ಸಾರಾಂಶ
- ಸಚಿವ ಎಸ್ಸೆಸ್ಸೆಂ, ಸಂಸದೆ ಡಾ.ಪ್ರಭಾ, ಶಾಸಕರು ಭಾಗಿ - - - ಹೊನ್ನಾಳಿ: ತಾಲೂಕಿನ ಅರಕೆರೆ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನ ಗೃಹಪ್ರವೇಶ, ವಾಸ್ತುಶಾಂತಿ, ಹೋಮ, ಅಭಿಷೇಕ ಹಾಗೂ ಧರ್ಮಸಭೆ ಕಾರ್ಯಕ್ರಮಗಳು ಅ.6 ರಿಂದ 7 ರವರೆಗೆ ನಡೆಯಲಿವೆ ಎಂದು ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಡಿ. ಲೋಹಿತ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 6ರಂದು ಗೋಧೂಳಿ ಲಗ್ನದಲ್ಲಿ ಗಂಗಾಪೂಜೆ, ಕುಂಭಮೇಳದೊಂದಿಗೆ ಗ್ರಾಮದ ದೇವರ ಮೆರವಣಿಗೆ ಮೂಲಕ ದೇವಸ್ಥಾನ ಪ್ರವೇಶ ಕಾರ್ಯಕ್ರಮ ಜರುಗಲಿದೆ. ಅ.7ರಂದು ಬ್ರಾಹ್ಮೀ ಮುಹೂರ್ತದಲ್ಲಿ ಹೋಮ, ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಲಿವೆ ಎಂದರು.ಧರ್ಮಸಭೆ:
ಅ.7ರಂದು ಬೆಳಗ್ಗೆ 11.30ಕ್ಕೆ ಧರ್ಮಸಭೆ ನಡೆಯಲಿದೆ. ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅರಕೆರೆ ಬೀರಲಿಂಗೇಶ್ವರ ದೇವರ ಗಣಮಗ ಎಸ್.ಜಿ. ಯುವರಾಜ್ ಉಪಸ್ಥಿತರಿರುತ್ತಾರೆ ಎಂದರು.ಬೆಂಗಳೂರಿನ ಉಪ ತಹಸೀಲ್ದಾರ್ ಡಿ.ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಡಿ.ಜಿ. ಶಾಂತನಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಬಸವರಾಜು ಶಿವಗಂಗಾ, ಕೆ.ಎಸ್. ಬಸವಂತಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಎ.ಬಿ. ನಾಗರಾಜಪ್ಪ, ಬಿ.ಸಿದ್ದಪ್ಪ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ 9 ಗ್ರಾಮಗಳ ದೇವರು ಹಾಗೂ ಅರಕೆರೆ ಗ್ರಾಮದ ದೇವರು ಉತ್ಸವದಲ್ಲಿ ಭಾಗಿಯಾಗಲಿವೆ ಎಂದರು.
ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳಾದ ಕರಿಬಸಪ್ಪ, ರಾಜಪ್ಪ, ಹನುಮಂತಪ್ಪ, ಸಂಕಪ್ಪ, ದೊಡ್ಡೇಶ್, ಮಧುಸೂದನ್, ನಿಂಗರಾಜ್, ಅಣ್ಣಪ್ಪ, ಬೀರೇಂದ್ರ, ರೇವಣಸಿದ್ದೇಶ್ವರ, ಮಲ್ಲೇಶ್, ಬೀರೇಶ್ ಪೂಜಾರ್ ಉಪಸ್ಥಿತರಿದ್ದರು.- - - (-ಫೋಟೋ)