ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಇಳಿಕೆ: ಸಚಿವ ಗುಂಡೂರಾವ್‌ ತರಾಟೆ

| Published : Jan 19 2025, 02:16 AM IST

ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಇಳಿಕೆ: ಸಚಿವ ಗುಂಡೂರಾವ್‌ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ರೋಗಿಗಳಿಗೆ ಅವಶ್ಯಕವಿರುವ ಔಷಧಗಳನ್ನು ಪೂರ್ಣ ಪ್ರಮಾಣದಲ್ಲಿ ದೊರೆಯುವಂತೆ ಕ್ರಮವಹಿಸಬೇಕು. ರೋಗಿಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕೆಂದರು. ಆಸ್ಪತ್ರೆಗೆ ಬೇಕಾದ ಕಟ್ಟಡ, ಇನ್ನಿತರ ಸೌಲಭ್ಯಗಳ ಬೇಡಿಕೆ ನೀಡುವಂತೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಶೀಘ್ರವಾಗಿ ಹೆಚ್ಚಿಸುವ ಪ್ರಯತ್ನವನ್ನು ಕೈಗೊಳ್ಳಬೇಕು. ಎಲ್ಲ ಸೌಕರ್ಯಗಳಿದ್ದರು ಹೆರಿಗೆ ಪ್ರಮಾಣ ಯಾಕೆ ಕಡಿಮೆಯೆಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಯ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಅವರು ಶನಿವಾರ ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಬಿ.ಪಿ.ಎಚ್ ಲ್ಯಾಬ್ ಮತ್ತು 12 ಬೆಡ್‌ಗಳ ಐಸೋಲೇಶನ್ ವಾರ್ಡ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಜನಸಾಮಾನ್ಯರಿಗೆ ಉತ್ತಮ ಅರೋಗ್ಯ ಸಿಗಬೇಕು ಎಂದು ಸರಕಾರ ಎಲ್ಲ ಮೂಲಭೂತ ಸೌಕರ್ಯ ಒದಗಿಸುತ್ತಿದೆ, ಬಹುತೇಕ ಸಿಬ್ಬಂದಿಯನ್ನು ನೇಮಕ ಮಾಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ 10- 15 ಹೆರಿಗೆ ಆಗುತ್ತಿರುವಾಗ ತಾಲೂಕು ಆಸ್ಪತ್ರೆಯಲ್ಲಿ 10- 15 ಹೆರಿಗೆ ಆಗುತ್ತದೆ ಎಂದರೆ ಇದು ತೀರ ನಿರ್ಲಕ್ಷ್ಯ. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಶಾಸಕ ಹರೀಶ್ ಪೂಂಜ ಕೂಡ ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳ ಬೇಕು ಎಂದು ಸೂಚಿಸಿದರು. ರೋಗಿಗಳಿಗೆ ಅವಶ್ಯಕವಿರುವ ಔಷಧಗಳನ್ನು ಪೂರ್ಣ ಪ್ರಮಾಣದಲ್ಲಿ ದೊರೆಯುವಂತೆ ಕ್ರಮವಹಿಸಬೇಕು. ರೋಗಿಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕೆಂದರು. ಆಸ್ಪತ್ರೆಗೆ ಬೇಕಾದ ಕಟ್ಟಡ, ಇನ್ನಿತರ ಸೌಲಭ್ಯಗಳ ಬೇಡಿಕೆ ನೀಡುವಂತೆ ಸೂಚಿಸಿದರು.

ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಹಾಗೂ ಉನ್ನತೀಕರಣ ಕಾಮಗಾರಿಗಳ ಶಿಲಾನ್ಯಾಸವನ್ನು ಶಾಸಕ ಹರೀಶ್ ಪೂಂಜ ನೇರವೇರಿಸಿದರು.ಈ‌ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ನಾಗೇಶ್ ಗೌಡ, ಪಟ್ಟಣ ಪಂಚಾಯಿತಿ ಸದಸ್ಯ ಶರತ್ ಶೆಟ್ಟಿ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಅಪರ ಸರಕಾರಿ ವಕೀಲ ಮನೋಹರ್ ಇಳಂತಿಳ, ಜಿ.ಪಂ ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ, ನಮಿತಾ, ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಬೆಳ್ತಂಗಡಿ, ಪ್ರಮುಖರಾದ ಉಷಾ ಶರತ್, ಕುಶಾಲಪ್ಪ ಗೌಡ, ಜೆಸಿಂತಾ ಮೋನಿಸ್, ಯಶೋದಾ ಕುತ್ಲೂರು, ಅಕ್ಬರ್ ಬೆಳ್ತಂಗಡಿ, ವಸಂತ ಬಿ.ಕೆ., ಪುನೀತ್ ಮಾಲಾಡಿ, ಪ್ರಶಾಂತ್ ಮಚ್ಚಿನ, ಈಶ್ವರ ಭಟ್, ಜಯವಿಕ್ರಮ್ ಕಲ್ಲಾಪು, ನಿತೀಶ್ ಕುಕ್ಕೇಡಿ, ಮೋಹನ್ ಶೆಟ್ಟಿಗಾರ್, ಕೇರಿಮಾರ್ ಬಾಲಕೃಷ್ಣ ಗೌಡ, ಸುಭಾಶ್ಚಂದ್ರ ರೈ ಅಳದಂಗಡಿ, ಸಂಜೀವ ಪೂಜಾರಿ, ಭಗೀರಥ ಜಿ., ಸೌಮ್ಯ ಲಾಯಿಲ, ವನಿತಾ, ಸವಿತಾ, ಜಿನತ್, ಗುಣವತಿ, ಮರೀನಾ ಪಿಂಟೋ, ಮಧುರ, ಓಡಿಳ್ನಾಲ ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ದನಂಜಯ ಗುರುವಾಯನಕೆರೆ, ಉಪಸ್ಥಿತರಿದ್ದರು.