ಸಮಾಜದಲ್ಲಿ ಧ್ವನಿ ಇಲ್ಲದವರ ಪರವಾಗಿ ನಿಂತು, ಶೋಷಿತರು, ಬಡವರು ಹಾಗೂ ನೊಂದವರಿಗೆ ನ್ಯಾಯ ಕೊಡಿಸುವ ಶಕ್ತಿಯಾಗಿ ಸಂಘಟನೆಗಳು ರೂಪುಗೊಳ್ಳಬೇಕು. ಸಂಘಟನೆಗಳ ಬಲ ಕೇವಲ ಸದಸ್ಯರ ಸಂಖ್ಯೆಯಲ್ಲಿರದೇ, ಸಮಾಜದ ಸಂಕಷ್ಟದಲ್ಲಿರುವ ಜನರಿಗೆ ನೀಡುವ ನೆರವು ಮತ್ತು ನ್ಯಾಯದ ಪರವಾಗಿ ನಡೆಸುವ ಹೋರಾಟದಲ್ಲಿ ಅಡಗಿದೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಕಾನೂನು ಸಲಹೆಗಾರ, ವಕೀಲ ತಿಪ್ಪೇಸ್ವಾಮಿ ಎಸ್. ಗೋಗುದ್ದು ಹೇಳಿದ್ದಾರೆ.

- ವಕೀಲ ತಿಪ್ಪೇಸ್ವಾಮಿ ಎಸ್. ಗೋಗುದ್ದು ಸಲಹೆ । ಅಂಬೇಡ್ಕರ್ ಸೇವಾ ಸಮಿತಿ ತಾಲೂಕು ಘಟಕ ರಚನೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ಸಮಾಜದಲ್ಲಿ ಧ್ವನಿ ಇಲ್ಲದವರ ಪರವಾಗಿ ನಿಂತು, ಶೋಷಿತರು, ಬಡವರು ಹಾಗೂ ನೊಂದವರಿಗೆ ನ್ಯಾಯ ಕೊಡಿಸುವ ಶಕ್ತಿಯಾಗಿ ಸಂಘಟನೆಗಳು ರೂಪುಗೊಳ್ಳಬೇಕು. ಸಂಘಟನೆಗಳ ಬಲ ಕೇವಲ ಸದಸ್ಯರ ಸಂಖ್ಯೆಯಲ್ಲಿರದೇ, ಸಮಾಜದ ಸಂಕಷ್ಟದಲ್ಲಿರುವ ಜನರಿಗೆ ನೀಡುವ ನೆರವು ಮತ್ತು ನ್ಯಾಯದ ಪರವಾಗಿ ನಡೆಸುವ ಹೋರಾಟದಲ್ಲಿ ಅಡಗಿದೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಕಾನೂನು ಸಲಹೆಗಾರ, ವಕೀಲ ತಿಪ್ಪೇಸ್ವಾಮಿ ಎಸ್. ಗೋಗುದ್ದು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ರಾಜ್ಯಾಧ್ಯಕ್ಷ ಸಂದೇಶ ನೇತೃತ್ವದಲ್ಲಿ ನಡೆದ ಅಂಬೇಡ್ಕರ್ ಸೇವಾ ಸಮಿತಿಉ ಜಗಳೂರು ತಾಲೂಕು ಘಟಕ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.

ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ಸಾವಿರಾರು ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಸಂಘಟನೆಗಳು ಕೇವಲ ಹೆಸರಿಗೆ ಸೀಮಿತವಾಗದೆ, ಅಂಬೇಡ್ಕರ್ ಅವರ ತತ್ವ, ಆದರ್ಶ ಮತ್ತು ಸಮಾನತೆಯ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವುದು, ಶೋಷಿತರ ಪರವಾಗಿ ಧ್ವನಿ ಎತ್ತುವುದು ಹಾಗೂ ಸಂಕಷ್ಟದಲ್ಲಿ ಇರುವವರಿಗೆ ಆಸರೆ ಆಗುವುದು ಸಂಘಟನೆಗಳ ಪ್ರಮುಖ ಜವಾಬ್ದಾರಿ ಆಗಬೇಕು. ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಂಘಟನೆಗಳ ಅಸ್ತಿತ್ವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಸಂದೇಶ ಅವರು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಜಗಳೂರು ತಾಲೂಕು ಘಟಕವೂ ಜನಪರ ಕಾರ್ಯಗಳ ಮೂಲಕ ಮಾದರಿ ಸಂಘಟನೆಯಾಗಿ ಬೆಳೆಯಬೇಕು ಎಂದು ಆಶಿಸಿದರು.

ಜಿಲ್ಲಾ ಗೌರವಾಧ್ಯಕ್ಷ ನೀಲಗಿರಿ ಮಂಜಪ್ಪ, ಜಿಲ್ಲಾ ಕಾರ್ಯದರ್ಶಿ ನವಿಲೇಹಾಳು ಕೃಷ್ಣಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಮಹಾಂತೇಶ್, ಹಾಲೇಶ್, ಭರತೇಶ್ ಸೇರಿದಂತೆ ಸಮಿತಿಯ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪದಾಧಿಕಾರಿಗಳ ಆಯ್ಕೆ:

ಜಿಲ್ಲಾ ಶಾಖೆಯ ಅಧ್ಯಕ್ಷ ಕುಮಾರ್ ಚೀಲೂರು ಅವರ ಅಧ್ಯಕ್ಷತೆಯಲ್ಲಿ ಜಗಳೂರು ತಾಲೂಕು ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ಅಧ್ಯಕ್ಷರಾಗಿ ಪ್ರದೀಪ್ ಚಿಕ್ಕಮಲ್ಲನಹೊಳೆ, ಉಪಾಧ್ಯಕ್ಷರಾಗಿ ಋಷಬೇಂದ್ರಪ್ಪ, ಸಹಾಯಕ ಅಧ್ಯಕ್ಷರಾಗಿ ಶಿವಣ್ಣ, ಗೌರವಾಧ್ಯಕ್ಷರಾಗಿ ಮಲ್ಲೇಶ್, ಪ್ರಧಾನ ಕಾರ್ಯದರ್ಶಿಯಾಗಿ ಭರಮಸಮುದ್ರ ಮಲ್ಲೇಶ್, ಖಜಾಂಚಿಯಾಗಿ ರುದ್ರಮುನಿ, ಕಾರ್ಯದರ್ಶಿಯಾಗಿ ನಾಗರಾಜ್, ಸಂಘಟನಾ ಕಾರ್ಯದರ್ಶಿಗಳಾಗಿ ಎಂ.ಟಿ. ಬಾಬು ಮತ್ತು ಬಸಣ್ಣ, ಸಾಮಾಜಿಕ ಜಾಲತಾಣ ಪ್ರಚಾರಕರಾಗಿ ನಿಂಗರಾಜ್, ಕಾನೂನು ಸಲಹೆಗಾರರಾಗಿ ವಕೀಲ ಹನುಮಂತಪ್ಪ ಹಾಗೂ ಮಾಧ್ಯಮ ಸಲಹೆಗಾರರಾಗಿ ಎಂ. ರಾಜಪ್ಪ ಅವರನ್ನು ಆಯ್ಕೆ ಮಾಡಲಾಯಿತು.

- - -

-05ಜೆ.ಜಿ.ಎಲ್.1:

ಜಗಳೂರು ಪ್ರವಾಸಿ ಮಂದಿರದಲ್ಲಿ ಗುರುವಾರ ರಾಜ್ಯಾಧ್ಯಕ್ಷ ಸಂದೇಶ ನೇತೃತ್ವದಲ್ಲಿ ನಡೆದ ಅಂಬೇಡ್ಕರ್ ಸೇವಾ ಸಮಿತಿ . ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಶಾಖೆ ಅಧ್ಯಕ್ಷ ಕುಮಾರ್ ಚೀಲೂರು ಅಧ್ಯಕ್ಷತೆಯಲ್ಲಿ ಜಗಳೂರು ತಾಲೂಕು ಸಮಿತಿ ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.