ಸರ್ಕಾರಿ ಶಾಲೆಗಳ ಸಬಲೀಕರಣವೇ ಗ್ರಾಮೀಣ ಶಿಕ್ಷಣದ ಬಲವರ್ಧನೆ, ಗ್ರಾಮೀಣ ಮಕ್ಕಳ ಸಾಧನೆಗೆ ಪ್ರೋತ್ಸಾಹವೇ ಉತ್ತಮ ಸಮಾಜ ನಿರ್ಮಾಣದ ಅಡಿಪಾಯ. ಈ ಅಶಯದೊಂದಿಗೆ ಕಳಿಂಗಪ್ಪ ಮಂಜುನಾಥ್ ಹಾಗೂ ಕಳಿಂಗಪ್ಪ ಅಸೋಸಿಯೇಷನ್ ಕೈಗೊಳ್ಳುತ್ತಿರುವ ಶಿಕ್ಷಣಪರ ಸೇವೆಗಳು ಶ್ಲಾಘನೀಯವಾಗಿದ್ದು, ಇನ್ನಷ್ಟು ಸರ್ಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಲಿ ಎಂದು ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಆಶಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ ಸರ್ಕಾರಿ ಶಾಲೆಗಳ ಸಬಲೀಕರಣವೇ ಗ್ರಾಮೀಣ ಶಿಕ್ಷಣದ ಬಲವರ್ಧನೆ, ಗ್ರಾಮೀಣ ಮಕ್ಕಳ ಸಾಧನೆಗೆ ಪ್ರೋತ್ಸಾಹವೇ ಉತ್ತಮ ಸಮಾಜ ನಿರ್ಮಾಣದ ಅಡಿಪಾಯ. ಈ ಅಶಯದೊಂದಿಗೆ ಕಳಿಂಗಪ್ಪ ಮಂಜುನಾಥ್ ಹಾಗೂ ಕಳಿಂಗಪ್ಪ ಅಸೋಸಿಯೇಷನ್ ಕೈಗೊಳ್ಳುತ್ತಿರುವ ಶಿಕ್ಷಣಪರ ಸೇವೆಗಳು ಶ್ಲಾಘನೀಯವಾಗಿದ್ದು, ಇನ್ನಷ್ಟು ಸರ್ಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಲಿ ಎಂದು ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಆಶಿಸಿದರು. ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೊಟ್ಟು ಮಾತನಾಡಿದ ಎ. ಮಂಜು ಅವರು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಮಹತ್ತರ ಉದ್ದೇಶದೊಂದಿಗೆ ಕಳಿಂಗಪ್ಪ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹಲವು ಶೈಕ್ಷಣಿಕ ಮತ್ತು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿರುವುದಕ್ಕೆ ಎ. ಮಂಜು ಮೆಚ್ಚಗೆ ವ್ಯಕ್ತಪಡಿಸಿದರು. ಕಳಿಂಗಪ್ಪ ವೆಲ್ಫೇರ್‌ ಅಸೋಸಿಯೇಷನ್‌ನ ಕಳಿಂಗಪ್ಪ ಮಂಜುನಾಥ್ ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯ ಹನ್ಯಾಳು ಸರ್ಕಾರಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಕಂಪ್ಯೂಟರ್ ಹಾಗೂ ವಿವಿಧ ಶೈಕ್ಷಣಿಕ ಅಪ್ಲಿಕೇಶನ್‌ಗಳನ್ನು ಕೊಡುಗೆಯಾಗಿ ನೀಡಿದ ನಂತರ ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೂ ತಂತ್ರಜ್ಞಾನ ಆಧಾರಿತ ಶಿಕ್ಷಣ ದೊರೆಯಬೇಕು, ಕಂಪ್ಯೂಟರ್ ಜ್ಞಾನ ಹಾಗೂ ಡಿಜಿಟಲ್ ಕಲಿಕಾ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಅವಕಾಶ ಸಿಗಬೇಕು ಎಂಬ ಆಶಯದಿಂದ ಈ ಕೊಡುಗೆಯನ್ನು ನೀಡಲಾಗಿದೆ ಎಂದರು. ಹನ್ಯಾಳು ಹಿರಿಯ ವಿದ್ಯಾರ್ಥಿ ಬಳಗದ ಸಂಚಾಲಕರು ಅಶೋಕ್ ಹನ್ಯಾಳು ಮಾತನಾಡಿ ಕಳಿಂಗಪ್ಪ ಮಂಜುನಾಥ್ ಅವರು ಅರಕಲಗೂಡು ತಾಲೂಕಿನ ಹನ್ಯಾಳು ಸೇರಿದಂತೆ ಕೆಲವು ಶಾಲೆಗಳು ಮತ್ತು ಆಲೂರು ತಾಲೂಕಿನ ಹಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅವುಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಗ್ರಾಮೀಣ ಮಕ್ಕಳಿಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಾನವಾದ ಕಲಿಕಾ ಅವಕಾಶಗಳು ದೊರೆಯಬೇಕು ಎಂಬುದು ಅವರ ಆಶಯವಾಗಿದೆ. ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು, ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುವುದು ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕೈಜೋಡಿಸುತ್ತಿದ್ದಾರೆ. ಈ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದಲ್ಲಿಯೂ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಲು ನೆರವಾಗುವುದರ ಜೊತೆಗೆ, ಇತರ ವಿದ್ಯಾರ್ಥಿಗಳಿಗೂ ಉತ್ತಮ ಸಾಧನೆ ಮಾಡಲು ಪ್ರೇರಣೆ ನೀಡುವ ಉದ್ದೇಶ ಹೊಂದಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆರ್ಥಿಕ ಅಥವಾ ಮೂಲಸೌಕರ್ಯಗಳ ಕೊರತೆಯಿಂದ ಗುಣಮಟ್ಟದ ಶಿಕ್ಷಣ ವಂಚಿತವಾಗಬಾರದು. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ದೊರೆಯುವ ಶೈಕ್ಷಣಿಕ ಅವಕಾಶಗಳು ಗ್ರಾಮೀಣ ಮಕ್ಕಳಿಗೂ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮತ್ತು ದಾನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದು, ಕಂಪ್ಯೂಟರ್ ಹಾಗೂ ಶೈಕ್ಷಣಿಕ ಅಪ್ಲಿಕೇಶನ್‌ಗಳನ್ನು ಒದಗಿಸುವುದು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳ ಮೂಲಕ ಪ್ರೋತ್ಸಾಹ ನೀಡುವುದು ಕಳಿಂಗಪ್ಪ ವೆಲ್ಫೇರ್ ಅಸೋಸಿಯೇಷನ್‌ನ ಶಿಕ್ಷಣಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಉಪನಿರ್ದೇಶಕರಾದ ಡಾ ಅಶೋಕ್ ಹನ್ಯಾಳ್, ಗಂಗೂರು ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳಾದ ಡಾ ದಿಲೀಪ್, ಪಿಡಿಒ ಹೇಮಲತಾ, ಗಂಗೂರು ಗ್ರಾಮದ ಮುಖಂಡರಾದ ಬಂಕ್ ಮಂಜಣ್ಣ, ಕುಮಾರಸ್ವಾಮಿ, ಜಗದೀಶ್ ಲೋಕನಾಥ್, ಪುನೀತ್ ಹಾಗೂ ಇತರ ಮುಖಂಡರು ಹೊಸಹಳ್ಳಿ ಗ್ರಾಮದ ವಾಸು, ನಾರಾಯಣ, ಕೃಷ್ಣೇಗೌಡ ಹಾಗೂ ಇತರೆ ಮುಖಂಡರುಗಳು ಹಾಗೂ ಹನ್ಯಾಳು ಗ್ರಾಮದ ಹೆಚ್ ವಿ ಈಶ್ವರೇಗೌಡರು, ರವಿ, ಗುಂಡಣ್ಣ, ಮಂಜುನಾಥ್, ಸುಹಾಸ್, ಉದಯ್, ಸಂತೋಷ್, ಹನುಮೇಶ್, ಅವಿನಾಶ್, ಯತೀಶ್ ಹಾಗೂ ಶಿಕ್ಷಕರುಗಳು, ಗ್ರಾಮಸ್ಥರು ಹಾಗೂ ಹೆಚ್ ಎನ್ ನಂಜೇಗೌಡರ ಅಭಿಮಾನಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.