ಸಾರಾಂಶ
ರೋಟರಿ ಕ್ಲಬ್ ವತಿಯಿಂದ ಕೊಯ್ಯೂರು ಪ್ರೌಢಶಾಲೆಗೆ 12 ಲಕ್ಷ ರು. ವೆಚ್ಚದ ಶೌಚಾಲಯ, ಬದನಾಜೆ ಹಿ.ಪ್ರಾ.ಶಾಲೆಗೆ 5ಕೆ.ವಿ. ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಹಾಗೂ ಮಾಯಾ ಮುರತ್ತಳಿಕೆಯಲ್ಲಿ ಭವ್ಯಾ ಗೌಡ ಇವರಿಗೆ ಮನೆ ಹಸ್ತಾಂತರ ಕಾರ್ಯಕ್ರಮಗಳು ಜರಗಿದವು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಎಲ್ಲ ರೋಗಿಗಳಿಗೆ ಉತ್ತಮ ಸೇವೆ ಸಿಗಬೇಕೆಂಬ ಉದ್ದೇಶದಿಂದ ಮತ್ತು ಅವರ ನೆಮ್ಮದಿಯ ಜೀವನಕ್ಕಾಗಿ ದೂರದೃಷ್ಟಿ ಯೋಜನೆಯ ಮೂಲಕ ನೆರವಿಗೆ ಮುಂದಾಗಿರುವ ರೋಟರಿ ಹಾಗೂ ಸಂಘ-ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಬೆಳ್ತಂಗಡಿ ರೋಟರಿ ಕ್ಲಬ್, ರೋಟರಿ ಬೆಂಗಳೂರು ಇಂದಿರಾ ನಗರ ಮತ್ತು ಇತರ ಸಂಘ- ಸಂಸ್ಥೆಗಳ ವತಿಯಿಂದ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ 40 ಲಕ್ಷ ರುಪಾಯಿ ವೆಚ್ಚದ ನಾಲ್ಕು ಡಯಾಲಿಸಿಸ್ ಯಂತ್ರ, ಒಂದು ಆರ್.ಒ. ಪ್ಲಾಂಟನ್ನು ಹಸ್ತಾಂತರಿಸಿ ಮಾತನಾಡಿದರು.ಆಧುನಿಕ ಯಂತ್ರೋಪಕರಣಗಳಿಂದ ರೋಗಿಗಳಿಗೆ ಉತ್ತಮ ಸೇವೆ ಸಿಗಲಿದೆ. ತಾಲೂಕು ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರ ಸುಸಜ್ಜಿತವಾಗಿ ನಿರ್ಮಾಣಗೊಂಡು ರೋಗಿಗಳಿಗೆ ತ್ವರಿತ ಸೇವೆ ನೀಡಲಿದೆ.ಅಲ್ಟ್ರಾ ಸೌಂಡ್ ವಿಭಾಗ ತೆರೆಯಲು ಸಂಸ್ಥೆಯೊಂದಕ್ಕೆ ಸಂಸದರ ಮೂಲಕ ಮನವಿ ಸಲ್ಲಿಸಲಾಗಿದ್ದು ಈ ಬಗ್ಗೆ ಪೂರಕ ಭರವಸೆ ಸಿಕ್ಕಿದೆ ಎಂದು ಹೇಳಿದರು
ಕ್ಯಾನ್ ಫಿನ್ ಹೋಂನ ಪ್ರಶಾಂತ ಜೋಶಿ ಮಾತನಾಡಿ, ನೀಡುವ ಕೊಡುಗೆಗಳು ಸದುಪಯೋಗವಾದರೆ ನೀಡಿದವರ ಧ್ಯೇಯ ಪೂರ್ಣಗೊಳ್ಳುತ್ತದೆ ಎಂದರು. ಎಂ.ಎಲ್. ಸಿ. ಪ್ರತಾಪ ಸಿಂಹ ನಾಯಕ್, ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್ ಪೈ, ರೋಟರಿ ಕ್ಲಬ್ ಬೆಳ್ತಂಗಡಿ ಇದರ ನಿಯೋಜಿತ ಅಧ್ಯಕ್ಷ ಪೂರನ್ ವರ್ಮ, ನಿಯೋಜಿತ ಕಾರ್ಯದರ್ಶಿ ಸಂದೇಶ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಯಾನಂದ ಗೌಡ, ರೋಟರಿ ಕ್ಲಬ್ ವಲಯ ಸೇನಾನಿ ಯಶವಂತ ಪಟವರ್ಧನ್, ಮಾಜಿ ಅಧ್ಯಕ್ಷ ಎಂ.ವಿ.ಭಟ್, ಡಾ.ಶಶಿಕಾಂತ್ ಡೋಂಗ್ರೆ, ಡಾ.ಶಶಾಂಕ್ ಕುಂಬ್ಳೆ ಮತ್ತಿತರರು ಉಪಸ್ಥಿತರಿದ್ದರು. ಬಿ.ಕೆ. ಧನಂಜಯ ರಾವ್ ಕಾರ್ಯಕ್ರಮ ನಿರೂಪಿಸಿದರು. ವೈದ್ಯಾಧಿಕಾರಿ ಡಾ.ಚಂದ್ರಕಾಂತ್ ವಂದಿಸಿದರು.ರೋಟರಿ ಕ್ಲಬ್ ವತಿಯಿಂದ ಕೊಯ್ಯೂರು ಪ್ರೌಢಶಾಲೆಗೆ 12 ಲಕ್ಷ ರು. ವೆಚ್ಚದ ಶೌಚಾಲಯ, ಬದನಾಜೆ ಹಿ.ಪ್ರಾ.ಶಾಲೆಗೆ 5ಕೆ.ವಿ. ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಹಾಗೂ ಮಾಯಾ ಮುರತ್ತಳಿಕೆಯಲ್ಲಿ ಭವ್ಯಾ ಗೌಡ ಇವರಿಗೆ ಮನೆ ಹಸ್ತಾಂತರ ಕಾರ್ಯಕ್ರಮಗಳು ಜರಗಿದವು.