ಕೆನರಾ ಬ್ಯಾಂಕ್ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಚೆಕ್ ವಿತರಣೆ ಮಾಡಿ ಅವರು ಮಾತನಾಡಿ, ಮಹಿಳಾ ಮಿತ್ರ ಚಾರಿಟೇಬಲ್ ಟ್ರಸ್ಟ್ ಮಹಿಳಾ ಸ್ವಸಹಾಯ ಸಂಘಗಳಿಗೆ ಉದ್ಯಮಶೀಲತೆಯ ಚಟುವಟಿಕೆಗಳನ್ನು ಉತ್ತೇಜಿಸಲು ಗ್ರಾಮೀಣ ಮಹಿಳೆಯರಿಗಾಗಿ ರೂಪಿಸಿದ ಯೋಜನೆ ಇದಾಗಿದೆ. ಈ ಮೂಲಕ ಸಂಘದ ಸದಸ್ಯರು ತಮ್ಮ ಜೀವನ ನಿರ್ವಹಣೆಯಲ್ಲಿ ಸುಧಾರಣೆ ಕಾಣಬಹುದು. ಮಹಿಳಾ ಸಮುದಾಯ ಸಬಲವಾದರೆ ದೇಶದ ಪ್ರಗತಿ ಸಾಧ್ಯವಾಗಲಿದೆ. ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಬಂದಿರುವುದು ಉತ್ತಮ ಬೆಳವಣಿಗೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕ್‌ಗಳಿಂದ ಪಡೆದ ಸಾಲಸೌಲಭ್ಯವನ್ನು ಸೂಕ್ತವಾಗಿ ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು.ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್ ಭವನದಲ್ಲಿ ಮಹಿಳಾ ಮಿತ್ರ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಚೆಕ್ ವಿತರಣೆ ಮಾಡಿ ಅವರು ಮಾತನಾಡಿ, ಮಹಿಳಾ ಮಿತ್ರ ಚಾರಿಟೇಬಲ್ ಟ್ರಸ್ಟ್ ಮಹಿಳಾ ಸ್ವಸಹಾಯ ಸಂಘಗಳಿಗೆ ಉದ್ಯಮಶೀಲತೆಯ ಚಟುವಟಿಕೆಗಳನ್ನು ಉತ್ತೇಜಿಸಲು ಗ್ರಾಮೀಣ ಮಹಿಳೆಯರಿಗಾಗಿ ರೂಪಿಸಿದ ಯೋಜನೆ ಇದಾಗಿದೆ. ಈ ಮೂಲಕ ಸಂಘದ ಸದಸ್ಯರು ತಮ್ಮ ಜೀವನ ನಿರ್ವಹಣೆಯಲ್ಲಿ ಸುಧಾರಣೆ ಕಾಣಬಹುದು. ಮಹಿಳಾ ಸಮುದಾಯ ಸಬಲವಾದರೆ ದೇಶದ ಪ್ರಗತಿ ಸಾಧ್ಯವಾಗಲಿದೆ. ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಬಂದಿರುವುದು ಉತ್ತಮ ಬೆಳವಣಿಗೆ ಎಂದರು.ಮುಂದಿನ ದಿನಗಳಲ್ಲಿ ಸ್ವಸಹಾಯ ಸಂಘಗಳು ಮತ್ತಷ್ಟು ಹೆಚ್ಚಿನ ಉಳಿತಾಯವನ್ನು ಮಾಡಿ ಕುಟುಂಬ ನಿರ್ವಹಣೆಯ ಜೊತೆಗೆ ಇನ್ನುಳಿದ ಮಹಿಳೆಯರಿಗೆ ಪ್ರೇರಣೆಯಾಗಬೇಕು. ಆರ್ಥಿಕ ಚಟುವಟಿಕೆಯ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಪಡೆದ ಸಾಲವನ್ನು ಸ್ವ ಉದ್ಯೋಗಕ್ಕೆ ಬಳಸುವುದರ ಮೂಲಕ ಆರ್ಥಿಕವಾಗಿ ಸಶಕ್ತರಾಗಬೇಕು. ಸಾಲ ಪಡೆಯುವ ಮುಂಚೆ ಅದಕ್ಕೆ ಸ್ಪಷ್ಟ ಉದ್ದೇಶ, ನಿಗದಿತ ಗುರಿ ಇಟ್ಟುಕೊಳ್ಳಬೇಕು. ವಿಶ್ವಾಸ, ನಂಬಿಕೆಯಿಂದ ಸ್ವ ಸಹಾಯ ಸಂಘಗಳಿಗೆ ಸಾಲ ಸಿಗುತ್ತದೆ, ಅದರ ಪ್ರಯೋಜನವನ್ನು ಭವಿಷ್ಯದ ಉನ್ನತಿಗಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ೧೦ ಸ್ವಸಹಾಯ ಸಂಘಗಳಿಗೆ ತಲಾ ೮ ಲಕ್ಷ ರೂ.ನಂತೆ ೮೦ ಲಕ್ಷ ರೂ.ಗಳ ಸಾಲದ ಚೆಕ್‌ನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಹಾಸನದ ಪ್ರಾದೇಶಿಕ ಕಚೇರಿಯ ಪ್ರಬಂಧಕ ಮಹೇಂದರ್ ಜಂಬಲ್ಕರ್ ಅವರನ್ನು ಸನ್ಮಾನಿಸಲಾಯಿತು. ವ್ಯವಸ್ಥಾಪಕಿ ಡೆಲ್ನಾ ಜೋಸ್, ಪಟ್ಟಣ ಶಾಖೆಯ ವ್ಯವಸ್ಥಾಪಕ ದೀಪ್ತಿ ರಂಜನ್ ಜೆನಾ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಎನ್. ದೊರೆಸ್ವಾಮಿ ನುಗ್ಗೇಹಳ್ಳಿ, ಮಹಿಳಾ ಮಿತ್ರ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ಚಂದನಾ ಆನಂದ್, ಕಾರ್ಯಧ್ಯಕ್ಷ ಆನಂದ್ ಚನ್ನೇನಹಳ್ಳಿ, ಸಿಇಒ ಸೌಜನ್ಯ ಬಿನಯ್, ಮುಖಂಡರಾದ ರೇವಣ್ಣ, ಮಂಜುನಾಥ ಸ್ವಾಮಿ ನಾಗರಾಜು ಸಂಪತ್‌ ಕುಮಾರ್‌, ಹೊನ್ನೇಗೌಡ, ಮಹಿಳಾ ಮಿತ್ರ ಸಿಂಬದಿ ವರ್ಗದವರು, ಕೆನರಾ ಬ್ಯಾಂಕ್ ಕೃಷಿ ವಿಭಾಗದ ಕಚೇರಿ ಅಧಿಕಾರಿಗಳು ಹಾಜರಿದ್ದರು.