ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಹಿಂಭಾಗ ಇರುವ ಮೈಕಾಸ್ ಕಾಲೇಜಿನಲ್ಲಿ ಗುರುವಾರ ಕನ್ನಡ ಹಬ್ಬ ಏರ್ಪಡಿಲಾಗಿತ್ತು. ಇದರ ಅಂಗವಾಗಿ ವಿವಿಧ ಸ್ಪರ್ಧೆಗಳು ನಡೆದವು. ಮೈಸೂರು ನಗರ, ಹುಣಸೂರು, ಪಾಂಡವಪುರ ಸೇರಿದಂತೆ ವಿವಿಧ ಕಾಲೇಜುಗಳು ಹಾಗೂ ಪ್ರೌಢಶಾಲೆಗಳ 325 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮಕ್ಕಳ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮ ರೂಪಿಸಬೇಕು. ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಆನ್‌ಲೈನ್ ಶಿಕ್ಷಣ ಉತ್ತಮವೇ?, ಪೋಷಕರು ತಮ್ಮ ಮಕ್ಕಳ ಸಾಮಾಡಿಕ ಜಾಲತಾಣಗಳಿಗೆ ಪ್ರವೇಶವನ್ನು ಹೊಂದಿರಬೇಕೆ? ಕುರಿತು ಚರ್ಚಾ ಸ್ಪರ್ಧೆ ನಡೆಯಿತು.ದೇಶದ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ, ಸೌರಶಕ್ತಿಯ ಮಹತ್ವ ಕುರಿತು ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ, ಕನ್ನಡದ ಭಾವಗೀತೆ, ಭಕ್ತಿಗೀತೆ, ಚಲನಚಿತ್ರ ಗೀತೆ ನೃತ್ಯ ಹಾಗೂ ಗಾಯನ ಸ್ಪರ್ಧೆ, ಕನ್ನಡ ನಾಡು- ನುಡಿಗೆ ಸಂಬಂಧಿಸಿದಂತೆ ರಸಪ್ರಶ್ನೆ ಕಾರ್ಯಕ್ರಮಗಳು ನಡೆದವು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಕಾಲೇಜಿನ ನಿರ್ದೇಶಕ ಹಾಗೂ ಪ್ರಾಂಶುಪಾಲ ಜಿ. ರಾಮಚರಣ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯಅತಿಥಿಯಾಗಿದ್ದರು. ಮೈಕಾಸ್ಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಸಿ. ಅರ್ಚನಾ, ಕನ್ನಡ ಹಬ್ಬ ವ್ಯವಸ್ಥಾಪಕಿ ಡಾ.ಟಿ.ಜೆ. ರಮ್ಯಾ ಅತಿಥಿಗಳಾಗಿದ್ದರು.ಪ್ರಜೈ ಮತ್ತು ತಂಡದವರು ನೃತ್ಯ, ಪ್ರತಿಮಾ ಮತ್ತು ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ನಾಡು-ನುಡಿಗೆ ನಮನ ಕುರಿತು ಭಾವನಾ ಮಾತನಾಡಿದರು. ಪ್ರಾರ್ಥನಾ ಅತಿಥಿಗಳನ್ನು ಪರಿಚಯಿಸಿದರು. ರಜಿತ್ ಆರ್. ಶಂಕರ್ ವಂದಿಸಿದರು. ವೈ.ಡಿ. ವಿಕಾಸ್ ನಿರೂಪಿಸಿದರು. ಕೆ. ಸವಿತಾ, ಗಾಯತ್ರಿ ಜಾಧವ್, ಇಸ್ಮಾಯಿಲ್ ಮೊದಲಾದವರು ಇದ್ದರು.