ಯುವಸಮುದಾಯವು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮಾದಕ ವಸ್ತುಗಳ ದಾಸರಾಗಿ ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದೇ ಉತ್ತಮ ನಾಗರಿಕರಾಗಿ ಆರೋಗ್ಯಕರ ಸ್ವಾಸ್ಥ್ಯ ಸಮಾಜ ಕಟ್ಟಲು ಶ್ರಮಿಸಬೇಕು.
ಮಾದಕ ವ್ಯಸನ ದುಷ್ಪರಿಣಾಮ-ಜಾಗೃತಿ ಕಾರ್ಯಾಗಾರ ಯಶಸ್ವಿ
ಕನ್ನಡಪ್ರಭ ವಾರ್ತೆ ಹಳಿಯಾಳಯುವಸಮುದಾಯವು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮಾದಕ ವಸ್ತುಗಳ ದಾಸರಾಗಿ ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದೇ ಉತ್ತಮ ನಾಗರಿಕರಾಗಿ ಆರೋಗ್ಯಕರ ಸ್ವಾಸ್ಥ್ಯ ಸಮಾಜ ಕಟ್ಟಲು ಶ್ರಮಿಸಬೇಕು ಎಂದು ಹಳಿಯಾಳದ ಹಿರಿಯ ಸಿವಿಲ್ ನ್ಯಾಯಾಧೀಶೆ ಸುಜಾತಾ ಪಾಟೀಲ ಕರೆ ನೀಡಿದರು.
ಪಟ್ಟಣದ ಕೆ.ಎಲ್.ಎಸ್ ಸಂಸ್ಥೆಯ ವಿಡಿಐಟಿ ಮಹಾವಿದ್ಯಾಲಯದಲ್ಲಿ ವಿಶ್ವ ರೆಡ್ ಕ್ರಾಸ್ ದಿನದ ಅಂಗವಾಗಿ ಆಯೋಜಿಸಿದ ಮಾದಕ ವ್ಯವಸ ದುಷ್ಟರಿಣಾಮ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.ಕೆಟ್ಟ ವ್ಯಸನಗಳು ಭವಿಷ್ಯಕ್ಕೆ ಮಾರಕ. ಉತ್ತಮ ಸಮಾಜ ನಿರ್ಮಾಣವು ಯುವಜನತೆ ಕೈಯಲ್ಲಿದೆ ಎಂದರು. ಭಾರತದ ಕಾನೂನು ವ್ಯವಸ್ಥೆಯಲ್ಲಿ ನಿಗದಿಪಡಿಸಿರುವ ಶಿಕ್ಷೆಗಳ ಕುರಿತಾಗಿ ಅರಿವು ಮೂಡಿಸಿದರು.
ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ್ ಮಾದಕ ವಸ್ತು ಮಾರಾಟ ಹಾಗೂ ಸೇವನೆಯಲ್ಲಿ ತೊಡಗಿದ್ದಲ್ಲಿ ತಲೆದಂಡ ತೆರಬೇಕಾಗುವುದು ಎಂದರು. ಮಕ್ಕಳ ಕಲ್ಯಾಣ ಸಮಿತಿ ಕಾರವಾರದ ಸದಸ್ಯೆ ವಕೀಲೆ ರಾಧಾರಾಣಿ ಕೊಳಾಂಬಿಯವರು ಮಾದಕ ವಸ್ತುಗಳ ಸೇವೆನೆಯಿಂದ ಯುವಜನತೆಯು ದಾರಿ ತಪ್ಪುತ್ತಿದ್ದು, ಸಮಾಜದಲ್ಲಿ ಕೌರ್ಯ ಹಾಗೂ ಅಶಾಂತಿಯು ಹೆಚ್ಚಾಗಲಾರಂಭಿಸಿದೆ. ಅದಕ್ಕಾಗಿ ದುಶ್ಚಟಗಳ ದಾಸರಾಗದೇ ಉತ್ತಮ ಆರೋಗ್ಯವನ್ನು ಹೊಂದಿಕೊಂಡು ಆರೋಗ್ಕಕರ ದೇಶ ನಿರ್ಮಾಣದ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಸಿ ಕೊಳ್ಳಬೇಕೆಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಮಾತನಾಡಿ ಒಳ್ಳೆಯ ಹವ್ಯಾಸಗಳಿಂದ ಉತ್ತಮ ಭವಿಷ್ಯ ರೂಪಿಸಿಕೊಂಡು ಮಾದರಿ ಜೀವನ ನಡೆಸುವಂತೆ ಕರೆ ನೀಡಿದರು.
ಡಾ. ನಾಗರಾಜ್ ಭಟ್, ಡಾ. ಸ್ನೇಹ ಕುಲಕರ್ಣಿ, ಪ್ರೊ. ಲಕ್ಷ್ಮೀ ಹಟ್ಟಿಹೋಳಿ ಕಾರ್ಯಕ್ರಮ ಆಯೋಜಿಸಿದ್ದರು. ಪ್ರೊ. ಜ್ಯೋತಿ ಕಮ್ಮಾರ ಕಾರ್ಯಕ್ರಮ ನಿರ್ವಹಿಸಿದರು. ಮಹಾವಿದ್ಯಾಲಯದ ರೆಡ್ ಕ್ರಾಸ್ ಹಾಗೂ ರೆಡ್ ರಿಬ್ಬನ್ ಮತ್ತು ಐಕ್ಯೂಎಸಿ ವತಿಯಿಂದ ಆಯೋಜಿಸಿದ ಈ ಕಾರ್ಯಾಗಾರದಲ್ಲಿ 150ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.