ಸಾರಾಂಶ
ಬಳ್ಳಾರಿ: ನಗರದ ಸಮಗ್ರ ಅಭಿವೃದ್ಧಿಯೇ ನನ್ನ ಮುಖ್ಯ ದ್ಯೇಯವಾಗಿದೆ. ಪ್ರತಿಪಕ್ಷಗಳು ಏನೇ ಟೀಕಿಸಿದರೂ ಈ ಊರಿನ ಪ್ರಗತಿಯ ಬಗ್ಗೆ ನಾನು ಕೆಲಸ ಮಾಡುತ್ತೇನೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಸ್ಪಷ್ಟಪಡಿಸಿದರು.
ನಗರದ ರಾಘವೇಂದ್ರ ಕಾಲನಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲಾದ ಉದ್ಯಾನವನ ಉದ್ಘಾಟಿಸಿ ಅವರು ಮಾತನಾಡಿದರು.ವಿನಾಕಾರಣ ಮಾತನಾಡುವುದು ನನ್ನ ಜಾಯಮಾನವಲ್ಲ. ನಾವು ಮಾಡುವ ಕೆಲಸವೇ ಮಾತನಾಡಬೇಕು ಎಂಬ ನಿಲುವು ನನ್ನದು. ಹೀಗಾಗಿ ನಾನು ಜನಪರವಾದ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಹೋಗುತ್ತೇನೆ. ಪ್ರತಿಪಕ್ಷದ ಕೆಲ ನಾಯಕರಿಗೆ ಬೇರೆ ಕೆಲಸವಿಲ್ಲ. ಆಡಳಿತಾರೂಢ ಪಕ್ಷ ಹಾಗೂ ಶಾಸಕರನ್ನು ಟೀಕಿಸುವುದೇ ಅವರ ಕೆಲಸವಾಗಿದೆ. ಸೋತು ಮನೆಯಲ್ಲಿ ಕುಳಿತ ಕೆಲವು ನಾಯಕರಿಗಂತೂ ಟೀಕಿಸುವುದು ಬಿಟ್ಟು ಬೇರೆ ಕೆಲಸವೇ ಇಲ್ಲ. ಆದರೆ, ಅವರ ಟೀಕೆಗಳಿಗೆ ಉತ್ತರಿಸುವುದಿಲ್ಲ. ಜನರೇ ಅವರಿಗೆ ಸರಿಯಾದ ಉತ್ತರ ನೀಡುತ್ತಾರೆ ಎಂದರು.
ಬಳ್ಳಾರಿ ಮಾದರಿ ನಗರವಾಗಬೇಕು. ಪ್ರತಿಯೊಬ್ಬರಿಗೂ ಮೂಲ ಸೌಕರ್ಯಗಳು ದೊರೆಯಬೇಕು. ಸ್ವಚ್ಛನಗರ, ಸುಂದರ ನಗರವಾಗಿ ಪರಿವರ್ತನೆಯಾಗಬೇಕು. ಈ ದಿಸೆಯಲ್ಲಿ ಕಾರ್ಯ ಯೋಜನೆ ರೂಪಿಸಿಕೊಂಡು ಕೆಲಸ ಮಾಡುತ್ತಿದ್ದು, ಜನಮುಖಿಯಾಗಿ ಮಾಡುವ ಕೆಲಸಗಳಿಗೆ ಜನರು ಸದಾ ಬೆಂಬಲಿಸುತ್ತಾರೆ ಅಪಾರವಾದ ವಿಶ್ವಾಸ ನನ್ನದಾಗಿದೆ ಎಂದು ತಿಳಿಸಿದರು.ಬಳ್ಳಾರಿಗೆ ತುಂಗಭದ್ರಾ ಜಲಾಶಯದಿಂದ ನೇರವಾಗಿ ಕುಡಿವನೀರು ಪೂರೈಕೆಯ ಯೋಜನೆ ಜಾರಿಗೊಳಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಚರ್ಚಿಸಿ
₹1200 ಕೋಟಿ ಮಂಜೂರು ಮಾಡಿಸಿಕೊಳ್ಳಲಾಗಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಗೆ ₹300 ಕೋಟಿ ಹಾಗೂ ತಾರಾನಾಥ ಆಸ್ಪತ್ರೆಗೆ ₹28 ಕೋಟಿ ಮಂಜೂರು ಮಾಡಲಾಗಿದ್ದು ನಗರದ ವಿವಿಧ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.ಬುಡಾ ಅಧ್ಯಕ್ಷ ಜೆ.ಎಸ್.ಆಂಜಿನೇಯಲು ಮಾತನಾಡಿ, ಶಾಸಕ ನಾರಾ ಭರತ್ ರೆಡ್ಡಿ ಅವರು ನಗರದ ವಿವಿಧ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ಆದರೆ, ವಿನಾಕಾರಣ ಪ್ರತಿಪಕ್ಷದ ನಾಯಕರು ಟೀಕಿಸುತ್ತಿದ್ದಾರೆ. ಸುಧಾಕ್ರಾಸ್ ಮೇಲ್ಸೇತುವೆ, ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ಮೇಲ್ಸೇತುವೆ ನಿರ್ಮಾಣವಾಗಲಿದ್ದು ಈ ಹಿಂದಿನ ಸರ್ಕಾರ ಬಳ್ಳಾರಿಯ ಅಭಿವೃದ್ಧಿಗೆ ಯಾವ ಕೊಡುಗೆ ನೀಡದೆ ನಿರ್ಲಕ್ಷ್ಯ ವಹಿಸಿತು. ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಮುಂದಿದೆ ಎಂದು ತಿಳಿಸಿದರು. ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಪಾಲಿಕೆ ಸದಸ್ಯ ಪ್ರಭಂಜನಕುಮಾರ್, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಕಾಂಗ್ರೆಸ್ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಸ್ಥಳೀಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))