ಸಾರಾಂಶ
- ದಾವಣಗೆರೆ ಭಾರತೀಯ ಅಂಚೆ ಇಲಾಖೆಯಿಂದ ಜನಸಂಪರ್ಕ ಅಭಿಯಾನದಲ್ಲಿ ಚಂದ್ರಶೇಖರ್ ಸಲಹೆ - - -
ಕನ್ನಡಪ್ರಭ ವಾರ್ತೆ ಹರಿಹರರಾಜ್ಯದಲ್ಲಿಯೇ ದಾವಣಗೆರೆ ಅಂಚೆ ವಿಭಾಗವು ಸೇವೆ ನೀಡುವುದರಲ್ಲಿ ಅದ್ಭುತ ಸಾಧನೆ ಮಾಡಿದ್ದು, ಅದರಲ್ಲಿ ಹರಿಹರ ತಾಲೂಕಿನದ್ದು ಸಿಂಹಪಾಲು ಎಂದು ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕ ಚಂದ್ರಶೇಖರ್ ಹೇಳಿದರು.ನಗರದ ಭಾರತೀಯ ಅಂಚೆ ಇಲಾಖೆಯಿಂದ ಶನಿವಾರ ನಡೆದ ಜನಸಂಪರ್ಕ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಿಎಲ್‌ಐ, ಆರ್‌ಪಿಎಲ್‌ಐ, ಎಸ್‌ಬಿ, ಆರ್‌ಡಿ, ಎಮ್‌ಎಸ್‌ಎಸ್‌ಸಿ, ಐಪಿಪಿಬಿ ಅಪಘಾತ ವಿಮೆ, ಆಧಾರ್ ಸೀಡಿಂಗ್ ಮುಂತಾದ ಹಲವು ಹತ್ತು ಯೋಜನೆಗಳಲ್ಲಿ ಅತೀ ಹೆಚ್ಚು ಹರಿಹರದಿಂದ ಆಗಿವೆ. ಅಂಚೆ ಸೇವೆಗಳನ್ನು ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಧೃಢರಾಗಿ ಎಂದರು. ದಾವಣಗೆರೆ-1 ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಜೆ.ಎಸ್. ಗುರುಪ್ರಸಾದ್ ಮಾತನಾಡಿ, ಸಮೂಹ ಅಪಘಾತ ವಿಮೆ, ಪ್ರಧಾನಮಂತ್ರಿ ಜನಸುರಕ್ಷಾ ಯೋಜನೆ, ಅಂಚೆ ಉಳಿತಾಯ ಖಾತೆಗಳಿಗೆ ಆಧಾರ್ ಜೋಡಣೆ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ವೃದ್ಧಾಪ್ಯ ವೇತನ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ವಿಧವಾ ವೇತನ, ಮನಸ್ವಿನಿ, ಅನ್ನಭಾಗ್ಯ, ವಿದ್ಯಾರ್ಥಿ ವೇತನ, ಮಹಿಳಾ ಸಮ್ಮಾನ್ ಉಳಿತಾಯ ಗಂಡುಮಕ್ಕಳಿಗಾಗಿ ಸುಕುಮಾರ ಸಮೃದ್ಧಿ ಯೋಜನೆ (ಪಿ.ಪಿ.ಎಫ್.) 10 ವರ್ಷದ ಒಳಗಿನ ಹೆಣ್ಣುಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ, ವಿದ್ಯಾರ್ಥಿ ವೇತನ, ಆಧಾರ್ ಕಾರ್ಡಲ್ಲಿ ಹೆಸರು, ಜನ್ಮ ದಿನಾಂಕ, ಮೊಬ್ಯಲ್ ಸಂಖ್ಯೆ ಜೋಡಣೆ, ವಿಳಾಸ ಬದಲಾವಣೆ ಮುಂತಾದವುಗಳು ಅಂಚೆ ಇಲಾಖೆಯಲ್ಲಿ ಲಭ್ಯ ಎಂದು ವಿವರಿಸಿದರು.ಅಧ್ಯಕ್ಷತೆಯನ್ನು ಹರಿಹರ ಅಂಚೆ ಪಾಲಕ ಆರ್. ಶ್ರೀನಿವಾಸರಾವ್ ವಹಿಸಿದ್ದರು, ಐಪಿಪಿಬಿ ಅಧೀಕ್ಷಕ ಶ್ರೀನಿವಾಸ್, ಕನ್ನಡ ಹಿರಿಯ ಪತ್ರಕರ್ತ ಐರಣಿ ಹನುಮಂತಪ್ಪ ಹಾಗೂ ಇತರರು ಭಾಗವಹಿಸಿದ್ದರು.
- - -ಬಾಕ್ಸ್ * ಬ್ಯಾಂಕ್‌ಗಿಂತಲೂ ಉತ್ತಮ ಸೇವೆ ಎಂಕೆಇಟಿ ಸಿಬಿಎಸ್‌ಇ ಪ್ರಾಂಶುಪಾಲ ಮಂಜುನಾಥ ಕುಲಕರ್ಣಿ ಮಾತನಾಡಿ, ಕೇವಲ ಪತ್ರಗಳ ವಿಲೇವಾರಿ ಮಾಡುವ ಅಂಚೆ ಕಚೇರಿ ಇಂದು ಹಣಕಾಸು ವ್ಯವಹಾರವನ್ನು ಬ್ಯಾಂಕ್‌ಗಿಂತಲೂ ಉತ್ತಮವಾಗಿ ನಿರ್ವಹಿಸುವ ವ್ಯವಸ್ಥೆ ಮಾಡುತ್ತಿದೆ. ಹಣಕಾಸು ವ್ಯವಹಾರಕ್ಕೆ ನಂಬಿಕೆಯ ಸಂಸ್ಥೆ ಎಂದರೆ ಅಂಚೆ ಕಚೇರಿ ಎಂಬ ನಂಬಿಕೆಯನ್ನು ಜನಸಾಮಾನ್ಯರಲ್ಲಿ ಮೂಡಿಸಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರವೂ ಅದನ್ನು ಇಲಾಖೆ ಉಳಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.
- - - -9ಎಚ್‌ಆರ್‌ಆರ್3:ಹರಿಹರದ ಅಂಚೆ ವಿಭಾಗದಿಂದ ಶನಿವಾರ ನಡೆದ ಅಂಚೆ ಜನಸಂಪರ್ಕ ಅಭಿಯಾನವನ್ನು ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕ ಚಂದ್ರಶೇಖರ್ ಉದ್ಘಾಟಿಸಿದರು.