ಬಿಜೆಪಿ ಕಚೇರಿಯಲ್ಲಿ ಕುವೆಂಪು ಜನ್ಮದಿನಾಚರಣೆ

| Published : Dec 30 2023, 01:15 AM IST / Updated: Dec 30 2023, 01:16 AM IST

ಸಾರಾಂಶ

ನಗರದ ಬಿಜೆಪಿ ಕಚೇರಿಯಲ್ಲಿ ಕುವೆಂಪು ಅವರ 119ನೇ ಜನ್ಮದಿನೋತ್ಸವ ಆಚರಿಸಲಾಯಿತು.

- ಹಲವರಿಗೆ ಸನ್ಮಾನಕನ್ನಡಪ್ರಭ ವಾರ್ತೆ ಮೈಸೂರು

ನಗರದ ಬಿಜೆಪಿ ಕಚೇರಿಯಲ್ಲಿ ಕುವೆಂಪು ಅವರ 119ನೇ ಜನ್ಮದಿನೋತ್ಸವ ಆಚರಿಸಲಾಯಿತು.

ಮುಖ್ಯ ಭಾಷಣಕಾರರಾಗಿದ್ದ ಡಾ.ಡಿ. ಪ್ರಭು ಮಾತನಾಡಿ, ಕುವೆಂಪು ಅವರ ಸರ್ವೋದಯ ಸಮನ್ವಯ ಪೂರ್ಣ ದೃಷ್ಟಿ ಹಾಗೂ ವಿಜ್ಞಾನ ಪ್ರಜ್ಞೆ ಸಮಕಾಲೀನ ದಿನಗಳಿಗೆ ಅನ್ವಯವಾಗಬೇಕು. ಶ್ರೀ ರಾಮಾಯಣಂ ದರ್ಶನಂ ಮಹಾಕಾವ್ಯವನ್ನು ರಚಿಸಿ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ದರ್ಶನ ತತ್ವವನ್ನು ಜಗತ್ತಿಗೆ ಸಾರಿದವರು ಕುವೆಂಪು ಎಂದರು.

ಜಗದ ಕವಿ ಯುಗದ ಕವಿ ಸದಾ ಕಾಲ ಸಮಾಜದ ಉದ್ದಾರಕ್ಕಾಗಿ ಸಾಹಿತ್ಯ ಎಂಬ ತತ್ವಗಳಡಿ ಕುವೆಂಪು ಸಾಹಿತ್ಯ ನಿರ್ವಚನಗೊಂಡ ರೀತಿಯನ್ನು ತಿಳಿಸಿದರು.

ಶೂದ್ರ ತಪಸ್ವಿಯ ನಾಟಕದಲ್ಲಿ ಮೇಲು, ಕೀಳುಗಳ ಪಾತ್ರವನ್ನು ಕಿತ್ತೊಗೆದು ತಪ ಗಯ್ಯಲು ಇಚ್ಛಾಶಕ್ತಿ ಒಂದೇ ಮುಖ್ಯ. ಇಲ್ಲಿ ವರ್ಗ ತಾರತಮ್ಯ ಭಕ್ತಿಗೆ ಆಧ್ಯಾತ್ಮಕ್ಕೆ ಅಡ್ಡಿ ಆಗುವುದಿಲ್ಲ ಎಂಬ ಸಂಗತಿಯನ್ನು ತಿಳಿಸಿದರು.

ಪಾಪಿಗೂ ಈ ಜಗತ್ತಿನಲ್ಲಿ ಉದ್ಧಾರ ಸಾಧ್ಯ ಎಂಬ ಸರ್ವೋದಯ ಮಂತ್ರದ ಮಹತ್ವವನ್ನು ವಿವರಿಸಿದರು. ಕುವೆಂಪು ಸ್ತ್ರೀಯರಿಗೆ ನೀಡಿದ ಗೌರವದ ಸ್ಥಾನಗಳನ್ನು ಅವರ ಪ್ರೇಮಕವಿತೆಗಳ ಉದಾಹರಣೆಯಿಂದ ವಿವರಿಸಿದರು. ಸಾವಯವ ಕೃಷಿಕ ದಿಲೀಪ್ ಚಿಕ್ಕಣ್ಣಗೌಡ, ಮಾಜಿ ಸೈನಿಕ ಶ್ರೀಧರ್‌, ಮಹಿಳಾ ಪೈಲೆಟ್‌ ತನುಶ್ರೀ ಗೌಡ, ವಿದ್ಯಾರ್ಥಿನಿ ಮೇಘನಾ, ಛಾಯಾಗ್ರಾಹಕ ಲಕ್ಷ್ಮೀನಾರಾಯಣ ಯಾದವ್‌, ಬಿಜೆಪಿ ಕಾರ್ಯಕರ್ತ ಬಾಲಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಲಾಯಿತು. ಪಕ್ಷದ ಎಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಹಿರಿಯರು, ಕುವೆಂಪು ಅಭಿಮಾನಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ. ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು. ಎಂಡಿಎ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್. ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಹೇಮಂತಕುಮಾರ್‌ಗೌಡ, ಮಿರ್ಲೆ ಶ್ರೀನಿವಾಸಗೌಡ. ಕೃಷ್ಣೇಗೌಡ. ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಅನಿಲ್ ಥಾಮಸ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ಲಕ್ಷ್ಮೀದೇವಿ, ಪ್ರಶಾಂತ್‌ಗೌಡ, ರಾಜಕುಮಾರ್, ಮೈಸೂರು ವಿವಿ ಸಿಂಡಿಕೇಟ್‌ಸದಸ್ಯ ಗೋಕುಲ್‌ಗೋವರ್ಧನ್‌, ಚಾಮರಾಜ ಕ್ಷೇತ್ರದ ಉಪಾದ್ಯಕ್ಷ ಕುಮಾರ್ ಗೌಡ. ರವಿ, ಗಿರೀಶ್, ನೇಹಾ ಮೊದಲಾದವರು ಇದ್ದರು.