ಬೆಳ್ತಂಗಡಿ: ಎರಡು ಪ್ರತ್ಯೇಕ ಬೆಂಕಿ ಅವಘಡ

| Published : Apr 12 2024, 01:02 AM IST

ಬೆಳ್ತಂಗಡಿ: ಎರಡು ಪ್ರತ್ಯೇಕ ಬೆಂಕಿ ಅವಘಡ
Share this Article
  • FB
  • TW
  • Linkdin
  • Email

ಸಾರಾಂಶ

ಕಳಿಯ ಗ್ರಾಮದ ಗೇರುಕಟ್ಟೆಯ ಬಟ್ಟೆ ಮಾರು ಎಂಬಲ್ಲಿ ಕೊಯ್ಯೂರು- ಪರಪ್ಪು ರಸ್ತೆಯ ಪಕ್ಕದಲ್ಲಿ ಬೈಹುಲ್ಲು ಸಾಗಾಟದ ಲಾರಿಗೆ ಬೆಂಕಿ ತಗುಲಿ ಬೈಹುಲ್ಲು ಹೊತ್ತಿ ಉರಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ಮುಳಿಕಾರು ಅರಣ್ಯ ಪ್ರದೇಶದಲ್ಲಿ ಬೆಂಕಿ ಅನಾಹುತ ಉಂಟಾಗಿ ಸುಮಾರು 2 ಎಕರೆಯಷ್ಟು ಕಾಡಿನ ಭಾಗಕ್ಕೆ ಆವರಿಸಿದ ಘಟನೆ ನಡೆದಿದೆ. ಅರಣ್ಯ ಭಾಗದಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ಇದ್ದು, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಇನ್ನೊಂದು ಘಟನೆ: ಕಳಿಯ ಗ್ರಾಮದ ಗೇರುಕಟ್ಟೆಯ ಬಟ್ಟೆ ಮಾರು ಎಂಬಲ್ಲಿ ಕೊಯ್ಯೂರು- ಪರಪ್ಪು ರಸ್ತೆಯ ಪಕ್ಕದಲ್ಲಿ ಬೈಹುಲ್ಲು ಸಾಗಾಟದ ಲಾರಿಗೆ ಬೆಂಕಿ ತಗುಲಿ ಬೈಹುಲ್ಲು ಹೊತ್ತಿ ಉರಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಬೈಹುಲ್ಲು ಸಾಗಾಟ ಲಾರಿ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ರಸ್ತೆ ಪಕ್ಕದ ಮನೆಯವರು ನೋಡಿದ್ದು ತಕ್ಷಣ ಟೆಂಪೋ ಚಾಲಕನ ಗಮನಕ್ಕೆ ತಂದರು. ನಂತರ ಸ್ಥಳೀಯ ಯುವಕರ ಸೇರಿ ಮನೆಗಳಿಂದ ನೀರು ತಂದು ಬೆಂಕಿಯನ್ನು ಹತೋಟಿಗೆ ತರಲು ಯತ್ನಿಸಿದರು. ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತಂದರು. ಘಟನೆಯಲ್ಲಿ ಬೈ ಹುಲ್ಲು ಸಂಪೂರ್ಣ ಸುಟ್ಟು ಹೋಗಿದ್ದು ವಾಹನಕ್ಕೆ ಹೆಚ್ಚಿನ ಹಾನಿ ಉಂಟಾಗಿಲ್ಲ.

ರಸ್ತೆಯ ಪಕ್ಕದಲ್ಲಿ ತೀರಾ ಕೆಳಭಾಗದಲ್ಲಿ ವಿದ್ಯುತ್ ತಂತಿ ಇದ್ದು ಇದರಿಂದ ಬೈಹುಲ್ಲಿಗೆ ಬೆಂಕಿ ತಗಲಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.