ಸಾರಾಂಶ
ತರೀಕೆರೆ ವಕೀಲರ ಸಂಘದಿಂದ ನೂತನ ನ್ಯಾಯಾಧೀಶರಿಗೆ ಅಭಿನಂದನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ತರೀಕೆರೆನೂತನವಾಗಿ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ತರೀಕೆರೆ ವಕೀಲರ ಸಂಘದ ಸದಸ್ಯ ರಮೇಶ್.ಕೆ ಮತ್ತು ಪೂಜಾಕುಮಾರ್ ಅವರಿಗೆ ತರೀಕೆರೆ ವಕೀಲರ ಸಂಘದಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೈದ್ಯ ಶ್ರೀಕಾಂತ್ ಭಾಗವಹಿಸಿ ನೂತನ ನ್ಯಾಯಾಧೀಶರನ್ನು ಸನ್ಮಾನಿಸಿ ಮಾತನಾಡಿದರು. ಕರ್ತವ್ಯ ನಿರ್ವಹಿಸಿ ತೀರ್ಪು ನೀಡುವಾಗ, ಬರೆಯುವಾಗ ಎಚ್ಚರವಹಿಸಬೇಕು. ಕಷ್ಟಪಟ್ಟು ನ್ಯಾಯಾಧೀಶರಾಗಿರುವ ನೀವು ಜ್ಞಾನ ಹೆಚ್ಚಿಸಿಕೊಳ್ಳಬೇಕು. ವಕೀಲರನ್ನು ಗೌರವಯುತವಾಗಿ ಕಾಣಬೇಕು. ಕಿರಿಯ ವಕೀಲರನ್ನು ಪ್ರೋತ್ಸಾಹಿಸಬೇಕು ಎಂದ ಅವರು ನ್ಯಾಯಾಧೀಶರಿಗೆ ಗೌನ್ ಗಳನ್ನು ಉಡುಗೊರೆಯಾಗಿ ನೀಡಿ ಅಭಿನಂದಿಸಿದರು.ವಕೀಲರ ಸಂಘದ ಅಧ್ಯಕ್ಷ ಬಿ. ಶೇಖರ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಬ್ಬರೂ ನ್ಯಾಯಾಧೀಶ ರಾಗಿ ಆಯ್ಕೆಯಾಗಿರುವುದು ನಮ್ಮ ವಕೀಲರ ಸಂಘಕ್ಕೆ ಹೆಮ್ಮೆಯ ವಿಷಯ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ತೀರ್ಪು ನೀಡಿ ಎತ್ತರಕ್ಕೆ ಬೆಳೆಯಬೇಕು. ನಿಮ್ಮ ಸೇವೆ ಸಮಾಜಕ್ಕೆ ಮೀಸಲಿರಬೇಕು. ಹೆಚ್ಚು ಕಾನೂನು ಮತ್ತು ಇತರೆ ವಿಷಯಗಳ ಪುಸ್ತಕಗಳನ್ನು ಓದಿ, ಜ್ಞಾನ ಸಂಪಾದಿಸಬೇಕು ಎಂದು ಸಲಹೆ ಮಾಡಿದರು.
ಹಿರಿಯ ವಕೀಲರಾದ ಕೆ. ಲಿಂಗರಾಜು, ಕೆ.ಎಲ್. ಲಿಂಗರಾಜು, ಎಸ್.ಎನ್. ಮಲ್ಲೇಗೌಡ, ಜಿ. ಮಂಜುನಾಥ್, ಜ್ಯೋತಿ ಅವರು ನ್ಯಾಯಾಧೀಶರಿಗೆ ಶುಭಾಷಯ ತಿಳಿಸಿದರು.ವಕೀಲರಾದ ಶಿವಶಂಕರನಾಯ್ಕ, ಜಿ.ಎನ್. ಚಂದ್ರಶೇಖರ್, ಜಿ.ಸಿ. ತಿಮ್ಮಯ್ಯ, ಬಿ.ಎಸ್. ನಿರಂಜನಮೂರ್ತಿ, ಕೆ.ಆರ್. ಗುರುಪಾದಪ್ಪ, ಕಾರ್ಯದರ್ಶಿ ಬಿ.ಪಿ. ರಾಜಶೇಖರ್, ಖಜಾಂಚಿ ಎಸ್. ಪ್ರಕಾಶ್ ಎಸ್. ಸುರೇಶ್ ಚಂದ್ರ, ಎನ್. ವೀರಭದ್ರಪ್ಪ, ಹಾಗೂ ಸಂಘದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.11ಕೆಟಿಆರ್.ಕೆ.1: ತರೀಕೆರೆಯಲ್ಲಿ ವಕೀಲರ ಸಂಘದಲ್ಲಿ ಸಿವಿಲ್ ಜಡ್ಜ್ ಹುದ್ದೆಗೆ ಆಯ್ಕೆಯಾದ ರಮೇಶ್. ಕೆ ಮತ್ತು ಪೂಜಾಕುಮಾರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ತರೀಕೆರೆ ನ್ಯಾಯಾಧೀಶರಾದ ವೈದ್ಯ ಶ್ರೀಕಾಂತ್, ವಕೀಲರ ಸಂಘದ ಅಧ್ಯಕ್ಷ ಬಿ. ಶೇಖರ್ ನಾಯ್ಕ ಮತ್ತಿತರರು ಇದ್ದರು.