೆ ಕನ್ನಡದ ಬಗ್ಗೆ ಅಭಿಮಾನ ಮೆರೆಯಿರಿ: ಲಲಿತ

| Published : Nov 02 2025, 02:30 AM IST

ಸಾರಾಂಶ

ಶಾಲೆಯ ಮಕ್ಕಳು ಕನ್ನಡ ಭಾಷೆಯನ್ನು ಕುರಿತ ಹಲವು ಹಾಡುಗಳು ಜೊತೆಗೆ ರಾಜಮನೆತನದ ಇತಿಹಾಸದ ನಾಟಕವನ್ನು ಕುರಿತ ಹಾಡುಗಳಿಗೆ ಅಭಿನಯಿಸಿ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು.

ಕೆ.ಎಂ.ದೊಡ್ಡಿ: ಮಾತೃಭಾಷೆ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅಭಿಮಾನ ಮೆರೆಯಬೇಕು ಎಂದು ಭಾರತೀ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಲಲಿತ ತಿಳಿಸಿದರು.

ಇಲ್ಲಿನ ಸ್ನೇಹ ವಿದ್ಯಾಸಂಸ್ಥೆ ವತಿಯಿಂದ ಶಾಲೆಯಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿರುವ ಹಲವಾರು ಭಾಷೆಗಳನ್ನು ಕಲಿಯಿರಿ. ಆದರೆ, ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು ಎಂದು ಸಂದೇಶ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಸಂಸ್ಥಾಪಕ ಡಿ.ದಾಸೇಗೌಡ ಮಾತನಾಡಿ, ಕನ್ನಡ ಭಾಷೆಯನ್ನು ಸದಾ ಗೌರವಿಸಬೇಕು. ಭಾಷೆ ಉಳಿಯಲು ಇತರ ಭಾಷಿಕರಿಗೂ ಕನ್ನಡ ಕಲಿಸಬೇಕು ಎಂದು ಕಿವಿಮಾತು ಹೇಳಿದರು.

ಶಾಲೆಯ ಮಕ್ಕಳು ಕನ್ನಡ ಭಾಷೆಯನ್ನು ಕುರಿತ ಹಲವು ಹಾಡುಗಳು ಜೊತೆಗೆ ರಾಜಮನೆತನದ ಇತಿಹಾಸದ ನಾಟಕವನ್ನು ಕುರಿತ ಹಾಡುಗಳಿಗೆ ಅಭಿನಯಿಸಿ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು.

ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷೆ ಶಶಿಕಲಾ ದಾಸೇಗೌಡ, ಮುಖ್ಯ ಶಿಕ್ಷಕ ರವಿಶಂಕರ್, ಸಹ ಶಿಕ್ಷಕ ಸ್ವರೂಪ, ಶ್ವೇತ, ರೂಪಿಣಿ, ಮಮತಾ, ಮಾಲಾ, ರಶ್ಮಿ, ಉಷಾರಾಣಿ, ಸವಿತಾ, ಸಹನಾ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

----

ಪಾರ್ವತಿ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ದೇವಲಾಪುರ: ಹೋಬಳಿ ಕೇಂದ್ರದ ಪಾರ್ವತಿ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.

ಕನ್ನಡ ಸಾಹಿತ್ಯ ಅಭಿಮಾನಿಗಳು ಸಾರ್ವಜನಿಕರು ಬಡಾವಣೆಯಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರ ಪೂಜಿಸಿ ಧ್ವಜಾರೋಹಣ ಮಾಡುವ ಮುಖಾಂತರ ಕನ್ನಡ ರಾಜ್ಯೋತ್ಸವ ಆಚರಿಸಿ ಸಿಹಿ ಹಂಚಿದರು.