ಸಾರಾಂಶ
ಧ್ಯಾನವು ಮನಸ್ಸನ್ನು ಕ್ರಮಬದ್ಧಗೊಳಿಸುತ್ತದೆ. ಶಿಸ್ತನ್ನು ಮೈಗೂಡಿಸಿಕೊಂಡಲ್ಲಿ ಜೀವ ಸಹಜವಾಗಿ ಸರಿದಾರಿಯಲ್ಲಿ ಸಾಗಲಿದೆ. ಅದು ಬುದ್ಧನ ದಾರಿ ಹನಿ ಸಾಗರವಾಗುವ ಹಾಗೆ ಎಂದು ಎಂದು ನಿವೃತ್ತ ಶಿಕ್ಷಕ ಮದ್ದೂರು ದೇವರಾಜು ಹೇಳಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಧ್ಯಾನವು ಮನಸ್ಸನ್ನು ಕ್ರಮಬದ್ಧಗೊಳಿಸುತ್ತದೆ. ಶಿಸ್ತನ್ನು ಮೈಗೂಡಿಸಿಕೊಂಡಲ್ಲಿ ಜೀವ ಸಹಜವಾಗಿ ಸರಿದಾರಿಯಲ್ಲಿ ಸಾಗಲಿದೆ. ಅದು ಬುದ್ಧನ ದಾರಿ ಹನಿ ಸಾಗರವಾಗುವ ಹಾಗೆ ಎಂದು ಎಂದು ನಿವೃತ್ತ ಶಿಕ್ಷಕ ಮದ್ದೂರು ದೇವರಾಜು ಹೇಳಿದರು.ಪಟ್ಟಣದ ರಾಮಚಂದ್ರ ಮಿಷನ್ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಯಂತಿ ಸಾರ್ಥಕವಾಗಬೇಕಾದರೆ ಬುದ್ಧನ ಸಂದೇಶಗಳನ್ನು ನಾವು ಅಳವಡಿಸಿಕೊಂಡು ಶಾಂತಿ ಮಾರ್ಗದಲ್ಲಿ ಸಾಗಬೇಕು ಎಂದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ಶಿವಣ್ಣ ಇಂದ್ವಾಡಿ ಮಾತನಾಡಿ, ಏಷ್ಯಾ ಖಂಡದ ಮಹಾಬೆಳಕು ಗೌತಮ ಬುದ್ಧ. ದ.ರಾ.ಬೇಂದ್ರೆ ಹೇಳಿದಂತೆ ಜಗವೆಲ್ಲಾ ಮಲಗಿರಲು ಗೌತಮ ಬುದ್ಧ ಎಚ್ಚರವಾಗಿದ್ದರು. ಬದುಕಿನಲ್ಲಿ ದುಃಖವನ್ನು ದೂರಮಾಡಲು ಸೂತ್ರವನ್ನು ಕೊಟ್ಟವರು. ವೈಶಾಖ ಶುದ್ಧ ಪೌರ್ಣಮಿ ಬುದ್ಧನ ಜನನ, ಜ್ಞಾನೋದಯ, ಹಾಗೂ ಪರಿನಿರ್ವಾಣಕ್ಕೆ ಸಾಕ್ಷಿಯಾಯಿತು ಎಂದರು.ಶಿವಯೋಗಿ ಶ್ರೀಧರ ಗಂಗಾಧರ ಮುರಾಳೆ ಮಾತನಾಡಿ, ಸಿದ್ಧಾರ್ಥನನ್ನು ಕಲಕಿದ ಜೀವನದ ಘಟನೆಗಳು ಪ್ರತಿಯೊಬ್ಬ ಮನುಷ್ಯನಿಗೂ ಆಗುವಂತಹುದೆ. ಆದರೆ ಅವುಗಳಿಂದ ಸಿದ್ಧಾರ್ಥನು ಗೌತಮ ಬುದ್ಧನಾಗಿ ಪರಿವರ್ತಿತರಾದರು. ನಾವುಗಳೂ ಹಾಗಾಗಲು ಸಾಧ್ಯತೆ ಇದ್ದು ಅದು ಸಾಧನೆಯಿಂದ ಪರಿಪಕ್ವಗೊಂಡಾಗ ಸಂಭವಿಸುತ್ತದೆ ಎಂದರು. ಈ ವೇಳೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮದುಸೂಧನ್, ರಾಮಚಂದ್ರ ಮಿಷನ್ ಪ್ರಶಿಕ್ಷಕಿ ಸುಷ್ಮಾ, ಶಿವನಂಜು, ನಾಗೇಶ್ವರಿ, ಸೌಭಾಗ್ಯ, ವೃಂದ, ರೀನಾ, ಮಂಗಳಗೌರಿ, ಯೋಗಪಟುಗಳಾದ ಸವಿತಾ, ವೇಣು, ಸುಧಾ, ಧನ್ಯತಾ, ಸಾನ್ವಿಕ, ದರ್ಶಿನಿ ಇದ್ದರು.