ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುಹಾಸನ ಜಿಲ್ಲೆಯ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೇಕ್ ಕತ್ತರಿಸಿ ಸಂಭ್ರಮಾಚರಣೆಯನ್ನು ನಡೆಸಲಾಯಿತು.ಕಸಾಪ ಅಧ್ಯಕ್ಷರಾದ ಮಾನ ಮಂಜೇಗೌಡ ಮಾತನಾಡಿ, ಸಾಹಿತಿ ಬಾನು ಮುಷ್ತಾಕ್ ಜಿಲ್ಲೆಗೆ ರಾಜ್ಯಕ್ಕೆ, ರಾಷ್ಟ್ರಕ್ಕೆ ಗೌರವ ತರುವಂತಹ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವುದು ಕನ್ನಡಿಗರಿಗೆಲ್ಲ ಹೆಮ್ಮೆ ತಂದಿದೆ. ಅವರು ರಚಿಸಿರುವ "ಹಸೀನಾ " ಕಾದಂಬರಿ ಚಲನಚಿತ್ರವಾಗಿ ಮೂರು ಭಾಷೆಗಳಲ್ಲಿ ಹೆಸರುಗಳಿಸಿದೆ. ಅವರು ಎದೆಯ ಹಣತೆ, ಬೆಂಕಿಯ ಮಳೆ, ಮುಂತಾದ ಕೃತಿಗಳನ್ನು ರಚಿಸಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಸ್ಥಿತಿಗತಿಗಳನ್ನು ಅನಾವರಣಗೊಳಿಸಿದ್ದಾರೆ ಎಂದರು.ಸಾಹಿತಿ ಇಂದಿರಮ್ಮ ಮಾತನಾಡಿ, ಕನ್ನಡ ಭಾಷೆ ಶ್ರೇಷ್ಠತೆಯ ಜೊತೆಗೆ ಬಾನು ಮುಷ್ತಾಕ್ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿಯುವ ಧೀರ ಮಹಿಳೆ ಎಂದರು.ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ರಾಜೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮಹೇಶ್, ಸಂಘಟನಾ ಕಾರ್ಯದರ್ಶಿಯಾದ ಬೊಂಬಡಿಯಲ್ಲಿ ಕುಮಾರಸ್ವಾಮಿ, ಕನ್ನಡ ಉಪನ್ಯಾಸಕರಾದ ಸುಜಯ್, ಕಸಾಪ ಉಪಾಧ್ಯಕ್ಷರಾದ ಚಂದ್ರು, ಕಸಾಪ ನಿರ್ದೇಶಕ ಸುಲೇಮಾನ್, ಕನ್ನಡ ಸಾಹಿತ್ಯ ಪರಿಷತ್ ಕೋಶ ಅಧ್ಯಕ್ಷ ಗುರುರಾಜ್, ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕರಾದ ಟಿಸಿ ಸಂಪತ್, ಶೋಭಾ ಹರೀಶ್, ನಿರ್ದೇಶಕ ನಾಗರಾಜ್, ನಾಟಕಕಾರರಾದ ಕೃಷ್ಣಮೂರ್ತಿ, ನಿರ್ದೇಶಕರಾದ ಸುರೇಶ್, ಕೇಬಲ್ ವಿಜಯ್ ಕುಮಾರ ಹಾಜರಿದ್ದರು.