ಸಾರಾಂಶ
ಕುರುಗೋಡು: ದಮ್ಮೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್ ಪರಿಶೀಲಿಸಿದರು.ಸ್ಮಶಾನ ಅಭಿವೃದ್ಧಿ ವೀಕ್ಷಿಸಿದರು. ಬಳಿಕ ಅಮೃತ ಸರೋವರ ಪಾರ್ಕ್‌ಗೆ ಭೇಟಿ ನೀಡಿದರು.
ತೋಟಗಾರಿಕೆ ಬೆಳೆ ಡ್ರಾಗನ್ ಪ್ರೂಟ್ಸ್, ಕಲ್ಯಾಣಿ ಕಾಮಗಾರಿ ಪರಿಶೀಲನೆ ನಡೆಸಿದರು. ತೋಟಗಾರಿಕೆ ಇಲಾಖೆಯಡಿ ರಸ್ತೆ ಬದಿಯಲ್ಲಿ ಗಿಡ ನೆಡುವ ಕಾರ್ಯಕೈಗೊಂಡರು.ಸಮೀಪದ ಕೋಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಮಂಗಳವಾರ ಭೇಟಿ ನೀಡಿ ಕಾಂಪೌಂಡ್ ಕಾಮಗಾರಿ ವೀಕ್ಷಣೆ ಮಾಡಿ, ಆನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಪ್ರತಿಯೊಬ್ಬ ಶಿಕ್ಷಕರು ವಿದ್ಯಾರ್ಥಿಗಳಿಗೆ ತಕ್ಕಂತೆ ಅಚ್ಚುಕಟ್ಟಾಗಿ, ವಿವರವಾತ್ಮಕವಾಗಿ ಬೋಧನೆ ಮಾಡಬೇಕು. ಈಗಾಗಲೇ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಶಿಕ್ಷಕರು ಸರಿಯಾಗಿ ಪಾಠ ಪ್ರವಚನ ನೀಡುತ್ತಿಲ್ಲ ಎಂಬ ವಿಚಾರಕಂಡುಬಂದಿದೆ.
ಇನ್ನೂ ಸ್ವಲ್ಪ ದಿನಗಳ ಅದನಂತರ ಮರಳಿ ಬರುತ್ತೇನೆ. ಅಷ್ಟರಲ್ಲಿ ಸರಿಪಡಿಸಿರಬೇಕು ಎಂದು ಸೂಚಿಸಿದರು.ಆನಂತರ ಸಮೀಪದ ಕೋಳೂರು, ಸೋಮಸಮುದ್ರ, ದಮ್ಮೂರು ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳಿಗೆ ಪರಿಶೀಲನೆ ಮಾಡಿದರು.
ಕೊಳೂರು ಗ್ರಾಪಂಯಲ್ಲಿ ಎನ್‌ಆರ್‌ಎಲ್‌ಎಂ ಶೆಡ್ ಕಾಮಗಾರಿ, ಪ್ರೌಢಶಾಲೆಯ ಕಾಂಪೌಂಡ್ ವೀಕ್ಷಣೆ ಮಾಡಿ, ಆನಂತರ 10ನೇ ತರಗತಿಯ ಮಕ್ಕಳ ಜತೆ ವಿವಿಧ ವಿಷಯಗಳ ಕುರಿತು ಸಂವಾದ ನಡೆಸಿದರು.
ಸೋಮಸಮುದ್ರ ಗ್ರಾಪಂಯಲ್ಲಿ ಶಾಲಾ ಕಾಂಪೌಂಡ್ ಪೆವರ್ಸ್ ಕಾಮಗಾರಿ, ಕುಡಿಯುವ ನೀರಿನ ಕೆರೆ ಪರಿಶೀಲನೆ ನಡೆಸಿದರು. ಜಿಪಂ ಎಡಿಪಿಸಿ ಅಂಬರೀಷ್, ತಾಪಂ ಇಒ ಕೆ.ವಿ. ನಿರ್ಮಲಾ, ಸಹಾಯಕ ನಿರ್ದೇಶಕ ಶಿವರಾಮರೆಡ್ಡಿ, ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ, ಐವಿಸಿ ಸಂಯೋಜಕ ಚಂದ್ರಶೇಖರ ಇದ್ದರು.
ಪಿಡಿಒಗಳಾದ ಮಲ್ಲಿಕಾರ್ಜುನ, ಜುಬೇದಾ, ಸಿದ್ದಲಿಂಗಪ್ಪ, ತಾಂತ್ರಿಕ ಸಹಾಯಕ ಅರುಣಾಜ್ಯೋತಿ, ಬಿಎಫ್‌ಸಿ ಹೊನ್ನೂರ್ ಸ್ವಾಮಿ, ಆಗಲೂರಪ್ಪ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.