ಸಾರಾಂಶ
ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳು, ಬುಡಕಟ್ಟು ಅಧ್ಯಯನ ಶಿಬಿರವನ್ನು ಹಮ್ಮಿಕೊಂಡಿದ್ದು, ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕುರಿತು ಡಾ. ಯಶಸ್ವಿನಿ ಬಟ್ಟಂಗಾಯ ಅವರು ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳು, ಬುಡಕಟ್ಟು ಅಧ್ಯಯನ ಶಿಬಿರವನ್ನು ಹಮ್ಮಿಕೊಂಡಿದ್ದು, ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕುರಿತು ಡಾ. ಯಶಸ್ವಿನಿ ಬಟ್ಟಂಗಾಯ ಅವರು ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದರು.ನಂತರ ಮಧ್ಯಾಹ್ನದ ಶೈಕ್ಷಣಿಕ ಅಧ್ಯಯನ ಅವಧಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಧರ್ಮಸ್ಥಳ ಠಾಣೆಯಯ ಉಪನಿರೀಕ್ಷಕ ಸಮರ್ಥ್ ಗಾಣಿಗೇರ, ಸಾಮಾಜಿಕ ಜಾಲತಾಣದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ವಿವರಣೆಯನ್ನು ನೀಡಿ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಿದರು. ಮಕ್ಕಳಿಗೆ ಇರುವ ಕೆಲವು ಸಮಸ್ಯೆಯಗಳನ್ನು ಪರಿಹರಿಸಿದರು.
ಸಂಜೆಯ ಕಾರ್ಯಕ್ರಮಕ್ಕೆ ಆಗಮಿಸಿದ ಬೆಳ್ತಂಗಡಿ ಕೆನರಾ ಬ್ಯಾಂಕ್ ಆರ್ಥಿಕ ಸಮಾಲೋಚಕಿ ಉಷಾ, ಜನಸಾಮಾನ್ಯರಿಗೆ ಇರುವಂತಹ ಉಳಿತಾಯ ಖಾತೆಯ ಬಗ್ಗೆ ಮತ್ತು ಸ್ವಉದ್ಯೋಗವನ್ನು ಮಾಡಲು ಇರುವಂತಹ ಯೋಜನೆಗಳ ಬಗ್ಗೆ ಮತ್ತು ಜೀವ ವಿಮೆಯ ಬಗ್ಗೆ, ಸಾಲ ಸೌಲಭ್ಯಗಳ ಬಗ್ಗೆ ಸ್ವ ವಿವರವಾಗಿ ತಿಳಿಸಿದರು.ನಂತರ ಶಿಬಿರಾರ್ಥಿಗಳು ಮನೋರಂಜನಾ ಕಾರ್ಯಕ್ರಮವನ್ನು ನೀಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಎಲ್ಲ ಗ್ರಾಮಸ್ಥರನ್ನು ಮನರಂಜಿಸಿದರು. ಈ ದಿನದ ಕಾರ್ಯಕ್ರಮದ ನಿರೂಪಣೆಯನ್ನು ವೈಶಾಲಿ ಸುರೇಶ್ ಆದಿಮನಿ ಮತ್ತು ಶ್ರೇಯಸ್ ಶೆಣೈ ನಿರ್ವಹಿಸಿದರು.