ಸರ್ಕಾರ ಹೇಳಿದ್ದಕ್ಕಿಂತ 50 ರು. ಹೆಚ್ಚಿನ ದರ ಘೋಷಿಸಿದ ಬೆಳಗಾವಿ ಸಕ್ಕರೆ ಕಾರ್ಖಾನೆ

| Published : Nov 09 2025, 02:30 AM IST

ಸರ್ಕಾರ ಹೇಳಿದ್ದಕ್ಕಿಂತ 50 ರು. ಹೆಚ್ಚಿನ ದರ ಘೋಷಿಸಿದ ಬೆಳಗಾವಿ ಸಕ್ಕರೆ ಕಾರ್ಖಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬು ಬೆಳೆಯುವ ರೈತರಿಗೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಸಿಹಿ ಸುದ್ದಿ ನೀಡಿದೆ. ಪ್ರತಿ ಟನ್ ಕಬ್ಬಿಗೆ 3,350 ರೂ., ಅಂದರೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ 50 ರೂ. ಜಾಸ್ತಿ ಕೊಡುವುದಾಗಿ ಘೋಷಿಸಿದೆ.

- ನಿಪ್ಪಾಣಿ ವೆಂಕಟೇಶ್ವರ ಸಕ್ಕರೆ ಆಫರ್‌- ಟನ್‌ಗೆ 3350 ರು. ದರ ನೀಡಲು ನಿರ್ಧಾರ

---

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕಬ್ಬು ಬೆಳೆಯುವ ರೈತರಿಗೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಸಿಹಿ ಸುದ್ದಿ ನೀಡಿದೆ. ಪ್ರತಿ ಟನ್ ಕಬ್ಬಿಗೆ 3,350 ರೂ., ಅಂದರೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ 50 ರೂ. ಜಾಸ್ತಿ ಕೊಡುವುದಾಗಿ ಘೋಷಿಸಿದೆ.

ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ₹3,300 ಬೆಲೆ ನಿಗದಿಪಡಿಸಿದ್ದು, ಇದರಲ್ಲಿ ₹3,250 ಸಕ್ಕರೆ ಕಾರ್ಖಾನೆಗಳು ಹಾಗೂ ₹50 ಸರ್ಕಾರದಿಂದ ಸಬ್ಸಿಡಿಯಾಗಿ ನೀಡಲಾಗುತ್ತದೆ.

ಇದೀಗ ಸರ್ಕಾರ ನಿಗದಿಪಡಿಸಿದ ದರಕ್ಕಿಂತ 50 ರೂ. ಹೆಚ್ಚಿಗೆ ನೀಡಲು ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಒಪ್ಪಿಗೆ ನೀಡಿದೆ. ವೆಂಕಟೇಶ್ವರ ಸಕ್ಕರೆ ಕಾರ್ಖಾನೆ, ಸ್ವರೂಪ ಮಹಾದೇವರಾವ್ ಮಹಾಡಿಕ್ (ಮಹಾರಾಷ್ಟ್ರದ ಕೊಲ್ಲಾಪುರ ನಿವಾಸಿ) ಎಂಬುವರ ಒಡೆತನದಲ್ಲಿದೆ.