ಸಾರಾಂಶ
ತಾಲೂಕಿನ ತೆಳ್ಳನೂರು ಗ್ರಾಮದ ಅರಣ್ಯ ಪ್ರದೇಶದ ಸಮೀಪದಲ್ಲಿ ಸುಮಾರು ಐದಾರು ವರ್ಷದ ಗಂಡು ಕರಡಿಯೊಂದು ಕಿಡಿಗೇಡಿಗಳು ಇರಿಸಿದ್ದ ಸಿಡಿಮದ್ದು ಸೇವಿಸಿ ಸಾವಿಗೀಡಾಗಿರುವ ದುರಂತ ಘಟನೆ ಜರುಗಿದೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕಿನ ತೆಳ್ಳನೂರು ಗ್ರಾಮದ ಅರಣ್ಯ ಪ್ರದೇಶದ ಸಮೀಪದಲ್ಲಿ ಸುಮಾರು ಐದಾರು ವರ್ಷದ ಗಂಡು ಕರಡಿಯೊಂದು ಕಿಡಿಗೇಡಿಗಳು ಇರಿಸಿದ್ದ ಸಿಡಿಮದ್ದು ಸೇವಿಸಿ ಸಾವಿಗೀಡಾಗಿರುವ ದುರಂತ ಘಟನೆ ಜರುಗಿದೆ.ವಿಚಾರ ತಿಳಿದು ಸ್ಥಳಕ್ಕೆ ತೆರಳಿದ್ದ ಡಿಸಿಎಫ್ ಸುರೇಂದ್ರ, ಎಸಿಎಫ್ ಮರಿಸ್ವಾಮಿ, ಆರ್ ಎಫ್ ಓ ಸುಂದರ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಚಲುವರಾಜ್ ಹಾಗೂ ಸಿಬ್ಬಂದಿ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ.
ಈ ಸಂಬಂಧ ಅರಣ್ಯ ಇಲಾಖಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು, ಸಿಡಿಮದ್ದು ಇಟ್ಟ ಕಿಡಿಗೇಡಿಗಳ ಪತ್ತೆಗಾಗಿ ಮುಂದಿನ ಕ್ರಮ ಕೈಗೊಂಡಿದ್ದು ಸಿಡಿಮದ್ದು ತಿಂದು ಬಲಿಯಾದ ಮೃತ ಕರಡಿ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯಾಧಿಗಳಿಂದ ನೆರವೇರಿಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು