ಹಲ್ಲೇಪುರದಲ್ಲಿ ಕರಡಿಯಿಂದ ಉಪಟಳ: ಗ್ರಾಮಸ್ಥರಲ್ಲಿ ಆತಂಕ

| Published : May 22 2024, 12:56 AM IST

ಸಾರಾಂಶ

ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯ ಧಾಮ ಬಫರ್ ಜೋನ್ ವಲಯದ ಹುಲ್ಲೇಪುರ ತೋಟ ಹಾಗೂ ಮನೆಗಳ ಮುಂಭಾಗ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿರುವ ಕರಡಿ ಉಪಟಳದಿಂದ ಬೇಸತ್ತಿರುವ ರೈತರು ಆತಂಕಕ್ಕೆ ಈಡಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯ ಧಾಮ ಬಫರ್ ಜೋನ್ ವಲಯದ ಹುಲ್ಲೇಪುರ ತೋಟ ಹಾಗೂ ಮನೆಗಳ ಮುಂಭಾಗ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿರುವ ಕರಡಿ ಉಪಟಳದಿಂದ ಬೇಸತ್ತಿರುವ ರೈತರು ಆತಂಕಕ್ಕೆ ಈಡಾಗಿದ್ದಾರೆ.ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ನಡುವೆಯೂ ಕರಡಿ ಆಹಾರಕ್ಕಾಗಿ ಜಮೀನಿನಲ್ಲಿ ವಾಸ ಮಾಡುವ ರೈತರ ಮನೆಗಳ ಹತ್ತಿರ ಬರುತ್ತಿರುವುದರಿಂದ ಅರಣ್ಯಾಧಿಕಾರಿಗಳು ಕರಡಿ ಹೆಜ್ಜೆ ಗುರುತನ್ನು ಪತ್ತೆಹಚ್ಚಲುಶೋಧನೆ ನಡೆಸಿದರು.

ಕರಡಿಗಾಗಿ ಹೆಜ್ಜೆ ಗುರುತು ಶೋಧನೆ ರಾತ್ರಿ ಧ್ರುವ ಪೌಲ್ಟ್ರಿ ಫಾರಂ ಸಮೀಪದ ದೊರೆ ಜಮೀನು ಹಾಗೂ ಸಹ ಕರಡಿಯ ಎಲ್ಲಿ ಹೋಗಿದೆ ಎಂಬುದೇ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ನಿರಂತರವಾಗಿ ಶೋಧನೆ ನಡೆಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಹನೂರು ಸುತ್ತಮುತ್ತಲಿನ ರೈತರ ಜಮೀನುಗಳ ಮನೆಗಳ ಮುಂಭಾಗ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಕರಡಿ ಇದರಿಂದಾಗಿ ತೋಟದ ಮನೆಯಲ್ಲಿ ವಾಸಿಸುವ ರೈತರು ಭಯಪೀಡಿತರಾಗಿದ್ದು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ದಿನನಿತ್ಯ ಉಪಟಳ ನೀಡುತ್ತಿರುವ ಹಾಗೂ ಭಯದ ವಾತಾವರಣ ನಿರ್ಮಾಣ ಮಾಡಿರುವ ಕರಡಿಯನ್ನು ಸೆರೆಹಿಡಿದು ಸುರಕ್ಷಿತ ಅರಣ್ಯಕ್ಕೆ ಬಿಡುವಂತೆ ರೈತರು ಆಗ್ರಹಿಸಿದ್ದಾರೆ.

ಈ ಭಾಗದ ರೈತರಿಗೆ ಪ್ರಾಣ ಹಾನಿ ಸಂಭವಿಸಿದರೆ ಇದಕ್ಕೆ ನೇರವಾಗಿ ಅರಣ್ಯ ಇಲಾಖೆಯವರೇ ಹೊಣೆ ಆಗುತ್ತೀರಾ ಹಾಗಾಗಿ ಕೂಡಲೇ ಕರಡಿ ಕೆರೆ ಹಿಡಿಯಬೇಕು ಇಲ್ಲದಿದ್ದರೆ ಸಂಬಂಧಪಟ್ಟ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ಮಾಡುವುದಾಗಿ ರೈತರದ ದೊರೆ ವೆಂಕಟೇಶ್ ನಾಯ್ಡು ನಾಗಣ್ಣ ಅಥಣಿ ಕೌಂಡರ್ ಎಚ್ಚರಿಸಿದ್ದಾರೆ.ಸಿಬ್ಬಂದಿ ವರ್ಗದವರು ನಿರಂತರವಾಗಿ ಕರಡಿ ಓಡಾಡಿರುವ ಹೆಜ್ಜೆ ಗುರುತು ಜಾಡು ಹಿಡಿದು ಪತ್ತೆಹಚ್ಚಲು ಆ ಭಾಗದಲ್ಲಿಯೇ ದೌಡಾಯಿಸಿದ್ದು, ಧ್ರುವ ಪೌಲ್ಟ್ರಿ ಫಾರಂ ನಲ್ಲಿ ಸ್ವಚ್ಛತೆ ಇಲ್ಲದೆ ಅಶುದ್ಧ ವಾತಾವರಣದಿಂದ ಕಾಡುಪ್ರಾಣಿಗಳು ಕೋಳಿ ಫಾರಂ ಸುತ್ತಮುತ್ತನೆ ಜಮೀನುಗಳಲ್ಲಿ ವಾಸನೆಗೆ ಬರುತ್ತಿದೆ. ಹೀಗಾಗಿ ಕೋಳಿ ಫಾರಂ ವ್ಯವಸ್ಥಾಪಕರಿಗೆ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಲಾಗಿದೆ ಇಲ್ಲದಿದ್ದರೆ ತಾಲೂಕು ಆಡಳಿತದ ಮುಖಾಂತರ ಹಿರಿಯ ಅಧಿಕಾರಿಗಳಿಗೆ ದೂರು ಸಹ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಪ್ರವೀಣ್, ಆರ್‌ಎಫ್ ಓ. ಬಫರ್‌ ಜೋನ್ ವಲಯ ಹನೂರು