ಜಂಗಲ್ ಟ್ರೈಲ್ ರೆಸಾರ್ಟ್ ಗೆ ಬೀಗಮುದ್ರೆ

| Published : May 22 2024, 12:47 AM IST

ಸಾರಾಂಶ

ರಾಮನಗರ: ಇಬ್ಬರು ಪ್ರವಾಸಿಗರ ಸಾವಿಗೆ ಕಾರಣವಾದ ಹಾರೋಹಳ್ಳಿಯ ಗೊಟ್ಟಿಗೆಹಳ್ಳಿಯಲ್ಲಿನ ಜಂಗಲ್ ಟ್ರೈಲ್ ರೆಸಾರ್ಟ್ ಗೆ ಪ್ರವಾಸೋದ್ಯಮ ಇಲಾಖೆ ಬೀಗ ಜಡಿದಿದೆ.

ರಾಮನಗರ: ಇಬ್ಬರು ಪ್ರವಾಸಿಗರ ಸಾವಿಗೆ ಕಾರಣವಾದ ಹಾರೋಹಳ್ಳಿಯ ಗೊಟ್ಟಿಗೆಹಳ್ಳಿಯಲ್ಲಿನ ಜಂಗಲ್ ಟ್ರೈಲ್ ರೆಸಾರ್ಟ್ ಗೆ ಪ್ರವಾಸೋದ್ಯಮ ಇಲಾಖೆ ಬೀಗ ಜಡಿದಿದೆ.

ಜಂಗಲ್ ಟ್ರೈಲ್ ರೆಸಾರ್ಟ್‌ ಮಾಲೀಕರು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಥವಾ ಬೆಂಗಳೂರಿನ ಕೇಂದ್ರ ಕಚೇರಿಯ ಪ್ರವಾಸೋದ್ಯಮ ಇಲಾಖೆಯಲ್ಲಿ ರೆಸಾರ್ಟ್ ನಡೆಸುತ್ತಿರುವ ಬಗ್ಗೆ ಯಾವುದೇ ಅನುಮತಿ ಪಡೆದಿರುವುದಿಲ್ಲ ಹಾಗೂ ರೆಸಾರ್ಟ್ ನಡೆಸುತ್ತಿರುವ ಕುರಿತು ಯಾವುದೇ ಕಚೇರಿಯಲ್ಲಿಯೂ ಸಹ ಅನುಮತಿ ಪಡೆಯದೇ ಅಕ್ರಮವಾಗಿ ಜಂಗಲ್ ಟ್ರೈಲ್ ರೆಸಾರ್ಟ್ ನಡೆಸುತ್ತಿತ್ತು. ಹತ್ತು ದಿನಗಳ ಹಿಂದೆ ಈಜು ಕೊಳದಲ್ಲಿ ಓರ್ವ ಹಾಗೂ ಎರಡು ದಿನಗಳ ಹಿಂದೆ ಮಹಿಳೆಯೊಬ್ಬರು ಜಿಪ್ ಲೈನ್ ತುಂಡಾಗಿ ಸಾವನ್ನಪ್ಪಿದ್ದರು. ರೆಸಾರ್ಟ್ ನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಘಟನೆಗೆ ಕಾರಣವಾಗಿತ್ತು.

ರೆಸಾರ್ಟ್ ಮಾಲೀಕರಿಗೆ 7 ದಿನದೊಳಗೆ ಸ್ಪಷ್ಟೀಕರಣ ಕೇಳಿ ಪ್ರವಾಸೋದ್ಯಮ ನೋಟಿಸ್ ಕೂಡ ಜಾರಿ ಮಾಡಿತ್ತು. ಆದರೆ, ಮಾಲೀಕರಿಗೆ ಸೂಕ್ತ ಉತ್ತರ ಬರಲಿಲ್ಲ.

ಆದ್ದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಜಂಗಲ್ ಟ್ರೈಲ್ ರೆಸಾರ್ಟ್ ಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ರವರು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ರೆಸಾರ್ಟ್ ಮಾಲೀಕರಿಗೆ ಮತ್ತೊಂದು ನೊಟೀಸ್ ನೀಡಿ, ರೆಸಾರ್ಟ್ ಗೆ ಬೀಗ ಮುದ್ರೆ ಹಾಕಿದ್ದಾರೆ.21ಕೆಆರ್ ಎಂಎನ್ 4.ಜೆಪಿಜಿ

ಹಾರೋಹಳ್ಳಿಯ ಗೊಟ್ಟಿಗೆಹಳ್ಳಿಯಲ್ಲಿನ ಜಂಗಲ್ ಟ್ರೈಲ್ ರೆಸಾರ್ಟ್ ಗೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ರವರು ಬೀಗ ಮುದ್ರೆ ಹಾಕಿದರು.