ಸಾರಾಂಶ
ಸದಸ್ಯರ, ಗ್ರಾಹಕರ ಮತ್ತು ಠೇವಣಿದಾರರ ಸಹಕಾರ ಹಾಗೂ ಪ್ರಾಮಾಣಿಕ ವ್ಯವಹಾರದಿಂದ ತಾಲೂಕಿನ ಬೆಲ್ಲದ ಬಾಗೇವಾಡಿಯ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ಪ್ರಸಕ್ತ ವರ್ಷ ₹2.75 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಪವನ ಕತ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಸದಸ್ಯರ, ಗ್ರಾಹಕರ ಮತ್ತು ಠೇವಣಿದಾರರ ಸಹಕಾರ ಹಾಗೂ ಪ್ರಾಮಾಣಿಕ ವ್ಯವಹಾರದಿಂದ ತಾಲೂಕಿನ ಬೆಲ್ಲದ ಬಾಗೇವಾಡಿಯ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ಪ್ರಸಕ್ತ ವರ್ಷ ₹2.75 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಪವನ ಕತ್ತಿ ಹೇಳಿದರು.ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಬುಧವಾರ ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 21 ಸಾವಿರದಷ್ಟು ಮೆಂಬರರನ್ನು ಹೊಂದಿರುವ ಬ್ಯಾಂಕ್ ₹491.59 ಕೋಟಿ ಠೇವಣಿ ಸಂಗ್ರಹಿಸಿದೆ. ₹276.53 ಕೋಟಿ ಸಾಲ ವಿತರಿಸಿದ್ದು, ₹40.29 ಕೋಟಿ ಸ್ವಂತ ಬಂಡವಾಳ ಹೊಂದಿದೆ. ಸದಸ್ಯರಿಗೆ ಶೇ.15 ರಷ್ಟು ಲಾಭಾಂಶ ಹಂಚಲಾಗಿದೆ ಎಂದರು.7 ಜಿಲ್ಲಾ ಕಾರ್ಯ ವ್ಯಾಪ್ತಿ ಹೊಂದಿರುವ ಬ್ಯಾಂಕ್ 27 ಶಾಖೆಗಳನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ 5 ನೂತನ ಶಾಖೆಗಳನ್ನು ತೆರೆಯಲು ನಿಶ್ಚಯಿಸಿದೆ. ಈ ವರ್ಷ ₹5.91 ಕೋಟಿ ಆದಾಯ ಗಳಿಸಿದ ಬ್ಯಾಂಕ್ ಆದಾಯಕರ ಮತ್ತು ಇತರ ಶಾಸನ ಬದ್ಧ ಪ್ರಾವಧಾನಗಳನ್ನು ತೆಗೆದು ₹2.75 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.ಸಂಜಯ ಇಂಚಲ ಮಾತನಾಡಿ, ವೈಯಕ್ತಿಕ ಮತ್ತು ಸಾಲದ ಬಾಬತ್ತು ವಿಮಾ ಯೋಜನೆಯಿಂದ ಆಗುವ ಲಾಭವನ್ನು ವಿವರಿಸಿದರು. ಬ್ಯಾಂಕಿನ ಆಡಳಿತ ಸಲಹೆಗಾರ ಎಂ.ಕೆ.ಅಮ್ಮಣಗಿ ವಾರ್ಷಿಕ ವರದಿ ಮಂಡಿಸಿದರು.ಉಪಾಧ್ಯಕ್ಷ ಆರ್.ಬಿ.ಮುನ್ನೋಳಿ, ನಿರ್ದೇಶಕರಾದ ಎಂ.ಎಸ್.ಬೆಲ್ಲದ, ಎಂ.ಪಿ.ಖೇಮಲಾಪೂರೆ, ಎಸ್.ವಿ.ಹಾಗರಗಿ, ಸುರೇಶ ಬೆಲ್ಲದ, ಮುರುಗೇಶ ಕತ್ತಿ, ಎಸ್.ಡಿ.ಪಠಾಣ, ಕಿಶೋರ ಕತ್ತಿ, ಎಂ.ಎಸ್.ಶ್ರೀಖಂಡೆ, ವಿ.ಎಸ್.ಶೆಟ್ಟಿ, ಎಸ್.ಎಸ್.ತೇರದಾಳ, ಮುಖಂಡರಾದ ಪೃಥ್ವಿ ಕತ್ತಿ, ಸಂದೀಪ ಕತ್ತಿ, ಅಶೋಕ ಬೆಲ್ಲದ, ಶ್ರೀಕಾಂತ ಖೇಮಲಾಪೂರೆ, ಅಪ್ಪಾಸಾಹೇಬ ಖೇಮಲಾಪೂರೆ ಮತ್ತಿತರರಿದ್ದರು. ಹಿರಿಯ ವ್ಯವಸ್ಥಾಪಕ ಶ್ರೀಶೈಲ ಚರಾಟಿ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಸುನೀಲ ಬೆಲ್ಲದ ನಿರೂಪಿಸಿದರು. ನಿರ್ದೇಶಕ ವಿನಾಯಕ ಬುರ್ಜಿ ವಂದಿಸಿದರು.