ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್‌ಗೆ ₹2.75 ಕೋಟಿ ಲಾಭ

| Published : Apr 20 2025, 02:00 AM IST

ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್‌ಗೆ ₹2.75 ಕೋಟಿ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಒಟ್ಟು ₹591.63 ಲಕ್ಷ ಲಾಭ ಗಳಿಸಿದ್ದು, ಅದರಲ್ಲಿ ಶಾಸನಬದ್ದ ಪ್ರಾವಧಾನಗಳನ್ನು ವರ್ಗಾವಣೆ ಮಾಡಿದ ನಂತರ ₹2.75 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಪವನ ಕತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಒಟ್ಟು ₹591.63 ಲಕ್ಷ ಲಾಭ ಗಳಿಸಿದ್ದು, ಅದರಲ್ಲಿ ಶಾಸನಬದ್ದ ಪ್ರಾವಧಾನಗಳನ್ನು ವರ್ಗಾವಣೆ ಮಾಡಿದ ನಂತರ ₹2.75 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಪವನ ಕತ್ತಿ ಹೇಳಿದರು.

ಬ್ಯಾಂಕ್‌ನ ಸಭಾ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ, ಸದಸ್ಯ-ಗ್ರಾಹಕರ ಅಭಿಮಾನ ಮತ್ತು ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಸೇವಾ ಮನೋಭಾವದಿಂದ ಬ್ಯಾಂಕ್ ದಿನೇ ದಿನೇ ಪ್ರಗತಿ ಪಥದತ್ತ ಸಾಗಿದೆ ಎಂದರು.₹40.29 ಕೋಟಿ ಸ್ವಂತ ಬಂಡವಾಳದೊಂದಿಗೆ ₹544.14 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹491.59 ಕೋಟಿ ಠೇವು ಸಂಗ್ರಹಿಸಿ ₹276.53 ಕೋಟಿ ಸಾಲ ವಿತರಿಸಲಾಗಿದೆ. ಶೇ.99.89 ಸಾಲ ವಸೂಲಾತಿಯಾಗಿದೆ. ಸಿಬ್ಬಂದಿಗೆ ಶೇ.25 ಬೋನಸ್ ಮತ್ತು ಎಕ್ಸ್-ಗ್ರೇಷಿಯಾ ನೀಡಲಾಗಿದೆ. ಎನ್‌ಪಿಎ ಶೂನ್ಯ ಇರುವುದು ಬ್ಯಾಂಕಿನ ಮತ್ತೊಂದು ವಿಶೇಷ ಎಂದು ತಿಳಿಸಿದರು.ಬರುವ 5 ವರ್ಷಗಳಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ ಶಾಖೆಗಳನ್ನು ತೆರೆದು ಗ್ರಾಹಕರಿಗೆ ಸೇವೆಯನ್ನು ನೀಡುವ ಚಿಂತನೆಯಿದೆ. ಸಿಬ್ಬಂದಿಗಳಿಗೆ 8ನೇ ವೇತನ ಜಾರಿ ಮಾಡಿದ ಜಿಲ್ಲೆಯ ಮೊದಲ ಬ್ಯಾಂಕ್ ಇದಾಗಿದೆ. ಕಾಲ ಕಾಲಕ್ಕೆ ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ ಕತ್ತಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.ಉಪಾಧ್ಯಕ್ಷ ಆರ್.ಬಿ.ಮುನ್ನೋಳಿ, ನಿರ್ದೇಶಕರಾದ ಎಸ್.ಎಸ್.ಪಾಟೀಲ, ಎಂ.ಎಸ್.ಬೆಲ್ಲದ, ಡಾ.ಎಂ.ಎಸ್.ಮುನ್ನೋಳಿ, ಆರ್.ಟಿ.ಶಿರಾಳಕರ, ಎಸ್.ವಿ.ಹಾಗರಗಿ, ಸುರೇಶ ಬೆಲ್ಲದ, ಮುರಗೇಶ ಕತ್ತಿ, ಎಂ.ಪಿ.ಖೇಮಲಾಪೂರೆ, ಎಸ್.ಡಿ.ಪಠಾಣ, ಕಿಶೋರ ಕತ್ತಿ, ಎಂ.ಎಸ್.ಶ್ರೀಖಂಡೆ, ವಿ.ಎಸ್.ಬುರ್ಜಿ, ಆಡಳಿತ ಸಲಹೆಗಾರ ಎಂ.ಕೆ.ಅಮ್ಮಣಗಿ, ಪ್ರಧಾನ ವ್ಯವಸ್ಥಾಪಕ ಸುನೀಲ ಬೆಲ್ಲದ, ಹಿರಿಯ ವ್ಯವಸ್ಥಾಪಕ ಶ್ರೀಶೈಲ ಚರಾಟಿ ಮತ್ತಿತರರು ಉಪಸ್ಥಿತರಿದ್ದರು.ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿತವಾದ ಅರ್ಬನ್ ಬ್ಯಾಂಕ ತನ್ನ ಸಿಬ್ಬಂದಿಗೆ 8ನೇ ವೇತನ ಜಾರಿ ಮಾಡಿದ ಜಿಲ್ಲೆಯ ಮೊದಲ ಅರ್ಬನ್ ಬ್ಯಾಂಕ್ ಎನಿಸಿದೆ.

-ಪವನ ಕತ್ತಿ, ಅಧ್ಯಕ್ಷರು